ಜೈಪುರ: ರಾಜಸ್ಥಾನದ ಸಿಕಾರ್ ಜಿಲ್ಲೆಯ ಸೈನಿಕನೊಬ್ಬನ ಮದುವೆ ಆಮಂತ್ರಣ ಪತ್ರಿಕೆಯೊಂದು ʼಆಪರೇಷನ್ ಸಿಂದೂರ್ʼ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಅರೇ ಇದೇನಿದು ಎಂದು ನೀವು ಕೂಡ ಆಶ್ಚರ್ಯ ಪಡುತ್ತಿದ್ದೀರಾ...? ಹೌದು ಸೈನಿಕ ಅಮಿತ್ ಸಿಂಗ್ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಈ ತಿಂಗಳ ಆರಂಭದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಆತ ಮತ್ತು ಅವನ ಇಬ್ಬರು ಸಹೋದರರನ್ನು ನಿಯೋಜಿಸಲಾಗಿದ್ದ ಮಿಲಿಟರಿ ಕಾರ್ಯಾಚರಣೆಯ ಹೆಸರನ್ನು ಸೇರಿಸಲಾಗಿದೆ. ಈ ಮೂಲಕ ಆ ಕುಟುಂಬ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದ್ದು, ಇದು ನೆಟ್ಟಿಗರ ಮೆಚ್ಚುಗೆಯನ್ನು ಪಡೆದಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಆಪರೇಷನ್ ಸಿಂದೂರ್ ಅನ್ನು ಶುರುಮಾಡಿತ್ತು. ಇದರಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿತ್ತು.
ರೈತ ಜಗದೀಶ್ ಸಿಂಗ್ ಶೇಖಾವತ್, ʼಆಪರೇಷನ್ ಸಿಂದೂರ್ʼ ಮಿಲಿಟರಿ ಕಾರ್ಯಾಚರಣೆಯಲ್ಲಿ ತಮ್ಮ ಇಬ್ಬರು ಮಕ್ಕಳ ಸಾಹಸದ ಬಗ್ಗೆ ಅಪಾರ ಹೆಮ್ಮೆ ಪಟ್ಟಿದ್ದಾರೆ. ಹೀಗಾಗಿ ಮಗ ಅಮಿತ್ ಸಿಂಗ್ ಮದುವೆ ಆಮಂತ್ರಣ ಪತ್ರಿಕೆಯಲ್ಲಿ "ನಮ್ಮ ಶಕ್ತಿ, ನಮ್ಮ ಹೆಮ್ಮೆ - ಆಪರೇಷನ್ ಸಿಂದೂರ್‌ನ ಯೋಧರು ತಮ್ಮ ಸಹೋದರನ ಮದುವೆಗೆ ನಿಮ್ಮನ್ನು ಸ್ವಾಗತಿಸುತ್ತಿದ್ದಾರೆ" ಎಂಬ ವಿಶೇಷ ಸಂದೇಶವನ್ನು ಪ್ರಿಂಟ್ ಮಾಡಿಸಿದ್ದಾರೆ.ಈ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ನೆಟ್ಟಿಗರಂತೂ ಈ ಮದುವೆ ಆಮಂತ್ರಣ ಪತ್ರಿಕೆ ನೋಡಿ ಖುಷಿಯಾಗಿ ಹಾಡಿ ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಕಾಡಿನಲ್ಲಿ ಅಲೆದಾಡುತ್ತಿದ್ದ ಪ್ರವಾಸಿಗರಿಗೆ ಸಿಕ್ತು ಹಳೆಕಾಲದ ನಿಧಿ; ಈ ಸಂಪತ್ತಿನ ಮೌಲ್ಯ ಎಷ್ಟು ಗೊತ್ತೆ?
ಮೇ 28 ರಾಜಸ್ಥಾನದ ಸಿಕಾರ್ ಜಿಲ್ಲೆಯ ಸೈನಿಕನೊಬ್ಬನ ಮದುವೆ ಆಮಂತ್ರಣ ಪತ್ರಿಕೆಯೊಂದು ʼಆಪರೇಷನ್ ಸಿಂದೂರ್ʼ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.ಅರೇ ಇದೇನಿದು ಎಂದು ನೀವು ಕೂಡ ಆಶ್ಚರ್ಯ ಪಡುತ್ತಿದ್ದೀರಾ...? ಹೌದು ಸೈನಿಕ ಅಮಿತ್ ಸಿಂಗ್ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಈ ತಿಂಗಳ ಆರಂಭದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಆತ ಮತ್ತು ಅವನ ಇಬ್ಬರು ಸಹೋದರರನ್ನು ನಿಯೋಜಿಸಲಾಗಿದ್ದ ಮಿಲಿಟರಿ ಕಾರ್ಯಾಚರಣೆಯ ಹೆಸರನ್ನು ಸೇರಿಸಲಾಗಿದೆ. ಈ ಮೂಲಕ ಆ ಕುಟುಂಬ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದ್ದು, ಇದು ನೆಟ್ಟಿಗರ ಮೆಚ್ಚುಗೆಯನ್ನು ಪಡೆದಿದೆ.