ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಪಾನ್‌ನಲ್ಲಿ ಭಾರತೀಯ ಪ್ರವಾಸಿಗನಿಗೆ ಸಿಕ್ಕ ಪ್ರೀತಿಯ ಆತಿಥ್ಯ: ನೀರು ಕೇಳಿದಾಗ ಜ್ಯೂಸ್‌ ಕೊಟ್ಟು ಸತ್ಕರಿಸಿದ ವೃದ್ಧ ದಂಪತಿ

Viral News: ಜಪಾನ್ ಕೂಡ ಆತಿಥ್ಯ ನೀಡುವಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಜಪಾನ್‌ನ ದ್ವೀಪವೊಂದರಲ್ಲಿ ಕಾಲ ಕಳೆಯುತ್ತಿದ್ದ ಭಾರತೀಯ ಪ್ರವಾಸಿಗನಿಗೆ ಅಲ್ಲಿನ ಸ್ಥಳೀಯ ವೃದ್ಧ ದಂಪತಿ ತೋರಿದ ಕಾಳಜಿಯ ದೃಶ್ಯ ಎಲ್ಲರ ಮನ ಗೆದ್ದಿದೆ. ಕುಡಿಯುವ ನೀರಿಗಾಗಿ ಆರಂಭವಾದ ಹುಡುಕಾಟ, ಕೊನೆಗೆ ಭರ್ಜರಿ ಮಧ್ಯಾಹ್ನದ ಊಟದವರೆಗೆ ಈ ಸ್ನೇಹವೇ ಮುಂದುವರಿದಿದೆ.

ಜಪಾನ್‌ನಲ್ಲಿ ಭಾರತೀಯ ಯುವಕನಿಗೆ ವಿಶೇಷ ಆತಿಥ್ಯ ನೀಡಿದ ವೃದ್ಧ ದಂಪತಿ

ಟೊಕಿಯೋ, ಜೂ. 3: ಭಾರತವು ಆತಿಥ್ಯಕ್ಕೆ ಹೆಸರುವಾಸಿ. ದೇಶಕ್ಕೆ ಆಗಮಿಸಿದ ವಿದೇಶಿಗರಿಗೆ ಇಲ್ಲಿನ ಜನರು ವಿಶೇಷ ಆತಿಥ್ಯವನ್ನು ನೀಡಿ ಆರೈಕೆ ಮಾಡುತ್ತಾರೆ. ಈ ಬಗ್ಗೆ ಹಲವು ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೊ ಶೇರ್ (Viral News) ಮಾಡಿಕೊಂಡವರು ಇದ್ದಾರೆ. ಇದೀಗ ಜಪಾನ್ ಕೂಡ ಆತಿಥ್ಯ ನೀಡುವಲ್ಲಿ ಹಿಂದೆ ಇಲ್ಲ ಅನ್ನೋದನ್ನು ತೋರಿಸಿಕೊಟ್ಟಿದೆ. ದೂರದ ದ್ವೀಪವೊಂದರಲ್ಲಿ ಕಾಲ ಕಳೆಯುತ್ತಿದ್ದ ಭಾರತೀಯ ಪ್ರವಾಸಿಗನಿಗೆ ಅಲ್ಲಿನ ಸ್ಥಳೀಯ ವೃದ್ಧ ದಂಪತಿ ತೋರಿದ ಕಾಳಜಿಯ ದೃಶ್ಯ ಎಲ್ಲರ ಮನ ಗೆದ್ದಿದೆ. ಕುಡಿಯುವ ನೀರಿಗಾಗಿ ಆರಂಭವಾದ ಹುಡುಕಾಟ, ಕೊನೆಗೆ ಭರ್ಜರಿ ಮಧ್ಯಾಹ್ನದ ಊಟದವರೆಗೆ ಮುಂದುವರಿದಿದೆ.

