ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Tharoor: ಶಶಿ ತರೂರ್‌ಗೆ ಸ್ವಿಗ್ಗಿಯಿಂದ ಭರ್ಜರಿ ಸರ್ಪ್ರೈಸ್‌! ಪೋಸ್ಟ್‌ ಫುಲ್‌ ವೈರಲ್‌

ಸ್ವಿಗ್ಗಿ ಬಗ್ಗೆ ವ್ಯಂಗ್ಯವಾಡಿದವರಿಗೆ ಎಐ ಚಿತ್ರ ಹಂಚಿ ತಿರುಗೇಟು ನೀಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಸ್ವಿಗ್ಗಿ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದೆ. ಸ್ವಿಗ್ಗಿ ತಂಡ ತರೂರ್ ಮನೆಗೆ ತೆರಳಿ ಬಿಸಿ ಬಿಸಿ ಇಡ್ಲಿ ನೀಡಿ ಸತ್ಕರಿಸಿತು. ಈ ಕ್ಷಣವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಸ್ವಿಗ್ಗಿ, ತರೂರ್ ಜೀ ಅವರಿಗೆ ಈ ಪ್ರದೇಶದ ಅತ್ಯುತ್ತಮ ಇಡ್ಲಿಯನ್ನು ನೀಡುವುದು ನಮ್ಮ ಭಾಗ್ಯ ಎಂದು ಬರೆದಿದೆ.

ನವದೆಹಲಿ: ಕಾಂಗ್ರೆಸ್ ಸಂಸದ (Congress MP) ಶಶಿ ತರೂರ್ (Shashi Tharoor) ಇಡ್ಲಿಯನ್ನು (Idli) ಕುರಿತು ಕಾವ್ಯ ರಚಿಸಿ ಕೊಂಡಾಡಿದ್ದಕ್ಕೆ ಸ್ವಿಗ್ಗಿ (Swiggy) ಇಡ್ಲಿಯನ್ನು ಉಡುಗೊರೆಯಾಗಿ ಕಳುಹಿಸಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಕ್ಷಿಣ ಭಾರತದ ಆಹಾರ ಸಂಪ್ರದಾಯಕ್ಕೆ ತರೂರ್ ನೀಡಿದ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಂಸದ ಶಶಿ ತರೂರ್‌ಗೆ ಸ್ವಿಗ್ಗಿ ಇಡ್ಲಿಯನ್ನು ತಲುಪಿಸಿದೆ. “ತರೂರ್‌ಗೆ ಉತ್ತಮ ಇಡ್ಲಿ ನೀಡಿದ್ದೇವೆ. ಇದು ಅವರ ರುಚಿಯನ್ನು ತೃಪ್ತಿಪಡಿಸಿದೆ ಎಂದು ಭಾವಿಸುತ್ತೇವೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡು, ಶಶಿ ತರೂರ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದೆ. “ನನ್ನ ಇಡ್ಲಿ ಪೋಸ್ಟ್‌ಗೆ ಸ್ವಿಗ್ಗಿ ಇಡ್ಲಿ ಉಡುಗೊರೆ ಕೊಟ್ಟಿದೆ. ಧನ್ಯವಾದ!” ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.



ಈ ಸುದ್ದಿಯನ್ನು ಓದಿ: Viral Video: ಮಧುವಿನ ಭರ್ಜರಿ ಡಾನ್ಸ್‌; ಮಂಟಪದಲ್ಲೇ ಮದುವೆ ಕ್ಯಾನ್ಸಲ್‌ ಮಾಡಿದ ವರ- ಈ ವಿಡಿಯೊ ನೋಡಿ

ಎಕ್ಸ್‌ನಲ್ಲಿ ಕೇರಳದ ಬ್ರೇಕ್‌ಫಾಸ್ಟ್ ಕುರಿತ ಚರ್ಚೆಯಲ್ಲಿ ಒಬ್ಬ ಬಳಕೆದಾರ ಇಡ್ಲಿಯನ್ನು “ಸ್ಟೀಮ್ಡ್ ರಿಗ್ರೆಟ್” ಎಂದು ಕರೆದಿದ್ದರು. ಇದಕ್ಕೆ ತರೂರ್, “ನಿಜವಾದ ಇಡ್ಲಿ ಒಂದು ಮೋಡ, ಪಿಸುಮಾತು, ಮಾನವ ನಾಗರಿಕತೆಯ ಪರಿಪೂರ್ಣತೆಯ ಕನಸು” ಎಂದು ಕಾವ್ಯಾತ್ಮಕವಾಗಿ ಉತ್ತರಿಸಿದ್ದರು. ಈ ಪೋಸ್ಟ್ ವೈರಲ್ ಆಗಿ, ದಕ್ಷಿಣ ಭಾರತದ ಆಹಾರ ಸಂಪ್ರದಾಯದ ಬಗ್ಗೆ ಶಶಿ ತರೂರ್‌ರ ಅವರ ಕಾವ್ಯಾತ್ಮಕ ವರ್ಣನೆ ವೈರಲ್ ಆಗಿತ್ತು.

ಈ ಘಟನೆ ಕುರಿತು ಕೆಲವರು ಸಾಮಾಜಿಕ ಜಾಲತಾಣದಲ್ಲಿ “ತರೂರ್ ಇಡ್ಲಿಯನ್ನು ಡಿಫೆಂಡ್ ಮಾಡಿದ ರೀತಿ ಅದ್ಭುತ” ಎಂದು ಬರೆದಿದ್ದಾರೆ. “ಸ್ವಿಗ್ಗಿಯ ಈ ಕ್ರಮ ಭಾರತೀಯ ಆಹಾರ ಸಂಸ್ಕೃತಿಯನ್ನು ಗೌರವಿಸುವಂತಿದೆ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಈ ಘಟನೆ ದಕ್ಷಿಣ ಭಾರತದ ಆಹಾರದ ಹೆಮ್ಮೆಯನ್ನು ಎತ್ತಿಹಿಡಿದಿದೆ.