ಗ್ಯಾಂಗ್ಟೋಕ್, ಮೇ 25: ಶಾಲೆ ಆರಂಭವಾಗುವುದೇ ಬೆಳಗ್ಗಿನ ಪ್ರಾರ್ಥನೆಯ ಮೂಲಕ ಪ್ರತಿದಿನ ವಿದ್ಯಾರ್ಥಿಗಳು ಶಿಸ್ತಿನಿಂದ ಸಾಲಿನಲ್ಲಿ ನಿಂತು ಪಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಾರ್ಥನೆ ವೇಳೆ ಸಿಕ್ಕಿಂನ ಶಾಲೆಯೊಂದರಲಲಿ ಅಪರೂಪದ ದೃಶ್ಯವೊಂದು ಕಂಡು ಬಂದಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಬೀದಿ ನಾಯಿಯೊಂದು ಶಾಲಾ ಪ್ರಾರ್ಥನ ಸಮಯದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ಮಕ್ಕಳ ಸಾಲಿನಲ್ಲಿ ಅದು ಕೂಡ ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತುಕೊಂಡಿದೆ. ಸದ್ಯ ಈ ಕ್ಯೂಟ್ ವಿಡಿಯೊ (Viral News) ಭಾರಿ ಗಮನ ಸೆಳೆದಿದೆ.
ಪ್ರಾಣಿಗಳು ಕೂಡ ಬುದ್ದಿವಂತಿಕೆಯಲ್ಲಿ ಎತ್ತಿದ ಕೈ ಅನ್ನೋದಕ್ಕೆ ಈ ವಿಡಿಯೊ ಸಾಕ್ಷಿ ಎಂಬಂತಿದೆ. ಸಿಕ್ಕಿಂನಲ್ಲಿ ಶಾಲಾ ಪ್ರಾರ್ಥನೆಗೆ ಬಂದ ಬೀದಿ ನಾಯಿ ಮುದ್ದಾಗಿರುವ ʼಪ್ರಾರ್ಥನಾ ಭಂಗಿʼಯೊಂದಿಗೆ ನಿಂತು ಎಲ್ಲರ ಹೃದಯ ಗೆದ್ದಿದೆ. ಶಾಲಾ ಪ್ರಾರ್ಥನೆಯ ಸರಿಯಾದ ಸಮಯಕ್ಕೆ ಬಂದು ಸರತಿ ಸಾಲಿನಲ್ಲೇ ನಿಂತು ಅಸೆಂಬ್ಲಿಯಲ್ಲಿ ಪಾಲ್ಗೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ವಿಡಿಯೊ ನೋಡಿ:
ಪ್ರಸನ್ನ ಪಖ್ರಿನ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕ್ಲಿಪ್ ಶೇರ್ ಮಾಡಿಕೊಂಡಿದ್ದಾರೆ. ಮಕ್ಕಳು ಸಾಲಿನಲ್ಲಿ ನಿಂತಿರುವುದನ್ನು ವಿಡಿಯೊ ತೋರಿಸುತ್ತದೆ. ಆಗ ಅನಿರೀಕ್ಷಿತ ಅತಿಥಿಯಾಗಿ ಬಂದ ಬೀದಿ ನಾಯಿಯೊಂದು ಮಕ್ಕಳ ಸಾಲಿನಲ್ಲಿಯೇ ನಿಂತಿದೆ. ಬೀದಿನಾಯಿಯೂ 'ಪ್ರಾರ್ಥನೆ ಭಂಗಿ'ಯಲ್ಲಿ ನಿಂತು ಎಲ್ಲರನ್ನು ಆಶ್ಚರ್ಯ ಪಡಿಸಿದೆ.
ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
ವಿಡಿಯೊದಲ್ಲಿ ಏನಿದೆ?
ಶಾಲಾ ಮಕ್ಕಳು ಮೈದಾನದಲ್ಲಿ ಸಾಲಾಗಿ ನಿಂತು ಶಿಸ್ತಿನಿಂದ ಬೆಳಗಿನ ಪ್ರಾರ್ಥನೆ ಗೀತೆಯನ್ನು ಹಾಡಿದ್ದಾರೆ. ಆಗ ಬಿಳಿ ಬೀದಿ ನಾಯಿಯೊಂದು ತನ್ನ ಹಿಂಗಾಲುಗಳ ಮೇಲೆ ನೇರವಾಗಿ ನಿಂತು, ಅದರ ಮುಂಭಾಗದ ಪಂಜಗಳನ್ನು ಎತ್ತಿ ಪಾರ್ಥನೆಯಲ್ಲಿ ಪಾಲ್ಗೊಂಡಿದೆ. ಪ್ರಾರ್ಥನೆ ಮುಗಿಯುತ್ತಿದ್ದಂತೆ ಅತ್ಯಂತ ಸಹಜವಾಗಿ ಮಕ್ಕಳ ಪಕ್ಕದಲ್ಲೇ ಅದು ಆರಾಮವಾಗಿ ಕುಳಿತುಕೊಂಡಿದೆ.
ನಾಯಿಯ ಶಾಂತ ನಡವಳಿಕೆಯು ಎಲ್ಲರ ಗಮನ ಸೆಳೆದಿದೆ. ನೆಟ್ಟಿಗರೊಬ್ಬರು ಈ ನಾಯಿ ಶಾಲಾ ಮಕ್ಕಳಿಗಿಂತಲೂ ಹೆಚ್ಚು ಶಿಸ್ತು ಪಾಲಿಸುತ್ತಿದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಶಾಲಾ ದಿನವನ್ನು ನೆನಪಿಸುವಂತೆ ಮಾಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.