ನವದೆಹಲಿ,ಮಾ.15: ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಡಿಯೊಗಳು ವೈರಲ್ (Viral Video) ಆಗುತ್ತವೆ. ಅದರಲ್ಲಿ ಕೆಲವು ದೃಶ್ಯಗಳು ಗಮನ ಸೆಳೆದರೆ ಇನ್ನು ಕೆಲವು ನಗೆಯಲ್ಲಿ ತೆಲಿಸಿ ಬಿಡುತ್ತವೆ. ಇದೀಗ ಬಾಲಕನೊಬ್ಬನ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಮೊಗದಲ್ಲೊಮ್ಮೆ ನಗು ತರಿಸುವಂತೆ ಮಾಡಿದೆ. ಶಾಲಾ ಸಮವಸ್ತ್ರವನ್ನು ಧರಿಸಿದ ಬಾಲಕ ಶಾಲೆಯ ಬ್ಯಾಗ್ ಧರಿಸಿಯೇ ಮದುವೆಯ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿರುವುದು ಕಂಡು ಬಂದಿದೆ. ಬಾಲಕ ಶಾಲೆಯಿಂದ ಬರುತ್ತಲೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಹೋಮ್ ವರ್ಕ್, ಪರೀಕ್ಷೆ ಅಂತ ಭಯವಿಲ್ಲದೆ ಡ್ಯಾನ್ಸ್ ನಲ್ಲಿ ಮಗ್ನವಾಗಿದ್ದಾನೆ.
ಶಾಲಾ ಬಾಲಕನೊಬ್ಬ ಅನಿರೀಕ್ಷಿತವಾಗಿ ಮದುವೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾನೆ. ಯಾರ ಮದುವೆ ಎಂದು ಬಾಲಕನಿಗೆ ತಿಳಿಯದೆ ಇದ್ದರೂ ಆ ಕ್ಷಣದಲ್ಲಿ ಸೆರೆಹಿಡಿಯಲಾದ ಬಾಲಕನ ಖುಷಿಯನ್ನು ನೋಡಿ ನೆಟ್ಟಿಗರು ನಗುತ್ತಿದ್ದಾರೆ.
ವಿಡಿಯೋ ನೋಡಿ:
ಮದುವೆಯಲ್ಲಿ ಸಾಂಪ್ರದಾಯಿಕ ಮೆರವಣಿಗೆ ಕಂಡು ಬಂದಿದೆ. ಡೋಲು ಮತ್ತು ನಗಾರಿಗಳ ಶಬ್ದಕ್ಕೆ ಬೀದಿಯಲ್ಲಿ ಸಂಬಂಧಿಕರು ನೃತ್ಯ ಮಾಡುತ್ತ ಬರುತ್ತಿದ್ದರು. ಹಬ್ಬದ ಜನಾಂಗೀಯ ಉಡುಗೆಯನ್ನು ಧರಿಸಿದ ಹಲವಾರು ಜನರು ನೃತ್ಯ ಮಾಡುವುದನ್ನು ಕಾಣಬಹುದು. ಈ ಆಚರಣೆಗಳ ನಡುವೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಶಾಲಾ ಬಾಲಕ ಈ ಮಧ್ಯೆ ಇದನ್ನು ಗಮನಿಸುತ್ತಾನೆ ತಾನು ಶಾಲಾ ಸಮವಸ್ತ್ರವನ್ನು ಧರಿಸಿ ಬ್ಯಾಗ್ ಹೊತ್ತುಕೊಂಡೆ ವಿದ್ಯಾರ್ಥಿಯು ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾನೆ.
Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು; ವಿಡಿಯೋ ನೋಡಿ
ಅವನು ಕೂಡ ಮೆರವಣಿಗೆಯ ಮಧ್ಯಕ್ಕೆ ತೆರಳಿ ಮದುವೆಯ ಅತಿಥಿಗಳ ಜೊತೆಗೆ ಸಂತೋಷದಿಂದ ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಆತ ಬಹಳ ಉತ್ಸಾಹ ದಿಂದ ಬ್ಯಾಗ್ ಧರಿಸಿಯೇ ಡ್ಯಾನ್ಸ್ ಮಾಡಿದ್ದಾನೆ. ಒಬ್ಬ ವ್ಯಕ್ತಿ ಹುಡುಗನಿಗೆ ಬ್ಯಾಗ್ ತೆಗೆಯುವಂತೆ ಸನ್ನೆ ಮಾಡುತ್ತಾನೆ. ಅಲ್ಲಿದ್ದ ಸದಸ್ಯರು ಅವನನ್ನು ಪ್ರೋತ್ಸಾಹಿಸಿ ಕೆಲವು ಪುರುಷರು ಶಾಲಾ ಬಾಲಕನೊಂದಿಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಹುಡುಗನ ಮುಗ್ಧತೆಯನ್ನು ಶ್ಲಾಘಿಸಿದ್ದಾರೆ.
ಒಬ್ಬ ಬಳಕೆದಾರರು "ಸಹೋದರ ತನ್ನ ಬಾಲ್ಯವನ್ನು ಆನಂದಿಸುತ್ತಿದ್ದಾನೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಸಣ್ಣ ಪುಟ್ಟ ಘಟನೆಗಳಲ್ಲಿ ಸಂತೋಷ ಕಾಣುವುದನ್ನು ಇಂತಹ ಮಕ್ಕಳಿಂದಲೂ ಕಲಿಯಬಹುದು ಎಂದಿದ್ದಾರೆ.