ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುವ ಕಾರಿನ ಮಿರರ್ ಮೇಲೆ ಹರಿದು ಬಂತು ಹಾವು! ಭಯಾನಕ ವಿಡಿಯೊ ವೈರಲ್

ತಮಿಳುನಾಡಿನ ನಾಮಕ್ಕಲ್-ಸೇಲಂ ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿನ ಮಿರರ್‌ ನಲ್ಲಿ ಹಾವೊಂದು ಹೊರಬಂದಿದ್ದು ಚಾಲಕನೇ ತಬ್ಬಿಬ್ಬಾಗಿದ್ದಾನೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಚಾಲಕನೊಬ್ಬ ತನ್ನ ಕಾರಿನ ಪಕ್ಕದ ಕನ್ನಡಿಯಲ್ಲಿ ಹಾವು ಅಡಗಿ ಕೊಂಡಿರುವುದನ್ನು ಕಂಡ ನಂತರ ವಾಹನ ಸವಾರ ಬೆಚ್ಚಿಬಿದ್ದಿದ್ದಾರೆ..

ಚಲಿಸುವ ಕಾರಿನ ಮಿರರ್‌ನಿಂದ ಹೊರ ಬಂದ ಹಾವು

ಚೆನ್ನೈ: ದೂರದಲ್ಲಿ ಹಾವು ಕಂಡೊಂಡನೆ ನಾವು ಭಯ ಭೀತರಾಗುತ್ತೇವೆ. ಅಂತದರಲ್ಲಿ ಕಾರಿನೊಳಗೇ ಹಾವು ಬಂದು ಕುಳಿತರೆ ಪ್ರಯಾಣಿಕನ ಪರಿಸ್ಥಿತಿ ಏನಾಗಬಹುದು..ಇದೀಗ ಅಂತ ಹುದೇ ಘಟನೆಯೊಂದು ನಡೆದಿದ್ದು ಕಾರು ಮಾಲೀಕನೇ ಬೆಚ್ಚಿ ಬೀಳಿಸುವಂತಹ ದೃಶ್ಯ ಕಂಡು ಬಂದಿದೆ. ತಮಿಳುನಾಡಿನ ನಾಮಕ್ಕಲ್-ಸೇಲಂ ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿನ ಮಿರರ್‌ ನಲ್ಲಿ ಹಾವೊಂದು ಹೊರಬಂದಿದ್ದು ಚಾಲಕನೇ ತಬ್ಬಿಬ್ಬಾಗಿದ್ದಾನೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದೆ.

ತಮಿಳುನಾಡಿನ ನಮಕ್ಕಲ್-ಸೇಲಂ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಾಲಕನೊಬ್ಬ ತನ್ನ ಕಾರಿನ ಪಕ್ಕದ ಕನ್ನಡಿಯಲ್ಲಿ ಹಾವು ಅಡಗಿಕೊಂಡಿರುವುದನ್ನು ಕಂಡ ನಂತರ ವಾಹನ ಸವಾರ ಬೆಚ್ಚಿ ಬಿದ್ದಿದ್ದಾರೆ. ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರಿನ ಚಾಲಕ ತಮ್ಮ ಪಕ್ಕದ ಮಿರರ್‌ನ ಬಳಿ ವಿಚಿತ್ರ ಚಲನೆ ಯೊಂದನ್ನು ಗಮನಿಸಿದ್ದಾರೆ. ಭಯದಿಂದ ನೋಡಿದಾಗ, ಮಿರರ್‌ನ ಹಿಂಭಾಗದಲ್ಲಿ ಅಡಗಿದ್ದ ಹಾವೊಂದು ಹೊರಬರಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದೆ.

