ಬಿಹಾರ,ಸೆ.17: ಬೀದಿ ಬದಿಯ ಮಾರಾಟಗಾರನೊಬ್ಬನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಏನೂ ಕಾರಣವಿಲ್ಲದೆ ಏಕಾಏಕಿ ಭೇಲ್ ಪುರಿ ಮಾರಾಟಗಾರನ ಮೇಲೆ ಹಲ್ಲೆ ನಡೆಸಿ, ಆತನ ಬಳಿಯಿದ್ದ ತಿನಿಸುಗಳನ್ನು ರಸ್ತೆಗೆ ಎಸೆದಿದ್ದಾನೆ. ಈ (Viral News) ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಇದು ನಾಚಿಕೆಗೇಡಿನ ಸಂಗತಿ, ಈ ಪುಂಡನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸುಖಾಸುಮ್ಮನೆ ಬಂದು ದೌರ್ಜನ್ಯ ಮಾಡುವುದು ಸರಿಯಲ್ಲ, ಬಡ ವ್ಯಕ್ತಿಗೆ ಆತ ಉಂಟುಮಾಡಿದ ನಷ್ಟವನ್ನು ಆತನೇ ಭರಿಸಬೇಕು, ಎಂದು ಆಗ್ರಹಿಸಿದ್ದಾರೆ.
ವಿಡಿಯೋ ನೋಡಿ:
ವ್ಯಕ್ತಿಯೊಬ್ಬ ಏಕಾಏಕಿ ಭೇಲ್ ಪುರಿ ಗಾಡಿಯ ಬಳಿಗೆ ಬಂದು ವ್ಯಾಪಾರಿಗೆ ಹೊಡೆಯಲು ಪ್ರಾರಂಭಿಸುತ್ತಾನೆ. ನಂತರ ವಾಹನದಲ್ಲಿದ್ದ ಮಂಡಕ್ಕಿ ಹಾಗೂ ಇತರ ತಿನಿಸುಗಳ ಸಾಮಗ್ರಿಗಳನ್ನು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಎಸೆಯುತ್ತಾನೆ.
Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೂ ಬೀದಿ ಬದಿ ವ್ಯಾಪಾರಿಯ ಬಳಿ ತೆರಳಿ ಹಲ್ಲೆ ನಡೆಸಿ, ನಂತರ ಭೇಲ್ ಗಾಡಿಯಲ್ಲಿದ್ದ ಮಂಡಕ್ಕಿ ಮತ್ತು ಇತರ ಪದಾರ್ಥಗಳನ್ನು ರಸ್ತೆಗೆ ಚೆಲ್ಲುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಲ್ಲೆ ನಡೆಯುತ್ತಿರುವಾಗ ವ್ಯಾಪಾರಿ ಅಸಹಾಯಕರಾಗಿ ನಿಂತಿದ್ದಾನೆ ದಾರಿಹೋಕರು ಈ ದೃಶ್ಯ ನೋಡುತ್ತ ಮುಂದೆ ಸಾಗುವುದು ಕಂಡುಬಂದಿದೆ.
ಬಳಕೆದಾರರಾದ ಗುರ್ಫಾನ್ ಆಲಂ ಅವರು ಈ ವಿಡಿಯೋವನ್ನು ಹಂಚಿಕೊಂಡು ಬಿಹಾರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ ಹಾಗೂ ಆರೋಪಿಯನ್ನು ಗುರುತಿಸಿ ಬಂಧಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಆದರೆ ಕೆಲವರು ಈ ವಿಡಿಯೋ ಸ್ಕ್ರಿಪ್ಟೆಡ್ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕೃತ ದೂರು ಅಥವಾ ಎಫ್‌ಐಆರ್ ದಾಖಲಿಸಲಾಗಿಲ್ಲ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಪಾಟ್ನಾ ಪೊಲೀಸರು, ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗೆ ವಹಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.