ಭಾರತೀಯ ಕಂಟೆಂಟ್ ಕ್ರಿಯೇಟರ್ ಆದಿತ್ಯ ಪರ್ಖಿ ಜಪಾನ್ ಪ್ರವಾಸದ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ದೂರದ ದ್ವೀಪವೊಂದರಲ್ಲಿದ್ದ ಅವರಿಗೆ ಅಲ್ಲಿನ ಸ್ಥಳೀಯ ವೃದ್ಧ ದಂಪತಿ ತೋರಿದ ಪ್ರೀತಿ, ಆತಿಥ್ಯವು ಎಲ್ಲರ ಹೃದಯ ಗೆದ್ದಿದೆ.

ವಿಡಿಯೊ ನೋಡಿ:



ಜಪಾನ್‌ನ ದ್ವೀಪದಲ್ಲಿ ಹೈಕಿಂಗ್ ಮಾಡುತ್ತಿದ್ದಾಗ ಯುವಕನ ಬಳಿ ಕುಡಿಯುವ ನೀರು ಖಾಲಿಯಾಗಿತ್ತು. ಹತ್ತಿರದಲ್ಲಿ ಯಾವುದೇ ಅಂಗಡಿಗಳು ತೆರೆಯದೇ ಇದ್ದಾಗ ಅವರು ಸ್ಥಳೀಯ ಹಳ್ಳಿಯೊಂದರ ಮನೆಯ ಬಾಗಿಲು ತಟ್ಟಿದ್ದಾರೆ. ನಯವಾಗಿ ಸಹಾಯ ಕೇಳುತ್ತ ಕುಡಿಯುವ ನೀರು ಸಿಗುವಂತಹ ಕೆಫೆ ಯಾವುದಾದರೂ ಹತ್ತಿರದಲ್ಲಿದೆಯೇ? ಎಂದು ಅತ್ಯಂತ ವಿನಯದಿಂದ ವಿಚಾರಿಸಿದ್ದಾರೆ. ಆದರೆ ಆ ವೃದ್ಧ ದಂಪತಿ ಆದಿತ್ಯ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು, ಒಳಗೆ ಹೋಗಿ ಜ್ಯೂಸ್ ತಂದುಕೊಟ್ಟು ಸತ್ಕರಿಸಿದರು.

ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಕೇವಲ ಈ ಸ್ನೇಹಪರ ವಿನಿಮಯವು ಮನೆ ಬಾಗಿಲಿನಲ್ಲಿ ಕೊನೆಗೊಳ್ಳಲಿಲ್ಲ. ಜಪಾನ್‌ನಲ್ಲಿ ಅವರ ಪ್ರಯಾಣಗಳು, ಕೆಲಸ ಮತ್ತು ಅನುಭವಗಳ ಬಗ್ಗೆ ಮಾತನಾಡುತ್ತ ಸಮಯ ಕಳೆದರು. ಅಷ್ಟಕ್ಕೇ ನಿಲ್ಲದ ಇವರ ಪರಿಚಯ ಮತ್ತೂ ಮುಂದುವರಿದಿದೆ. ವೃದ್ಧನ ಪತ್ನಿ, ಪ್ರವಾಸದಿಂದ ದಣಿದಿದ್ದ ಆದಿತ್ಯ ಅವರಿಗಾಗಿ ಪ್ರೀತಿಯಿಂದ ಮಧ್ಯಾಹ್ನದ ಅಡುಗೆ ಸಿದ್ಧಪಡಿಸಿ ಬಡಿಸಿದ್ದಾರೆ. ಕೊನೆಗೆ ಪ್ರವಾಸ ಮುಂದುವರಿಸಲು ಹೊರಟ ಆದಿತ್ಯ ಅವರನ್ನು ಶುಭ ಹಾರೈಸಿ ಕಳುಹಿಸಿ ಕೊಟ್ಟಿದ್ದಾರೆ.

ಈ ಅನುಭವವನ್ನು ಪ್ರತಿಬಿಂಬಿಸುತ್ತ ಆದಿತ್ಯ, "ನಾನು ನೀರು ಕೇಳಿದೆ" ಎಂಬ ಸರಳ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ಜಪಾನ್ ದಂಪತಿಯ ಹೃದಯವಂತಿಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಇದು ನಿಜವಾದ ಬಾಂಧವ್ಯʼʼ ಎಂದು ಬರೆದುಕೊಂಡಿದ್ದಾರೆ.