ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೆನ್ನೈ ಹಾಸ್ಟೆಲ್‌ನಲ್ಲಿ ಗೋಮಾಂಸ ನೀಡಲು ವಿದ್ಯಾರ್ಥಿಗಳ ಮನವಿ; ರಾಜಕೀಯ ಸಂಘರ್ಷಕ್ಕೂ ಕಾರಣವಾಯ್ತು ಹೊಸ ಬೇಡಿಕೆ

Viral News: ಮಟನ್ ಬೆಲೆ ಹೆಚ್ಚಾಗಿರುವ ಕಾರಣ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಆಹಾರ ಪಟ್ಟಿಯಲ್ಲಿ ಗೋಮಾಂಸವನ್ನು ಸೇರಿಸುವಂತೆ ಮನವಿ ಮಾಡಿದೆ. ಸದ್ಯ ಈ ವಿಚಾರವು ಚರ್ಚೆಗೆ ಕಾರಣವಾಗಿದೆ. ಚೆನ್ನೈಯ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ಹಾಸ್ಟೆಲ್‌ನ ವಿದ್ಯಾರ್ಥಿಗಳು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಚೆನ್ನೈ, ಸೆ. 23: ಮಟನ್ ಬೆಲೆ ಹೆಚ್ಚಾಗಿರುವ ಕಾರಣ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಆಹಾರ ಪಟ್ಟಿಯಲ್ಲಿ ಗೋಮಾಂಸವನ್ನೂ ಸೇರಿಸುವಂತೆ ಮನವಿ ಮಾಡಿದೆ. ಸದ್ಯ ಈ ವಿಚಾರವು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಚೆನ್ನೈ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ಹಾಸ್ಟೆಲ್‌ನ ವಿದ್ಯಾರ್ಥಿಗಳು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು (Viral News) ನಡೆಯುತ್ತಿವೆ.

ತಮಿಳುನಾಡಿನ ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಚೆನ್ನೈಯ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ಹಾಸ್ಟೆಲ್‌ಗೆ ಭೇಟಿ ನೀಡಿ ಆಹಾರ ಗುಣಮಟ್ಟದ ಬಗ್ಗೆ ಪ್ರಶ್ನಿಸಿದಾಗ ವಿದ್ಯಾರ್ಥಿಗಳು ಈ ಬೇಡಿಕೆ ಮುಂದಿಟ್ಟಿದ್ದಾರೆ‌. ಸದ್ಯ ವಿದ್ಯಾರ್ಥಿಗಳಿಗೆ ಚಿಕನ್ ಮತ್ತು ಮಟನ್ ನೀಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಗುಂಪು ತಮಗೆ ಮೆನುವಿನಲ್ಲಿ ಗೋಮಾಂಸವನ್ನು ಸೇರಿಸಬೇಕು ಎಂದು ವಿನಂತಿಸಿದೆ.

ಮಟನ್ ತುಂಬಾ ದುಬಾರಿ. ತಮಗೆ ಅದನ್ನು ಸೇವಿಸುವ ಅಭ್ಯಾಸವಿಲ್ಲ. ಹೀಗಾಗಿ ಬೀಫ್ ಸೇರಿಸಬೇಕು ಎಂಬುದು ಅವರ ಬೇಡಿಕೆ. ಪ್ರಸ್ತುತ ಹಾಸ್ಟೆಲ್‌ಗಳಲ್ಲಿ ಕೋಳಿ ಮಾಂಸ, ಕುರಿ ಮಾಂಸ ಮತ್ತು ಪ್ರತಿ ಸೋಮವಾರ ಬಿರಿಯಾನಿ ನೀಡಲಾಗುತ್ತಿದೆ. ಆದರೆ ದನದ ಮಾಂಸ ನೀಡುವ ವಿಷಯದಲ್ಲಿ ವಿದ್ಯಾರ್ಥಿಗಳ ನಡುವೆಯೇ ಚರ್ಚೆಗಳಿರುವುದರಿಂದ, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ಹಾಸ್ಟೆಲ್‌ನ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ ಅಭಿಪ್ರಾಯದ ಆಧಾರದ ಮೇಲೆ ಇಲಾಖೆಯು ಹಾಸ್ಟೆಲ್ ಆಹಾರ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.

ಸಚಿವರ ಈ ಹೇಳಿಕೆಗೆ 'ಪುದಿಯ ತಮಿಳಗಂ' ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಕೆ. ಕೃಷ್ಣಸಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ಗಳ ಆಹಾರದಲ್ಲಿ ದನದ ಮಾಂಸ  ಸೇರಿಸುವ ಪ್ರಸ್ತಾಪದಿಂದ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿರುವ ಅವರು, ಸಚಿವರು ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪ್ರೋಟೀನ್ ಹಾಗೂ ಪೌಷ್ಟಿಕ ಆಹಾರವನ್ನು ನೀಡಲು ಮಾತ್ರ  ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.