ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್: ವಿಡಿಯೊ ವೈರಲ್

Viral Video: ಭದ್ರತಾ ಸಿಬ್ಬಂದಿಯೊಬ್ಬರು ರಾತ್ರಿ ಪಾಳಿಯಲ್ಲಿ ಸೊಳ್ಳೆ ಪರದೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯ ವೊಂದು ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ವೊಬ್ಬರು ಸೊಳ್ಳೆ ಪರದೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕ್ಲಿಪ್ ವಸತಿ ಕೇಂದ್ರದಲ್ಲಿ ಗಾರ್ಡ್‌ಗಳು ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸುವ ಸಿಬ್ಬಂದಿ

ಹೈದರಾಬಾದ್, ಎ.18: ಉದ್ಯೋಗ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಅತೀ ಪ್ರಮುಖವಾಗಿದ್ದರೂ ಇತ್ತೀಚೆಗೆ ಕಠಿಣ ಕೆಲಸದ ಒತ್ತಡದಿಂದ ಹಿಂಸೆ ಅನುಭವಿಸುತ್ತಿದ್ದವರು ಅನೇಕರು ಇದ್ದಾರೆ. ಈ ನಡುವೆ ಭದ್ರತಾ ಸಿಬ್ಬಂದಿಯೊಬ್ಬರು ರಾತ್ರಿ ಪಾಳಿಯಲ್ಲಿ ಸೊಳ್ಳೆ ಪರದೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯವೊಂದು ವೈರಲ್ (Viral News) ಆಗಿದೆ. ಹೈದರಾಬಾದ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ವೊಬ್ಬರು ಸೊಳ್ಳೆ ಪರದೆಯಡಿಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಈ ಕ್ಲಿಪ್ ವಸತಿ ಕೇಂದ್ರದಲ್ಲಿ ಗಾರ್ಡ್‌ಗಳು ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೆಕ್ಯೂರಿಟಿ ಗಾರ್ಡ್ ಗೆ ರಾತ್ರಿ ಕೆಲಸ ಇದ್ದಿದ್ದರಿಂದ ಎಚ್ಚರವಾಗಿದ್ದು ಕೊಂಡೆ ತನ್ನ ಜವಾಬ್ದಾರಿ ಯನ್ನು ನಿಭಾಯಿಸಿಬೇಕಾಗುತ್ತದೆ. ಹೀಗಾಗಿ ಕರ್ತವ್ಯ ಸಮಯದಲ್ಲಿ ಅವರು ಕುರ್ಚಿಯ ಮೇಲೆ ಕುಳಿತಿರುವುದು ಕಾಣಬಹುದು. ಆದರೆ ಅವರು ಸೊಳ್ಳೆ ಪರದೆ ಮೈ ಮೇಲೆ ಹಾಕಿಕೊಂಡೆ ಕೆಲಸ ಮಾಡುತ್ತಿದ್ದಾರೆ.

ವಿಡಿಯೋ ನೋಡಿ:



ಅವರು ರಾತ್ರಿ ಪಾಳಿಯಲ್ಲಿ ಎಚ್ಚರವಾಗಿದ್ದುಕೊಂಡು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಒಬ್ಬ ಮಹಿಳೆ ಏನೋ ಸಲಹೆ ಕೇಳುತ್ತಿದ್ದಾರೆ. ಸೂರಜ್ ಕುಮಾರ್ ಬೌಧ್ ಎಂಬ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Viral News: ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌? ಏನಿದು ಸ್ಟೋರಿ

ರಾತ್ರಿ ಕೆಲಸ ಇದ್ದಿದ್ದರಿಂದ ಸೆಕ್ಯೂರಿಟಿ ಗಾರ್ಡ್ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಪಾದಚಾರಿ ರಸ್ತೆಯಂತಿರುವ ಜಾಗದಲ್ಲಿ ಸೊಳ್ಳೆ ಪರದೆಯನ್ನು ಹಾಕಿಕೊಂಡೆ ಜಾಗರೂಕರಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ವಿಡಿಯೊ ಶೇರ್ ಮಾಡಿದ ವ್ಯಕ್ತಿ ಸೊಸೈಟಿಯ ನಿವಾಸಿಗಳು ಎಸಿ ಕೊಠಡಿಗಳಲ್ಲಿ ವಾಸಿ ಸುತ್ತಿರುವಾಗ ಗಾರ್ಡ್‌ಗಳಿಗೆ ಸುರಕ್ಷಿತ ಮತ್ತು ಆರಾಮದಾಯಕ ಸ್ಥಳವನ್ನು ಏಕೆ ನೀಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ನಿಜವಾದ ಸಮಸ್ಯೆ ಎಂದರೆ ಕರುಣೆ. ಜನರು ಬಡವರ ಬಗ್ಗೆ ಸಹಾನುಭೂತಿಯನ್ನು ಕಳೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ವಸತಿ ಸಮಾಜಗಳಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ ಎದುರಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ಕೆಲವರು ಚರ್ಚೆ ಮಾಡಿದ್ದಾರೆ..ದುಡ್ಡಿದ್ದವರು ಅವರು ಲಾಭದ ಕಡೆಗೆ ಗಮನ ಹರಿಸುತ್ತಾರೆಯೇ ಹೊರತು ಮಾನವೀಯತೆ ಕಡೆ ಅಲ್ಲ ಎಂದು ಹಲವರು ದೂರಿದ್ದಾರೆ.