ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುವ ಬಸ್‌ನಿಂದ ಬಿದ್ದ ಒಂದು ವರ್ಷದ ಮಗು; ಆಘಾತಕಾರಿ ವಿಡಿಯೋ ವೈರಲ್

ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಶ್ರೀವಿಲ್ಲಿಪುತ್ತೂರ್ ಜಿಲ್ಲೆಯ ಸಂಗಗಿರಿ ಬಳಿ ಸೋಮವಾರ ಬಸ್‌ನಿಂದ ಬಿದ್ದು ಒಂಬತ್ತು ತಿಂಗಳ ಗಂಡು ಮಗು ಗಾಯೊಂಡ ಘಟನೆ ನಡೆದಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಘಟನೆಯ ದೃಶ್ಯ

ಚೆನ್ನೈ: ತಮಿಳುನಾಡಿನ (Tamil Nadu) ವಿರುದುನಗರ್ (Virudhunagar) ಜಿಲ್ಲೆಯ ಶ್ರೀವಿಲ್ಲಿಪುತ್ತೂರ್ (Srivilliputhur) ಸಮೀಪದ ಮೀನಾಕ್ಷಿಪುರಂ ಜಂಕ್ಷನ್‌ನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಸುಮಾರು ಒಂದು ವರ್ಷದ ಮಗುವೊಂದು ತಾಯಿಯ ಕೈಯಿಂದ ಜಾರಿ, ಚಲಿಸುತ್ತಿದ್ದ ಖಾಸಗಿ ಬಸ್‌ನ (Moving Bus) ಮುಂಭಾಗದ ಮೆಟ್ಟಿಲುಗಳ ಮೂಲಕ ರಸ್ತೆಗೆ ಬಿದ್ದಿದೆ. ಚಾಲಕನು ಒಮ್ಮಿಂದೊಮ್ಮೆಗೆ ಬ್ರೇಕ್ ಹಾಕಿದಾಗ ಈ ದುರ್ಘಟನೆ ಸಂಭವಿಸಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದೆ,

ಘಟನೆಯ ವಿವರ

ಮಗುವಿನ ಕುಟುಂಬ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿತ್ತು. ಬಸ್‌ನ ಮುಂಭಾಗದ ಬಾಗಿಲ ಬಳಿಯ ಮೆಟ್ಟಿಲುಗಳ ಪಕ್ಕದ ಸೀಟ್‌ನಲ್ಲಿ ತಾಯಿ ಮಗುವನ್ನು ಎತ್ತಿಕೊಂಡು ಕುಳಿತಿದ್ದರು. ಬೆಳಿಗ್ಗೆ 8:30ರ ಸುಮಾರಿಗೆ, ಬಸ್ ಮೀನಾಕ್ಷಿಪುರಂ ಸಿಗ್ನಲ್ ಸಮೀಪ ತಲುಪಿದಾಗ, ಚಾಲಕನು ಏಕಾಏಕಿ ಬ್ರೇಕ್ ಒತ್ತಿದ್ದಾನೆ. ಈ ಆಕಸ್ಮಿಕ ಆಘಾತದಿಂದ ಮಗು ತಾಯಿಯ ಕೈಯಿಂದ ಜಾರಿ, ತೆರೆದಿರುವ ಮುಂಭಾಗದ ಬಾಗಿಲ ಮೂಲಕ ರಸ್ತೆಗೆ ಬಿದ್ದಿದೆ.



ಸಿಸಿಟಿವಿ ದೃಶ್ಯಾವಳಿ ವೈರಲ್

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿವೆ. ಅದೃಷ್ಟವಶಾತ್, ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಸ್ತುತ ಮಗುವಿನ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಚಹಾ ಅಂಗಡಿಗೆ ನುಗ್ಗಿದ ಗೂಳಿಗಳು.. ಇಲ್ಲಿದೆ ಭಯಾನಕ ವಿಡಿಯೊ
ಅದೇ ಬಸ್‌ನಲ್ಲಿ ಮತ್ತೊಂದು ಮಗುವಿಗೂ ಗಾಯ

ವರದಿಯ ಪ್ರಕಾರ, ಅದೇ ಬಸ್‌ನಲ್ಲಿ ಮದನ್‌ ಕುಮಾರ್ ತನ್ನ ಸಹೋದರಿಯ ಎರಡು ವರ್ಷದ ಮಗುವನ್ನು ಹಿಡಿದಿದ್ದಾಗ, ಈ ಆಕಸ್ಮಿಕ ಬ್ರೇಕ್‌ನಿಂದ ಸಮತೋಲನ ಕಳೆದುಕೊಂಡಿದ್ದಾರೆ. ಮಗು ಬಸ್‌ನ ಒಳಗೆ ಬಿದ್ದು ಗಾಯಗೊಂಡಿದೆ. ಮಗುವನ್ನು ರಕ್ಷಿಸಲು ಪ್ರಯತ್ನಿಸಿದ ಮದನ್‌ ಕುಮಾರ್‌ಗೂ ಗಾಯಗಳಾಗಿವೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುರಕ್ಷತೆಯ ಕೊರತೆ ಬಯಲಿಗೆ

ಈ ಘಟನೆಯಿಂದ ಯಾವುದೇ ಗಂಭೀರ ಗಾಯಗಳು ಸಂಭವಿಸದಿದ್ದರೂ, ಬಸ್‌ಗಳ ಒಳಗಿನ ಅಸುರಕ್ಷಿತ ಪ್ರದೇಶಗಳಲ್ಲಿ ಕುಳಿತಾಗ ಉಂಟಾಗುವ ಅಪಾಯಗಳು ಬೆಳಕಿಗೆ ಬಂದಿವೆ. ಪ್ರಸ್ತುತ, ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳು ತನಿಖೆ ಅಥವಾ ತಪಾಸಣೆ ನಡೆಸುವ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.