ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನೆಗೆ ನುಗ್ಗಲು ಯತ್ನಿಸಿದ ಚಿರತೆಯನ್ನು ದಿಟ್ಟವಾಗಿ ಎದುರಿಸಿದ ಶ್ವಾನ; ರೋಚಕ ಹಣಾಹಣಿಯಲ್ಲಿ ಕೊನೆಗೆ ಗೆದ್ದಿದ್ದು ಯಾರು?

Viral News: ಮನೆಗೆ ನುಗ್ಗಿ ಸಾಕು ನಾಯಿಯೊಂದರ ಮೇಲೆ ಚಿರತೆ ಭೀಕರ ದಾಳಿ ಮಾಡಿದ ಘಟನೆ ನಡೆದಿದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಕತ್ತಲೆಯ ಮರೆಯಲ್ಲಿ, ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ನಾಯಿ ಗಾಢ ನಿದ್ರೆಯಲ್ಲಿದ್ದಾಗ ಅದರ ಮೇಲೆ ದಾಳಿ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಉತ್ತರಾಖಂಡದ ಮನೆಯೊಂದರ ಅಂಗಳದಲ್ಲಿ ನಿದ್ರಿಸುತ್ತಿದ್ದ ಶ್ವಾನದ ಮೇಲೆ ಚಿರತೆ ದಾಳಿ

ಡೆಹ್ರಾಡೂನ್‌, ಸೆ. 9: ಇತ್ತೀಚೆಗೆ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ ನುಗ್ಗಿ ದಾಳಿ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಸಾಕು ನಾಯಿಯೊಂದರ ಮೇಲೆ ಚಿರತೆಯೊಂದು ಭೀಕರ ದಾಳಿ ಮಾಡಿದ ಘಟನೆ ವರದಿಯಾಗಿದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಕತ್ತಲೆಯ ಮರೆಯಲ್ಲಿ, ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ನಾಯಿ ಗಾಢ ನಿದ್ರೆಯಲ್ಲಿದ್ದಾಗ ಅದರ ಮೇಲೆ ದಾಳಿ ಮಾಡಿದೆ. ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು (Viral News) ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ವಿಕಾಸ್ ಭವನ ಕಚೇರಿಯ ಬಳಿಯ ನಿವಾಸದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ನಾಯಿ ಗಾಢ ನಿದ್ದೆಯಲ್ಲಿತ್ತು. ಆಗ ಚಿರತೆಯೊಂದು ದಿಢೀರ್ ಎಂಟ್ರಿ ನೀಡಿ ದಾಳಿ ಮಾಡಿದೆ. ಈ ಆಕ್ರಮಣದಿಂದ ಎದೆ ಗುಂದದ ನಾಯಿ, ಹಿಂದೇಟು ಹಾಕದೆ ಚಿರತೆಯನ್ನು ಎದುರಿಸಲು ಮುಂದಾಗಿದೆ. ಚಿರತೆಯ ದೇಹದ ಗಾತ್ರ ಮತ್ತು ಸಾಮರ್ಥ್ಯದ ಮುಂದೆ ನಾಯಿ ಚಿಕ್ಕದಾಗಿದ್ದರೂ, ಅತ್ಯಂತ ಧೈರ್ಯದಿಂದ ಚಿರತೆಯನ್ನೇ ಎದುರಿಸಿ ನಿಂತಿದೆ.

ವಿಡಿಯೊ ನೋಡಿ:



ಜೀವದ ಹಂಗು ತೊರೆದು ಹೋರಾಡಿದ ನಾಯಿ ಕೊನೆಗೆ ಚಿರತೆಯನ್ನೇ ಓಡಿಸಿದೆ. ಆ ಮೂಲಕ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ತಡರಾತ್ರಿಯ ಈ ಘರ್ಷಣೆ ಸ್ತಳೀಯರಲ್ಲಿ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಮನೆಯ ಬಾಗಿಲ ಅಲ್ಪ ದೂರದಲ್ಲೇ ಎರಡೂ ಪ್ರಾಣಿಗಳ ನಡುವೆ ತೀವ್ರ ಹೆಣಗಾಟ ನಡೆದಿದೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆ; ರಕ್ಷಣೆಗೆ ಮುಂದಾದ ಅರಣ್ಯಾಧಿಕಾರಿ ಮೇಲೆಯೇ ಏಕಾಏಕಿ ದಾಳಿ

ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯದ ವಾತಾವರಣ ಸೃಷ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾಕುಪ್ರಾಣಿಗಳು ಹಾಗೂ ಸಾರ್ವಜನಿಕರ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.