ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೈಯಲ್ಲಿ ಹಾವು ಹಿಡಿದುಕೊಂಡು ಬಂದು ರೈಲಿನಲ್ಲಿ ಭಿಕ್ಷೆ ಬೇಡಿದ ಭೂಪ; ವಿಡಿಯೊ ವೈರಲ್

Man Carrying Snake: ವ್ಯಕ್ತಿಯೊಬ್ಬ ಕೈಯಲ್ಲಿ ಹಾವು ಹಿಡಿದುಕೊಂಡು ಬಂದು ರೈಲಿನಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಷಕಾರಿ ಸರ್ಪವಲ್ಲದ ಹಾವನ್ನು ಹಿಡಿದುಕೊಂಡು ರೈಲಿನೊಳಗೆ ಬಂದಿದ್ದಾನೆ. ಹಾವನ್ನು ನೋಡಿ ಭೀತಿಗೊಂಡ ಪ್ರಯಾಣಿಕರು ಆತನಿಗೆ ದುಡ್ಡು ಕೊಟ್ಟಿದ್ದಾರೆ.

ಕೈಯಲ್ಲಿ ಹಾವು ಹಿಡಿದುಕೊಂಡು ಬಂದು ರೈಲಿನಲ್ಲಿ ಭಿಕ್ಷೆ ಬೇಡಿದ ಭೂಪ

-

Priyanka P Priyanka P Sep 23, 2025 3:50 PM

ಇಂದೋರ್: ವ್ಯಕ್ತಿಯೊಬ್ಬ ಹಾವು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಕರಿಂದ ಹಣಕ್ಕಾಗಿ ಭಿಕ್ಷೆ ಬೇಡುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಅಹಮದಾಬಾದ್ ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ ಎಂದು ಹೇಳಲಾದ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ವಿಷಕಾರಿಯಲ್ಲದ ಹಾವನ್ನು (snake) ಕೈಯಲ್ಲಿ ಹಿಡಿದುಕೊಂಡು ಬಂದು ಭಿಕ್ಷೆ ಬೇಡಿದ್ದಾನೆ. ಇದು ಪ್ರಯಾಣಿಕರಲ್ಲಿ ಭಯದ ವಾತಾವರಣ ಉಂಟು ಮಾಡಿತು. ಹೆದರಿದ ಪ್ರಯಾಣಿಕರು (Passengers) ಆತನಿಗೆ ಬೇಗ ಬೇಗೆ ಹಣವನ್ನು ಕೊಟ್ಟಿದ್ದಾರೆ.

ಮಧ್ಯಪ್ರದೇಶದ ಮುಂಗೋಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಷ್ಟಪಟ್ಟು ದುಡಿಯುವ ಬದಲು ಹಾವು ಹಿಡಿದುಕೊಂಡು ಬಂದು ಹಣ ಪಡೆಯುವ ಹೊಸ ವಿಧಾನ ಎಂದು ಎಕ್ಸ್ ಬಳಕೆದಾರರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಯಿತು.

ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ವರ್ತನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಖಂಡಿಸಿದ್ದಾರೆ. ಕೆಲವರು ರೈಲಿನಲ್ಲಿ ಕಿರುಕುಳದ ಇದೇ ರೀತಿಯ ಕಥೆಗಳನ್ನು ಹಂಚಿಕೊಂಡರು. ಇತರರು ಅಂತಹ ನಡವಳಿಕೆಯ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಇದು ಮನರಂಜನೆಯಲ್ಲ, ಇದು ದುರ್ಬಲ ಜನರಿಂದ ಸುಲಿಗೆ ಮಾಡುವ ಹೊಸ ವಿಧಾನ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ವಿಡಿಯೊ ವೀಕ್ಷಿಸಿ:



ಇನ್ನು ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ರೈಲ್ವೆಸೇವಾ ಎಕ್ಸ್ ಖಾತೆಯು, ಬಳಕೆದಾರರಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿತು. ಹಾಗೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಗೆ ಸೂಚಿಸಿತು. ನಾವು ನಿಮ್ಮ ಪ್ರಯಾಣದ ವಿವರಗಳನ್ನು (ಪಿಎನ್‌ಆರ್ / ಯುಟಿಎಸ್ ಸಂಖ್ಯೆ) ಮತ್ತು ಮೊಬೈಲ್ ಸಂಖ್ಯೆ, ಮೇಲಾಗಿ ಡಿಎಂ ಮೂಲಕ ಕೇಳುತ್ತೇವೆ. ನೀವು ನಿಮ್ಮ ದೂರನ್ನು ನೇರವಾಗಿ http://railmadad.indianrailways.gov.in ನಲ್ಲಿ ವ್ಯಕ್ತಪಡಿಸಬಹುದು ಅಥವಾ ತ್ವರಿತ ಪರಿಹಾರಕ್ಕಾಗಿ 139 ಅನ್ನು ಡಯಲ್ ಮಾಡಬಹುದು ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಅಶಿಸ್ತಿನ ವರ್ತನೆಯಲ್ಲಿ, ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರೈಲಿನಲ್ಲಿ ಭಾರತೀಯ ರೈಲ್ವೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಳಕೆದಾರರು ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಕೋರಿದ್ದಾರೆ. ಗುರುತು ಬಹಿರಂಗಪಡಿಸದ ಮಹಿಳೆ, ಟಿಕೆಟ್ ಬಗ್ಗೆ ಕೇಳಿದಾಗ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಜೊತೆ ವಾಗ್ವಾದ ನಡೆಸಿದರು. ಸಿಬ್ಬಂದಿ ಸದಸ್ಯರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Girl Kidnapped: ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದ ವಿದ್ಯಾರ್ಥಿನಿಯ ಲೈವ್‌ ಕಿಡ್ನಾಪ್! 20 ಕಿ.ಮೀ ಚೇಸ್ ಮಾಡಿದ ಜನ