ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೇಕರಿ ತಿಂಡಿ ಸೇವಿಸುವಾಗ ಹುಷಾರ್‌; ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆ: ವಿಡಿಯೊ ಇಲ್ಲಿದೆ

Viral Video: ಮಹಾರಾಷ್ಟ್ರದ ಮುಂಬೈಯ ಚರ್ನಿ ರೋಡ್‌ನ ಒಪೆರಾ ಹೌಸ್ ಬಳಿ ಇರುವ ಪ್ರಸಿದ್ಧ ತಿವಾರಿ ಬ್ರದರ್ಸ್ ಸ್ವೀಟ್ಸ್ ಮಳಿಗೆಯಿಂದ ಖರೀದಿಸಿದ ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಕಬ್ಬಣದ ಪಿನ್‌ ಪತ್ತೆಯಾಗಿದೆ. ಗ್ರಾಹಕರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಸದ್ಯ ಈ ಘಟನೆ ಆಹಾರ ಸುರಕ್ಷತೆ ಬಗ್ಗೆ ಕಳವಳ ಮೂಡಿಸಿದೆ.

ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆ

ಮುಂಬೈ,ಆ. 3: ಇಂದು ಹೊರಗಿನಿಂದ ಆಹಾರ ಖರೀದಿಸುವ ಮುನ್ನ ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತಿದೆ ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದ ಈ ಘಟನೆ. ಮುಂಬೈಯ ಚರ್ನಿ ರೋಡ್‌ನ ಒಪೆರಾ ಹೌಸ್ ಬಳಿ ಇರುವ ಪ್ರಸಿದ್ಧ ತಿವಾರಿ ಬ್ರದರ್ಸ್ ಸ್ವೀಟ್ಸ್’ ಮಳಿಗೆಯಿಂದ ಖರೀದಿಸಿದ ಸ್ವೀಟ್‌ ಪ್ಯಾಕೇಟ್‌ ಒಂದರಲ್ಲಿ ಲೋಹದ ಪಿನ್ ಪತ್ತೆಯಾಗಿದೆ. ಗ್ರಾಹಕರೊಬ್ಬರು ಖರೀದಿಸಿದ ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಲೋಹದ ಪಿನ್ ಕಂಡು ಬಂದಿದ್ದು, ಅವರು ವಿಡಿಯೊ ಶೇರ್ (Viral News) ಮಾಡಿದ್ದಾರೆ. ಸದ್ಯ ಈ ಘಟನೆ ಗ್ರಾಹಕರ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ.

ಗ್ರಾಹಕ ಪ್ರಣಯ್ ಪಲಾವ್ ಪ್ರಕಾರ, ಮೋತಿಚೂರ್ ಲಡ್ಡು ಮತ್ತು ಕಾಜು ಕತ್ಮಿ ಸೇರಿ ಸಿಹಿ ತಿಂಡಿಗಳನ್ನು ಜುಲೈ 29ರಂದು ಖರೀದಿಸಿದ್ದರು. ಮನೆಗೆ ಬಂದು ಕಾಜು ಕತ್ಲಿ ತಿನ್ನುವಾಗ ತುಂಡಿನೊಳಗೆ ಹುದುಗಿದ್ದ ತುಕ್ಕು ಹಿಡಿದ ಲೋಹದ ಪಿನ್ ಅವರ ಕಣ್ಣಿಗೆ ಬಿದ್ದಿದೆ. ʼʼಮೂರು ವರ್ಷದ ಮಗಳಿಗೆ ಸಿಹಿತಿಂಡಿಯನ್ನು ನೀಡುವ ಮೊದಲು ಈ ವಸ್ತು ಪತ್ತೆಯಾಗಿದ್ದರಿಂದ ದೊಡ್ಡ ಅಘಾತ ತಪ್ಪಿದೆʼʼ ಎಂದು ಪ್ರಣಯ್ ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ:



ಆಹಾರ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನೆಟ್ಟಿಗರು, ಸಿಹಿ ತಿಂಡಿಗಳ ತಯಾರಿಕೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಗುಣಮಟ್ಟಗಳನ್ನು ಪ್ರಶ್ನಿಸಿದ್ದಾರೆ.

ಅಂಗಡಿಯಲ್ಲಿ ಸಿಹಿತಿಂಡಿ ತಯಾರು ಮಾಡುವ ವಿಡಿಯೊವನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಆಹಾರ ತಯಾರಿಸುವ ಪ್ರದೇಶದೊಳಗೆ ಅನೈರ್ಮಲ್ಯ ವಾತಾವರಣವನ್ನು ಈ ದೃಶ್ಯಗಳು ತೋರಿಸುತ್ತವೆ. ಸ್ವೀಟ್ ತಯಾರು ಮಾಡುವ ಆವರಣದೊಳಗೇ ಶೌಚಾಲಯ ಇದೆ. ಗ್ಯಾಸ್ ಒಲೆಯ ಮೇಲಿರುವ ಕಡಾಯಿಯಲ್ಲಿ ನೆಲ ಒರೆಸುವ ಬಟ್ಟೆ ಕಂಡುಬಂದಿದೆ. ಈ ವಿಡಿಯೋ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಈ ವಿಷಯದ ಬಗ್ಗೆ ಪ್ರಣಯ್ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ ದೂರು ನೀಡಿದ್ದಾರೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಪರಿಶೀಲಿಸುವ ನಿರೀಕ್ಷೆಯಿದೆ. ಆರೋಪಗಳು ನಿಜವೆಂದು ಕಂಡುಬಂದಲ್ಲಿ ಈ ಮಳಿಗೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಹೆಚ್ಚಿದೆ.