ನವದೆಹಲಿ,ಅ.10: ಸಾರ್ವಜನಿಕ ಸ್ಥಳದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ವರ್ತನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ದೆಹಲಿ ಮೆಟ್ರೋದಲ್ಲಿ ಮಹಿಳೆಯೊಬ್ಬರು ಸ್ಕೀನ್ ಕೇರ್ ಮಾಡುತ್ತಿರುವ ದೃಶ್ಯವೊಂದು ವೈರಲ್ (Viral News) ಆಗಿದೆ. ತಲೆಗೆ ಟವಲ್ ಸುತ್ತಿಕೊಂಡು, ಕಣ್ಣಿನ ಕೆಳಗೆ ಐ-ಪ್ಯಾಚ್‌ಗಳನ್ನು ಅಳವಡಿಸಿಕೊಂಡು ಪ್ರಯಾಣ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲೂ ಚರ್ಮದ ಆರೈಕೆ ನಿರ್ವಹಿಸುತ್ತಿರುವ ಮಹಿಳೆ ವಿರುದ್ಧ ಪರ ವಿರೋಧದ ಚರ್ಚೆಗಳು ಉಂಟಾಗಿವೆ.
ದೆಹಲಿ ಮೆಟ್ರೋದಂತೆ ಕಾಣುವ ಸ್ಥಳದಲ್ಲಿ ಮಹಿಳೆ ಚರ್ಮದ ಆರೈಕೆ ಮಾಡಿದ್ದು ಬಾತ್ರೋಬ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಘಟನೆಯೂ ಸಾರ್ವಜನಿಕ ಶಿಷ್ಟಾಚಾರ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ವಿಡಿಯೋ ನೋಡಿ:
ದೆಹಲಿ ಮೆಟ್ರೋದ ಹಳದಿ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ವಿಡಿಯೊದಲ್ಲಿ ಮೆಟ್ರೋದಲ್ಲಿ ತಲೆಗೆ ಟವಲ್ ಸುತ್ತಿಕೊಂಡು, ಪಾದಗಳ ಮೇಲೆ ಬಾತ್ರೂಮ್ ಚಪ್ಪಲಿಗಳು ಮತ್ತು ಕಣ್ಣಿನ ಕೆಳಗೆ ಐ ಪ್ಯಾಚ್ ಮಾಡಿ ಸೌಂದರ್ಯ ವರ್ಧಕ ದಿನಚರಿಯಲ್ಲಿ ಮಹಿಳೆ ತೊಡಗಿದ್ದರು. ಸುತ್ತಲೂ ಕುಳಿತಿದ್ದ ಪ್ರಯಾಣಿಕರು ಅವರನ್ನೇ ಅಚ್ಚರಿಯಿಂದ ನೋಡುತ್ತಿದ್ದರು.
ಬಳಕೆದಾರರು ಸಾರ್ವಜನಿಕ ಸ್ಥಳದಲ್ಲಿ ಇಂತಹ ನಡವಳಿಕೆ ಸರಿಯೇ? ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ವರು ಇದು ನಿಮ್ಮ ಮನೆಯೇ? ಸಾರ್ವಜನಿಕ ಸ್ಥಳಗಳಲ್ಲಿ ಈ ಕೆಲಸವನ್ನು ಮಾಡಲು ಅವರಿಗೆ ಯಾರು ಅವಕಾಶ ನೀಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಪ್ರಾಮಾಣಿಕವಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ, ಇಲ್ಲಿ ಯಾವ ನಿಯಮವನ್ನು ಮುರಿಯಲಾಗಿದೆ? ಲಂಡನ್ ಅಥವಾ ನ್ಯೂಯಾರ್ಕ್ ಮೆಟ್ರೋದಲ್ಲಿ ಇಂತಹವುಗಳನ್ನು ಯಾರೂ ಗಂಭೀರವಾಗಿ ಪರಿಗಣನೆ ಮಾಡುವುದಿಲ್ಲ ಅಂದರು.