ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದ್ಯಾರ್ಥಿಗಳು ನೀಡಿದ ಗಿಫ್ಟ್‌ ನೋಡಿ ಭಾವುಕರಾದ ಕಾಲೇಜಿನ ವಾಚ್‌ಮೆನ್‌ ; ವಿಡಿಯೋ ನೋಡಿ

Viral Video: ಕೇರಳದ ಕಾಲೇಜಿನ ವಿದ್ಯಾರ್ಥಿಗಳು ತಮ್ಮನ್ನು ಕೇರ್ ಟೇಕರ್ ಮಾಡುತ್ತಿದ್ದ ವಾಚ್ ಮ್ಯಾನ್ ಗೆ ನೆನಪಿನಲ್ಲಿ ಉಳಿಯುವಂತಹ ಸುಂದರ ಗಿಫ್ಟ್ ವೊಂದನ್ನು ನೀಡುವ ಮೂಲಕ ಅವರನ್ನು ಭಾವಕರನ್ನಾಗಿಸಿದ್ದಾರೆ. ವಿದ್ಯಾರ್ಥಿಗಳು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಕಾಲೇಜು ಕೇರ್‌ ಟೇಕರ್‌ಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಾಚ್ ಮ್ಯಾನ್ ಗೆ ಕೈಯಿಂದಲೇ ಬಿಡಿಸಿದ ಭಾವಚಿತ್ರ ಗಿಫ್ಟ್ ಆಗಿ ನೀಡಿದ ವಿದ್ಯಾರ್ಥಿಗಳು

ಕೋತಮಂಗಲಂಣ,ಜು.26: ಕಾಲೇಜು ದಿನ ಅಂದಾಗ ಕೇವಲ ಅಲ್ಲಿನ ಕಲಿತ ಪಾಠಗಳು, ಸ್ನೇಹಿತರ ಜೊತೆ ಖುಷಿ ಪಟ್ಟ ಸುಂದರ ಕ್ಷಣಗಳು ಮಾತ್ರ ನಮ್ಮನ್ನು ಕಾಡುವುದಲ್ಲ. ಅಲ್ಲಿನ ಸುಂದರ ವಾತಾವರಣ, ಕಾಳಜಿ ತೋರಿದ ಶಿಕ್ಷಕ ವರ್ಗ, ಪ್ರೀತಿಯಿಂದ ಮಾತನಾಡಿಸುವ ಸಿಬ್ಬಂದಿ ಗಳು ಕೂಡ ಹತ್ತಿರವಾಗುತ್ತಾರೆ. ಇದಕ್ಕೆ ಪೂರಕ ಎಂಬಂತೆ ಕೇರಳದ ಕಾಲೇಜಿನ ವಿದ್ಯಾರ್ಥಿಗಳು ತಮ್ಮನ್ನು ಕೇರ್ ಟೇಕರ್ ಮಾಡುತ್ತಿದ್ದ ವಾಚ್ ಮ್ಯಾನ್ ಗೆ ನೆನಪಿನಲ್ಲಿ ಉಳಿಯುವಂತಹ ಸುಂದರ ಗಿಫ್ಟ್ ವೊಂದನ್ನು ನೀಡುವ ಮೂಲಕ ಅವರನ್ನು ಭಾವಕರನ್ನಾಗಿಸಿದ್ದಾರೆ. ವಿದ್ಯಾರ್ಥಿಗಳು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಕಾಲೇಜು ಕೇರ್‌ಟೇಕರ್‌ಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಕಾಲೇಜಿನ ವಾಚ್ ಮ್ಯಾನ್ ಗೂ ವಿದ್ಯಾರ್ಥಿಗಳು ಇಷ್ಟು ಪ್ರೀತಿ ತೋರಿಸಿದ್ದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಾಲೇಜಿನಲ್ಲಿ ಎಲ್ಲರನ್ನೂ ಕಾಳಜಿಯಿಂದ ನೋಡಿಕೊಳ್ಳುವ ಇವರ ಪ್ರೀತಿಗೆ ವಿದ್ಯಾರ್ಥಿಗಳು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೇರಳದ ಸೇಂಟ್ ಗ್ರೆಗೋರಿಯೊಸ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಪ್ರೀತಿಯ ಕೇರ್‌ಟೇಕರ್ ಜಾನಿ ಚೆಟ್ಟನ್ ಅವರಿಗೆ ಈ ಗಿಫ್ಟ್ ನೀಡಿದ್ದು ವಿದ್ಯಾರ್ಥಿಗಳು ಅವರ ಸುತ್ತ ಸುತ್ತುವರಿದಿದ್ದಾರೆ.

ವಿಡಿಯೋ ನೋಡಿ:



​​ವಿದ್ಯಾರ್ಥಿನಿಯೊಬ್ಬರು ಶೇರ್ ಮಾಡಿದ ದೃಶ್ಯದಲ್ಲಿ ವಿದ್ಯಾರ್ಥಿಗಳು ಅವರ ಸುತ್ತ ನಿಂತಿದ್ದು ಒಂದು ಗಿಫ್ಟ್ ಮಾಡಿದ ಪ್ಯಾಕ್ ಅನ್ನು ಅವರಿಗೆ ನೀಡುತ್ತಾರೆ. ಕುತೂಹಲದಿಂದ ಅವರು ಬಿಚ್ಚಿ ನೋಡು ತ್ತಾರೆ. ಅದರಲ್ಲಿ ಅವರ ಸುಂದರವಾಗಿ ಚಿತ್ರಿಸಿದ ಭಾವಚಿತ್ರವು ಕಂಡು ಬಂದಿತ್ತು. ಇದನ್ನು ಕಂಡ ತಕ್ಷಣ ಅವರ ಮುಖವು ಬೆಳಗುತ್ತದೆ. ಕಣ್ಣುಗಳು ಆನಂದಭಾಷ್ಪದಿಂದ ತೇವಗೊಂಡಿದ್ದು ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆಯನ್ನು ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಅವರು ಹೆಮ್ಮೆಯಿಂದ ಭಾವಚಿತ್ರವನ್ನು ಹಿಡಿದುಕೊಂಡು ವಿದ್ಯಾರ್ಥಿಗಳ ಜೊತೆ ಫೋಟೋಗೆ ಪೋಸ್ ನೀಡುತ್ತಿರುವ ದೃಶ್ಯ ಕಾಣಬಹುದು. ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿಗೂ ಈ ರೀತಿಯಾಗಿ ಗೌರವ ನೀಡಿರುವುದನ್ನು ಕಂಡು ನೆಟ್ಟಿಗರು ಹೊಗಳಿದ್ದಾರೆ. ಬಳಕೆದಾರರೊಬ್ಬರು "ಶುದ್ಧ ಆತ್ಮ" ಎಂದು ಬರೆದಿದ್ದಾರೆ. ಮತ್ತೊಬ್ಬರು ನಿಜಕ್ಕೂ ಈ ವ್ಯಕ್ತಿ ಹೃದಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.