ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Same-Sex Wedding: ಹಿಂದೂ ಸಂಪ್ರದಾಯದಂತೆ ಸಲಿಂಗಿ ಯುವತಿಯರ ವಿವಾಹ; ಪರ-ವಿರೋಧ ಚರ್ಚೆ ಜೋರಾಯ್ತು!

ಇತ್ತೀಚೆಗೆ ತೃತೀಯಲಿಂಗಿಗಳ ಮದುವೆ ಆಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ಸೇರ್ಪಡೆಯಂತೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಇಬ್ಬರು ಯುವತಿಯರು ಲಿಂಗ ಬದಲಾವಣೆಗೆ ಒಳಗಾದ ನಂತರ ಮದುವೆಯಾಗಿರುವ ವಿಶಿಷ್ಟ ಪ್ರೇಮಕಥೆಯೊಂದು ಸಾಮಾಜಿಕ ಜಾಲತಾಣದ ಬಳಕೆದಾರರ ಗಮನವನ್ನು ಸೆಳೆದಿದೆ. ಈ ಅಸಾಂಪ್ರದಾಯಿಕ ವಿವಾಹವು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಹಿಂದೂ ಸಂಪ್ರದಾಯದಂತೆ ಸಲಿಂಗಿ ಯುವತಿಯರ ವಿವಾಹ!

ತಿಯಾ ಮತ್ತು ಕೆರೊಲ್‌ -

Profile Sushmitha Jain Sep 23, 2025 5:30 PM

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿ (California) ತಿಯಾ ಮತ್ತು ಕೆರೊಲ್‌ ಎಂಬ ಇಬ್ಬರು ಯುವತಿಯರು ಪರಸ್ಪರ ವಿವಾಹವಾಗಿದ್ದಾರೆ. ಸಾಂಪ್ರದಾಯಿಕ ಹಿಂದೂ ವಿಧಿಗಳೊಂದಿಗೆ (Hindu Rituals) ನಡೆಸಿರುವ ಮದುವೆಯ (Wedding) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋದಲ್ಲಿ ತಿಯಾ ಮತ್ತು ಕೆರೊಲ್‌ ತಮ್ಮ ಪೋಷಕರೊಂದಿಗೆ ಸಾಂಪ್ರದಾಯಿಕ ಲೆಹೆಂಗಾ ಧರಿಸಿ ಮದುವೆಯ ಮೆರವಣಿಗೆಯಲ್ಲಿ ನಡೆಯುವುದು, ಹಾರ ಹಾಕಿಕೊಳ್ಳುವುದು, ಪೂಜೆ ನೆರವೇರಿಸುವುದು ಮತ್ತು ಹಿರಿಯರಿಂದ ಆಶೀರ್ವಾದ ಪಡೆಯುವ ದೃಶ್ಯಗಳಿವೆ.

ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದ್ದು, “ನಾನು ಸಲಿಂಗ ವಿವಾಹವನ್ನು ಬೆಂಬಲಿಸುತ್ತೇನೆ, ಆದರೆ ಇಬ್ಬರು ಮಹಿಳೆಯರ ಅಥವಾ ಇಬ್ಬರು ಪುರುಷರ ನಡುವೆ ನಿಖಾ ನಡೆದಿರುವುದನ್ನು ಇನ್ನೂ ನೋಡಿಲ್ಲ. ಹಿಂದೂ ಸಂಪ್ರದಾಯಗಳನ್ನು ಏಕೆ ಬದಲಾಯಿಸಬೇಕು? ಕೋರ್ಟ್‌ ಮದುವೆ ಮಾಡಿಕೊಂಡು ಮುಂದುವರಿಯಿರಿ. ಇದು ಕೇವಲ ಅಪಹಾಸ್ಯವಷ್ಟೇ” ಎಂದು ಒಬ್ಬರು ಒಬ್ಬರು ಬರೆದುಕೊಂಡಿದ್ದಾರೆ.



ಒಬ್ಬ ಬಳಕೆದಾರರು, “ವಿವಾಹವೆಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧ ಮಾತ್ರ. ಈ ರೀತಿಯ ಮೂರ್ಖತನ ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಇದನ್ನು ಒಳ್ಳೆಯ ಸ್ನೇಹ ಎಂದು ಕರೆಯಬಹುದು, ಆದರೆ ವಿವಾಹವಲ್ಲ” ಎಂದು ಟೀಕಿಸಿದರೆ, ಮತ್ತೊಬ್ಬರು, “ಇದರಲ್ಲಿ ತಪ್ಪೇನಿದೆ? ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾದರೆ ತೊಂದರೆಯೇನು? ಇದನ್ನು ವಿರೋಧಿಸಿದರೆ, ಅವರು ಬೇರೆ ಧರ್ಮದ ಸಂಪ್ರದಾಯವನ್ನು ಅನುಸರಿಸುತ್ತಾರೆ. ಅದನ್ನು ಬಯಸುತ್ತೀರಾ?” ಎಂದು ಬೆಂಬಲಿಸಿದ್ದಾರೆ. “ವಿವಾಹವನ್ನು ಪವಿತ್ರವಾಗಿಡಿ, ಇದು ರಂಗಿನ ರೀಮಿಕ್ಸ್‌ ಅಲ್ಲ” ಎಂದು ಒಬ್ಬರು ಕಿಡಿಕಾರಿದರೆ, “ಇದು ಕೇವಲ ಜನರು ತಮ್ಮ ಜೀವನವನ್ನು ಜೀವಿಸುವ ರೀತಿ” ಎಂದು ಇನ್ನೊಬ್ಬರು ಸರಳವಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ದೇವಸ್ಥಾನದಲ್ಲಿ ದೇವರ ಮುಂದೆ ನಿಂತು ಭಕ್ತಿಗೀತೆ ಹಾಡಿದ ಬಾಲಕ; ಹೃದಯಸ್ಪರ್ಶಿ ವಿಡಿಯೊ ವೈರಲ್

ಭಾರತದಲ್ಲಿ ಸಲಿಂಗ ವಿವಾಹ

2023ರ ಆರಂಭದಲ್ಲಿ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಸಿಗಬಹುದೆಂಬ ಆಶಾಭಾವ ಇತ್ತು. ಆದರೆ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿ, ಎಲ್‌ಜಿಬಿಟಿಕ್ಯೂ ದಂಪತಿಗಳಿಗೆ ಹೆಚ್ಚಿನ ಕಾನೂನು ಹಕ್ಕುಗಳನ್ನು ನೀಡಲು ಒಂದು ಸಮಿತಿಯನ್ನು ರಚಿಸುವುದಾಗಿ ತಿಳಿಸಿತು.