ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Accident: ವ್ಯಕ್ತಿಯ ಪ್ರಾಣವನ್ನೇ ತೆಗೆದ ನಿಲ್ಲಿಸಿದ್ದ ಟಾಟಾ ಹ್ಯಾರಿಯರ್‌ ಕಾರು; ಶಾಕಿಂಗ್‌ ವಿಡಿಯೋ ವೈರಲ್‌

ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಅವಿನಾಶಿಯಲ್ಲಿರುವ ತನ್ನ ಅಂಗಡಿಯ ಹೊರಗೆ ಟಾಟಾ ಹ್ಯಾರಿಯರ್ ಇವಿ ಡಿಕ್ಕಿ ಹೊಡೆದು ಸೆಂಥಿಲ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬನಿಯನ್ ಅಂಗಡಿ ನಡೆಸುತ್ತಿದ್ದ ಸೆಂಥಿಲ್ ಕೇವಲ ಎರಡು ವಾರಗಳ ಹಿಂದೆ ಈ ಕಾರನ್ನು ಖರೀದಿಸಿದ್ದರು.

ಘಟನೆಯ ದೃಶ್ಯ

ಚೆನ್ನೈ: ತಮಿಳುನಾಡಿನ (Tamil Nadu) ತಿರುಪ್ಪೂರು ಜಿಲ್ಲೆಯ ಅವಿನಾಶಿಯಲ್ಲಿರುವ ತನ್ನ ಅಂಗಡಿಯ ಹೊರಗೆ ಟಾಟಾ ಹ್ಯಾರಿಯರ್ ಇವಿ (Tata Harrier EV) ಡಿಕ್ಕಿ ಹೊಡೆದು ಸೆಂಥಿಲ್ (Senthil) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬನಿಯನ್ ಅಂಗಡಿ ನಡೆಸುತ್ತಿದ್ದ ಸೆಂಥಿಲ್ ಕೇವಲ ಎರಡು ವಾರಗಳ ಹಿಂದೆ ಈ ಕಾರನ್ನು ಖರೀದಿಸಿದ್ದರು. ಈ ಘಟನೆ ಆಗಸ್ಟ್ 14, 2025 ರಂದು ಸಂಜೆ 5:53 ರ ಸುಮಾರಿಗೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸೆಂಥಿಲ್ ವಾಹನವನ್ನು ಹತ್ತಲು ಯತ್ನಿಸುವಾಗ, ವಾಹನವು ‘ಸಮ್ಮನ್ ಮೋಡ್’ನಲ್ಲಿತ್ತು ಎಂದು ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೈಶಿಷ್ಟ್ಯವು ಕೀಯನ್ನು ಬಳಸಿ ವಾಹನವನ್ನು ರಿಮೋಟ್‌ನಿಂದ ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸುವಂತೆ ಮಾಡುತ್ತದೆ. ಆದರೆ, ಇಳಿಜಾರಿನಲ್ಲಿ ಹ್ಯಾಂಡ್‌ಬ್ರೇಕ್ ಇಡದೆ ಕಾರನ್ನು ನಿಲ್ಲಿಸಲಾಗಿತ್ತು.

ಸಿಸಿಟಿವಿ ದೃಶ್ಯಗಳಲ್ಲಿ, ಚಾಲಕನ ಬಾಗಿಲು ತೆರೆದಿರುವಾಗ ವಾಹನವು ಹಿಂದಕ್ಕೆ ಬಂದು ಸೆಂಥಿಲ್‌ ಅವರಿಗೆ ಡಿಕ್ಕಿ ಹೊಡೆದಿದೆ. ರೆಡ್ಡಿಟ್‌ನಲ್ಲಿ ಸೆಂಥಿಲ್‌ನ ಸಂಬಂಧಿಯೊಬ್ಬರು, “ಹೊಸ ಟಾಟಾ ಹ್ಯಾರಿಯರ್ ಇವಿಯ ಸಮನ್ ಮೋಡ್ ದೋಷದಿಂದ ನನ್ನ ಸಂಬಂಧಿಯ ಸಾವು ಸಂಭವಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ, ಆದರೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ.

ಈ ಸುದ್ದಿಯನ್ನು ಓದಿ: Viral Video: ದೆಹಲಿ ರಸ್ತೆಯಲ್ಲಿ ಹೃದಯ ಬಿದ್ದಿದೆ, ವೈರಲ್‌ ಆಯ್ತು ಪೋಸ್ಟ್‌; ಏನಿದರ ಅಸಲಿಯತ್ತು?

ಟಾಟಾ ಮೋಟಾರ್ಸ್ ಈ ಘಟನೆಗೆ ಸಂತಾಪ ವ್ಯಕ್ತಪಡಿಸಿ, “ನಾವು ಈ ದುರಂತದ ಬಗ್ಗೆ ತಿಳಿದು ದುಃಖಿತರಾಗಿದ್ದೇವೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ. ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿಕೆ ನೀಡಿದೆ. ಕಂಪನಿಯು, “ಪ್ರಾಥಮಿಕ ವೀಡಿಯೋ ವೀಕ್ಷಣೆಯಿಂದ ವಾಹನವು ಇಳಿಜಾರಿನ ಕಾರಣಕ್ಕೆ ಹಿಂದಕ್ಕೆ ಜಾರಿರಬಹುದು ಎಂದು ತೋರುತ್ತದೆ, ಮೋಟಾರ್ ಚಾಲನೆಯಾಗಿರಲಿಲ್ಲ,” ಎಂದಿದೆ. ವಾಹನವು ಇನ್ನೂ ಕುಟುಂಬದವರ ಬಳಿಯಿದ್ದು, ಟಾಟಾ ಮೋಟಾರ್ಸ್ ಇದನ್ನು ಇನ್ನೂ ಪರಿಶೀಲಿಸಿಲ್ಲ.

ಟಾಟಾ ಹ್ಯಾರಿಯರ್ ಇವಿಯನ್ನು 2025ರ ಜೂನ್ 3 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆ 21.49 ಲಕ್ಷದಿಂದ 30.23 ಲಕ್ಷ ರೂ. (ಎಕ್ಸ್-ಶೋರೂಮ್) ಇದೆ. ಸಮನ್ ಮೋಡ್ ಈ ಎಸ್‌ಯುವಿಯ ಎಡಿಎಎಸ್ ವೈಶಿಷ್ಟ್ಯದ ಭಾಗವಾಗಿದ್ದು, ಇದು ಚಿಕ್ಕ ಸ್ಥಳಗಳಲ್ಲಿ ವಾಹನವನ್ನು ಚಾಲಕನಿಲ್ಲದೆ ಚಲಿಸಲು ಅನುವು ಮಾಡಿಕೊಡುತ್ತದೆ. ಈ ಘಟನೆಯಿಂದ ಭಾರತದ ರೋಡ್‌ ಕಂಡಿಷನ್‌ಗಳಲ್ಲಿ ಸೆಮಿ-ಆಟೋನಾಮಸ್ ವೈಶಿಷ್ಟ್ಯಗಳ ಸುರಕ್ಷತೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಅವಿನಾಶಿ ಪೊಲೀಸರು ಇನ್ನೂ ತನಿಖೆಯ ವಿವರಗಳನ್ನು ಬಿಡುಗಡೆ ಮಾಡಿಲ್ಲ.