ತಮಿಳುನಾಡು, ಜು. 14: ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಹೆಜ್ಜೆ ಇಟ್ಟು ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಕಂಡ ನಟ ವಿಜಯ್ (Tamil Nadu CM Vijay) ಮುಖ್ಯಮಂತ್ರಿಯಾಗಿ ಬ್ಯುಸಿ ಇದ್ದಾರೆ. ಅದರಲ್ಲೂ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಸರಳತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರ ಮುಗ್ಧ ಕ್ಷಣದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಖ್ಯಾತ ರಾಜಕಾರಣಿಯಾದರೂ ಆಟಿಕೆ ಕಾರ್ ನೋಡಿ ಮಕ್ಕಳಂತೆ ಖುಷಿ ಪಟ್ಟಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚೆನ್ನೈಯಲ್ಲಿ ಇತ್ತೀಚೆಗೆ ಬ್ಯುಸಿನೆಸ್ ಮೀಟಿಂಗ್ ಆಯೋಜಿಸಲಾಗಿತ್ತು. ವಿಯೆಟ್ನಾಂ ಎಲೆಕ್ಟ್ರಿಕ್ ವಾಹನ ತಯಾರಕ ಕಂಪೆನಿ ವಿನ್‌ಫಾಸ್ಟ್‌ನ ಅಧಿಕಾರಿಗಳು ವಿಜಯ್ ಅವರನ್ನು ಭೇಟಿ ಮಾಡಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯ ಕೊನೆಯಲ್ಲಿ ಕಂಪನಿಯು ವಿಜಯ್‌ಗೆ ಕಾಣಿಕೆಯಾಗಿ ಎಲೆಕ್ಟ್ರಿಕ್ ಕಾರಿನ ಮಾದರಿ ಟಾಯ್ ಕಾರ್ ಉಡುಗೊರೆಯಾಗಿ ನೀಡಿತು. ಇದನ್ನು ವಿಜಯ್ ಸಂಭ್ರಮದಿಂದ ಸ್ವೀಕರಿಸಿದರು.
ವಿಡಿಯೊ ನೋಡಿ:
ವಿನ್‌ಫಾಸ್ಟ್ ಕಂಪನಿ ತಮ್ಮ ಜಾಗತಿಕ ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಎಸ್‌ಯುವಿ 'ವಿನ್‌ಫಾಸ್ಟ್ ವಿಎಫ್ 8' ಕಾರಿನ ಸಣ್ಣ ಮಾದರಿಯನ್ನು ಉಡುಗೊರೆಯಾಗಿ ವಿಜಯ್‌ಗೆ ನೀಡಿದೆ. ಈ ಆಟಿಕೆಯನ್ನು ವಿಜಯ್ ಅಲ್ಲೇ ಸಣ್ಣ ಮಕ್ಕಳಂತೆ ಕೂತೂಹಲದಿಂದ ನೋಡಿ ಮುದ್ದಾದ ನಗು ಬೀರಿದ್ದಾರೆ. ತನ್ನ ಮೇಜಿನ ಬಳಿ ಕುಳಿತಿದ್ದ ವಿಜಯ್ ಆ ಪುಟ್ಟ ಕಾರನ್ನು ಆಸಕ್ತಿಯಿಂದ ನೋಡಿ ಅದರ ಬಾಗಿಲು ಎಚ್ಚರಿಕೆಯಿಂದ ತೆರೆದು, ಕ್ಯಾಬಿನ್ ಒಳಗೆ ನೋಟ ಬೀರಿದ್ದಾರೆ. ಬಳಿಕ ಆ ಟಾಯ್ ಕಾರನ್ನು ಎಚ್ಚರಿಕೆಯಿಂದ ಎತ್ತಿಟ್ಟರು.
ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಉದ್ಯೋಗಿ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು, "ಜಸ್ಟ್ ಮೆನ್ ಥಿಂಗ್ಸ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು "ಅತ್ಯಂತ ಮುಗ್ಧ ಕ್ಷಣ" ಎಂದು ಹೇಳಿದ್ದಾರೆ. ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ವಿಜಯ್ ಕೊನೆಯ ಸಿನಿಮಾ ʼಜನನಾಯಗನ್ʼ ಜುಲೈ ಕೊನೆಯ ವಾರದಲ್ಲಿ ತೆರೆಗೆ ಬರಲು ಸಜ್ಜಾಗಿದೆ.