ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಉದ್ಯೋಗಿಗಳು ಕಾಡಿ ಬೇಡಿ ರಜೆ ಪಡೆಯಬೇಕು; ವಿದೇಶದಲ್ಲಿ ಹಾಗಿಲ್ಲ: ಅನಿವಾಸಿ ಭಾರತೀಯನ ವಿಡಿಯೊ ವೈರಲ್

ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯರೊಬ್ಬರು ಕಂಪನಿಯ ರಜೆ ವಿಚಾರದ ಬಗ್ಗೆ ತಿಳಿಸಿರುವ ವಿಇಯೊ ವೈರಲ್‌ ಆಗಿದೆ. ನಮ್ಮ ದೇಶದಲ್ಲಿ ರಜೆ ಕೇಳುವುದು ಉದ್ಯೋಗಿಗಳಿಗೆ ಮಾನಸಿಕ ಒತ್ತಡ ಸಮಸ್ಯೆ ಉಂಟುಮಾಡುತ್ತಿದೆ. ಒಂದು ರಜೆಗಾಗಿ ಅನೇಕ ಸುಳ್ಳು, ಇಲ್ಲ ಸಲ್ಲದ ನೆಪ ಹೇಳುವ ಸ್ಥಿತಿ ಇದೆ. ನಾನು ಎಲ್ಲ ಕಡೆ ಇದೆ ಥರ ಇದೆ ಎಂದು ಅಂದುಕೊಂಡಿದ್ದೆ. ಆದರೆ ವಿದೇಶಕ್ಕೆ ತೆರಳಿದ ನಂತರ ನನ್ನ ಈ ದೃಷ್ಟಿಕೋನ ಸಂಪೂರ್ಣ ಬದಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ವಿದೇಶದಲ್ಲಿ ರಜೆಗೆ ನೆಪ ಹೇಳುವ ಅಗತ್ಯವಿಲ್ಲ ಎಂದ ಅನಿವಾಸಿ ಭಾರತೀಯ

ನವದೆಹಲಿ, ಡಿ. 8: ನಮ್ಮ ದೇಶದಲ್ಲಿ ಕೆಲಸಕ್ಕೆ ಹೋಗುವ ಬಹುತೇಕರಿಗೆ ಅಗತ್ಯ ಇದ್ದಾಗ ರಜೆ ಕೇಳುವುದೇ ದೊಡ್ಡ ಸಮಸ್ಯೆ ಎನಿಸಿಕೊಂಡಿದೆ. ಇಲ್ಲಿ ರಜೆ ಕೇಳಲು ಅನೇಕ ಕಾರಣಗಳನ್ನು ನೀಡಬೇಕು. ಅವುಗಳು ಸಮಂಜಸ ಅನಿಸಿದರಷ್ಟೇ ರಜೆ ಮಂಜೂರಾಗುತ್ತದೆ. ಆದರೆ ವಿದೇಶದಲ್ಲಿ ಇಷ್ಟೆಲ್ಲ ಅವ್ಯವಸ್ಥೆ ಇಲ್ಲ. ಅಲ್ಲಿ ರಜೆ ಕೇಳಲು ಅನೇಕ ಕಾರಣಗಳನ್ನು ನೀಡುವ ಅಗತ್ಯವಿಲ್ಲ, ಯಾವುದೆ ನೆಪ ಹೇಳುವ ಪ್ರಮೇಯವು ಇಲ್ಲ ಎಂದು ಅನಿವಾಸಿ ಭಾರತೀಯರೊಬ್ಬರು ವಿಡಿಯೊ ಮೂಲಕ ತಿಳಿಸಿದ್ದಾರೆ. ವಾರದ ರಜೆಯ ಹೊರತಾಗಿ ಒಂದು ಹೆಚ್ಚುವರಿ ರಜೆ ಪಡೆಯಲು ಉದ್ಯೋಗಿ ತುಂಬಾ ಬೇಡಿ ಕೊಳ್ಳಬೇಕಾದ ಪರಿಸ್ಥಿತಿ ಭಾರತದಲ್ಲಿದೆ. ಆದರೆ ವಿದೇಶದಲ್ಲಿ ರಜೆಯನ್ನು ಯಾವುದೇ ನೆಪದಿಂದ ಕೇಳಬೇಕಿಲ್ಲ ಎಂಬುದನ್ನು ಅವರು ವಿವರಿಸಿದ್ದು, ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.

ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯರೊಬ್ಬರು ಕಂಪನಿಯ ರಜೆ ವಿಚಾರದ ಬಗ್ಗೆ ವಿಡಿಯೊದಲ್ಲಿ ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ರಜೆ ಕೇಳುವುದು ಉದ್ಯೋಗಿಗಳಿಗೆ ಮಾನಸಿಕ ಒತ್ತಡ ಸಮಸ್ಯೆ ಉಂಟು ಮಾಡುತ್ತಿದೆ. ಒಂದು ರಜೆಗಾಗಿ ಅನೇಕ ಸುಳ್ಳು, ಇಲ್ಲ ಸಲ್ಲದ ನೆಪ ಹೇಳುವ ಸ್ಥಿತಿ ಇದೆ. ನಾನು ಎಲ್ಲ ಕಡೆ ಇದೆ ಥರ ಇದೆ ಎಂದು ಅಂದುಕೊಂಡಿದ್ದೆ. ಆದರೆ ವಿದೇಶಕ್ಕೆ ತೆರಳಿದ ನಂತರ ನನ್ನ ಈ ದೃಷ್ಟಿಕೋನ ಸಂಪೂರ್ಣ ಬದಲಾಯಿತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

