ದೆಹಲಿ: ನಗರದ ಹಲವು ಬೀದಿಗಳಲ್ಲಿ ರಸ್ತೆಗುಂಡಿಗಳಿದ್ದು, ಜನರು ಆ ಗುಂಡಿಗಳಲ್ಲೇ ಓಡಾಡಿ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ, ದೆಹಲಿಯ (Delhi) ಕರೋಲ್ ಬಾಗ್‌ನ ಹಾಥಿ ವಾಲಾ ಚೌಕ್‌ನಲ್ಲಿ ಇತ್ತೀಚೆಗೆ ಕಂಡುಬಂದ ಒಂದು ರಸ್ತೆಗುಂಡಿಯು ಜನರನ್ನು ರಂಜಿಸಿದೆ. ಅದೇನೆಂದರೆ, ರಸ್ತೆ ಮಧ್ಯ ಹೃದಯದ ಆಕಾರದ ಗುಂಡಿ ನಿರ್ಮಾಣವಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಇದರ ಮೀಮ್ಸ್ ಹಾಗೂ ಜೋಕ್‍ಗಳು ಹರಿದಾಡುತ್ತಿವೆ.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹಂಚಿಕೊಂಡಿರುವ ಗುಂಡಿಯ ಚಿತ್ರವನ್ನು, “ಇಲ್ಲಿ ಯಾರದ್ದೋ ಹೃದಯ ಬಿದ್ದಿದೆ, ಬಂದು ತೆಗೆದುಕೊಂಡು ಹೋಗಿ” ಎಂದು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕೆಲವೊಬ್ಬರು ದೆಹಲಿಯ ಹೊಂಡ-ಗುಂಡಿ ರಸ್ತೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ದೆಹಲಿಯಲ್ಲಿ ಪ್ರೀತಿ ಅಕ್ಷರಶಃ ಮುಳುಗುತ್ತಿದೆ ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಡಿದರು.
ದೆಹಲಿಯಾದ್ಯಂತ ಗುಂಡಿಗಳು ಸಾಮಾನ್ಯ ತೊಂದರೆಯಾಗಿದ್ದರೂ, ಈ ರಸ್ತೆ ಗುಂಡಿ ಮಾತ್ರ ಅದರ ವಿಶಿಷ್ಟ ಹೃದಯದಂತಹ ಆಕಾರಕ್ಕಾಗಿ ಎದ್ದು ಕಾಣುತ್ತದೆ. ನಿವಾಸಿಗಳು ಮತ್ತು ಪ್ರವಾಸಿಗರಿಗೆ, ಇದು ಒಂದು ಕುತೂಹಲಕಾರಿ ದೃಶ್ಯ ಮತ್ತು ಅನಿರೀಕ್ಷಿತ ಮನರಂಜನೆಯಾಗಿದೆ ಮೂಲವಾಗಿದೆ. ಇದು ಸ್ಥಳೀಯ ಆಕರ್ಷಣೆಯಾಗಿ ಮಾರ್ಪಟ್ಟಿದೆ.
ಹೃದಯಾಕಾರದ ಈ ಗುಂಡಿ ರಸ್ತೆಯು ಸುರಕ್ಷತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ತಮಾಷೆಯ ಹೊರತಾಗಿಯೂ, ರಸ್ತೆ ಗುಂಡಿ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅದನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ.
ವಿಡಿಯೊ ವೀಕ್ಷಿಸಿ:
ಗುಂಡಿ ಸಮಸ್ಯೆ ಮುಂದುವರೆದಿದೆ
ಎರಡು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ನಗರದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದರೂ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ನಗರದ ರಸ್ತೆಗಳಲ್ಲಿ ನಿರಂತರ ಗುಂಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.
ಆಂತರಿಕ ಸಭೆಗಳ ಸಮಯದಲ್ಲಿ, ರಸ್ತೆಗಳ ಸ್ಥಿತಿಯ ಬಗ್ಗೆ ನಿವಾಸಿಗಳಿಂದ ಹಲವಾರು ದೂರುಗಳು ಬಂದಿವೆ ಎಂದು ಉಲ್ಲೇಖಿಸಿ, ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳಿಗೆ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆಯನ್ನು ತಕ್ಷಣವೇ ಪುನರಾರಂಭಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Viral Video: ಛೀ...ಇದೆಂಥಾ ಕರ್ಮ! ಪಾತ್ರೆಗಳ ಮೇಲೆ ಮೂತ್ರ ವಿಸರ್ಜಿಸಿದ ಮಹಿಳೆ- ಕಿಡಿಗೇಡಿ ಕೃತ್ಯ ಕ್ಯಾಮರಾದಲ್ಲಿ ಸೆರೆ
ನಗರದ ಹಲವಾರು ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಹೀಗಾಗಿ ನಗರದ ಗುಂಡಿಗಳನ್ನು ಸರಿಪಡಿಸಲು ಇದೀಗ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.