ಚಲಿಸುವ ಕಾರಿನ ಮಿರರ್‌ನಿಂದ ಹೊರ ಬಂದ ಹಾವು:



ಕೂಡಲೇ ಚಾಲಕ ಎಚ್ಚೆತ್ತುಕೊಂಡು ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಸುರಕ್ಷಿತವಾಗಿ ಹೊರ ಬಂದಿ ದ್ದಾರೆ. ರೆಕಾರ್ಡ್ ಮಾಡಿರುವ ಈ ವಿಡಿಯೋದಲ್ಲಿ, ಆ ಹಾವು ಮಿರರ್‌ನಿಂದ ಹೊರಬರಲು ವಿಫಲ ವಾಗಿದ್ದು ಕಾರಿನ ಮೀರರ್ ಒಳಗೆಯೇ ತಿರುಗಾಡುತ್ತಿರುವುದು ಕಾಣುತ್ತದೆ.

ವಿಡಿಯೋ ನೋಡಿದ ನೆಟ್ಟಿಗರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.ಚಾಲಕನು ವನ್ಯಜೀವಿ ರಕ್ಷ ಕರಿಗೆ ಮಾಹಿತಿ ನೀಡಿದ ನಂತರ, ಸ್ಥಳಕ್ಕೆ ಬಂದ ರಕ್ಷಕ ಸಿಬ್ಬಂದಿ ಹಾವನ್ನು ಹಿಡಿದು, ಅದನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭ ವಿಸಿಲ್ಲ. ಸದ್ಯ ಚಳಿ ಮತ್ತು ಮಳೆಗಾಲದ ವಾತಾವರಣ ಇರುವ ಕಾರಣ, ವಾಹನ ಸವಾರರು ಹೆಚ್ಚು ಜಾಗರೂಕರಾಗಿರಬೇಕು ಎಂದು ಅರಣ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬೆಚ್ಚಗಿನ ಆಶ್ರಯಕ್ಕಾಗಿ ಹಾವುಗಳು ನಿಲುಗಡೆ ಮಾಡಿದ ವಾಹನಗಳ ಎಂಜಿನ್ ಹಾಗೂ ವಾಹನಗಳ ಸೈಡ್ ಮಿರರ್‌ಗಳಂತಹ ಸಣ್ಣ ಜಾಗಗಳಲ್ಲಿ ಅಡಗಿ ಕೊಳ್ಳುತ್ತವೆ. ಆದ್ದರಿಂದ, ವಾಹನವನ್ನು ಚಲಾಯಿಸುವ ಮೊದಲು ಸರಿಯಾಗಿ ಪರಿಶೀಲಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನು ಓದಿ:Viral Video: ತ್ಯಾಜ್ಯ ವಸ್ತುವಿನಿಂದ ಕಡಿಮೆ ಖರ್ಚಿನಲ್ಲಿ ಕಾಂತಾರ ಚಿತ್ರದ ಹುಲಿಯ ರೀ ಕ್ರಿಯೇಶನ್‌!ಕಲಾವಿದ ಕೈಚಳಕದ ವಿಡಿಯೊ ಇಲ್ಲಿದೆ

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ, ನೆಟಿಜನ್‌ಗಳು ತಮಗೆ ಈ ಹಿಂದೆ ಆದ ಅನುಭವ ಗಳನ್ನು ಹಂಚಿಕೊಂಡಿದ್ದಾರೆ‌. ಒಬ್ಬ ಬಳಕೆದಾರರು "ಈ ಘಟನೆ ನನ್ನ ಬೈಕ್‌ನಲ್ಲಿ ಪ್ರಯಾಣಿಸುವಾಗ ಸಂಭವಿಸಿದೆ. ನಾನು 10 ವರ್ಷಗಳಿಗೂ ಹೆಚ್ಚು ಕಾಲ ಬೈಕನ್ನು ಮುಟ್ಟಲು ಧೈರ್ಯ ಮಾಡಲಿಲ್ಲ ಎಂದು ಬರೆದುಕೊಂಡಿದ್ದಾರೆ‌. ಮತ್ತೊಬ್ಬ ಬಳಕೆ ದಾರರು, "ಎಚ್ಚರಿಕೆ ನೀಡಿದ್ದಕ್ಕಾಗಿ ಧನ್ಯವಾದಗಳು, ಈಗ ಚಾಲನೆ ಮಾಡುವ ಮೊದಲು ಖಂಡಿತವಾಗಿಯೂ ನನ್ನ ಕಾರನ್ನು ಪರಿಶೀಲಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.