ವಿಡಿಯೊ ನೋಡಿ:



ಭಾರತದಲ್ಲಿ ಉದ್ಯೋಗಿಗಳು ರಜೆ ತೆಗೆದುಕೊಳ್ಳಲು ಅನೇಕ ಕಾರಣಗಳನ್ನು ಹೇಳಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸಿಂಗಾಪುರದಲ್ಲಿ ಉತ್ತಮ ವ್ಯವಸ್ಥೆ ಇದೆ. ಇಲ್ಲಿ ಪರ್ಸನಲ್ ಸ್ಪೇಸ್‌ಗೆ ಬಹಳ ಗೌರವವಿದೆ. ಇಲ್ಲಿ ರಜೆ ಕೇಳುವಾಗ ರೀಸನ್ ನೀಡುವ ಅಗತ್ಯವಿಲ್ಲ. ತಾವು ತಮ್ಮ ಕಂಪ್ಯೂಟರ್ ಸಿಸ್ಟಂ ಲಾಗ್ ಆಫ್ ಮಾಡುವಾಗ ತಮ್ಮ ತಂಡಕ್ಕೆ ಸರಳವಾಗಿ ತಿಳಿಸುತ್ತಾರೆ. ಈ ಮೂಲಕ ರಜೆಯನ್ನು ಇರುವುದುನನು ಸೂಚಿಸುತ್ತಾರೆ. ಇದೇ ವ್ಯವಸ್ಥೆ ಎಲ್ಲ ಕಡೆ ಬಂದರೆ ಬಹಳ ಉತ್ತಮ ಎಂದು ಅವರು ವಿಡಿಯೊದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ

ಭಾರತದಲ್ಲಿ ಕೆಲಸ ಮಾಡುವವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಎಷ್ಟೋ ಸಲ ರಜೆ ಅವಧಿಯಲ್ಲಿ ಕರೆ ಮಾಡಿ ಕೆಲಸದ ಕೆಲವು ಅಪ್‌ಡೇಟ್‌ ಕೇಳುವುದು ಇದೆ. ಕಂಪನಿ ಕೆಲಸ ಮುಗಿಯದಿದ್ದರೆ ಮನೆಯಲ್ಲಿಯೂ ಮುಂದುವರಿಸುವಂತೆ ಹೇಳುವುದೂ ಇದೆ. ಇನ್ನು ಕೆಲವು ಸಲ ಆಫೀಸ್ ಅವಧಿ ಮುಗಿದ ಮೇಲೆಯೂ ಓವರ್ ಟೈಂ ಕೆಲಸ ಮಾಡಿಸಿಕೊಳ್ಳುತ್ತ ಶೋಷಣೆ ಮಾಡುತ್ತಾರೆ. ಇವೆಲ್ಲದರ ನಡುವೆ ರಜೆ ಕೇಳುವಾಗಲೂ ಕೆಲಸ ಮಾಡುವವರು ಭಿಕ್ಷೆ ಬೇಡಿದಂತೆ ಬೇಡಿಕೊಳ್ಳಬೇಕು. ನೀವು ರಾತ್ರಿ 8 ಗಂಟೆಯ ನಂತರವೂ ಕಚೇರಿಯಲ್ಲಿ ಕುಳಿತು ಕಷ್ಟಪಟ್ಟು ನಿಮ್ಮಿಷ್ಟದಂತೆ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರು ನಿಮ್ಮನ್ನು ಅವರಿಗೆ ಬೇಕಾದಂತೆ ದುಡಿಸಿಕೊಳ್ಳುತ್ತಾ ಶೋಷಿಸುತ್ತಿದ್ದಾರೆ ಎಂದು ಎನ್‌ಆರ್‌ಐ ಹೇಳಿದ್ದಾರೆ.

ಇಲ್ಲಿ ಸಿಂಗಾಪುರದಲ್ಲಿ ನಾನು ರಜೆ ಕೇಳುವುದಿಲ್ಲ. ಬದಲಾಗಿ ನಾನು ರಜೆ ಮಾಡುದಾಗಿ ತಿಳಿಸುತ್ತೇನೆ. ಲಾಗ್ ಆಫ್ ಆಗುತ್ತಿದ್ದೇನೆ, ಸೋಮವಾರ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಮೇಲ್ ಕಳಿಸಿ ಲಾಗ್ ಆಫ್ ಆಗುತ್ತೇನೆ. ಸಂಜೆ 6 ಗಂಟೆಯ ನಂತರ ಕಚೇರಿಯ ಯಾವ ಫೋನ್ ಕರೆ ಬರಲಾರದು. ನನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಇಲ್ಲಿ ಗೌರವಿಸುತ್ತಾರೆ ಎಂದು ಹೇಳಿದ್ದಾರೆ. ಅವರ ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳ ಹಿತಾಸಕ್ತಿಗಾಗಿ ಇಂತಹ ನಿಯಮ ಜಾರಿಗೆ ತಂದರೆ ಬಹಳ ಉತ್ತಮ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.