ಮುಂಬೈ, ಆ. 15: ಇಬ್ಬರು ಮಹಿಳೆಯರು ಕಾನೂನು ದುರಪಯೋಗಪಡಿಸಲು ಯತ್ನಿಸಿದ ಘಟನೆ ನಡೆದಿದ್ದು ಭಾರಿ ಚರ್ಚೆ ಹುಟ್ಟು ಹಾಕಿದೆ. ಚಲಿಸುತ್ತಿದ್ದ ಟ್ಯಾಕ್ಸಿಯಲ್ಲಿ ಚಾಲಕನಿಗೆ ಕಿರುಕುಳ ನೀಡಿ 10 ಸಾವಿರ ರುಪಾಯಿ ನೀಡದಿದ್ದರೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಮಹಾರಾಷ್ಟ್ರದ ಕಲ್ಯಾಣ್‌ನಿಂದ ಭಿವಂಡಿ ಕಡೆಗೆ ಟ್ಯಾಕ್ಸಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಟ್ಯಾಕ್ಸಿ ಚಾಲಕ ಸಚಿನ್ ಶೇಂಡ್ಗೆ ಭಿವಂಡಿ ಕಡೆಗೆ ತೆರಳುತ್ತಿದ್ದರು. ಆಗ ಇಬ್ಬರು ಮಹಿಳೆಯರು ರಸ್ತೆ ಮಧ್ಯೆ ಕಾರು ತಡೆದು ಲಿಫ್ಟ್ ಕೇಳಿದ್ದಾರೆ. ವಾಹನ ಸ್ವಲ್ಪ ದೂರ ಸಾಗಿದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇಬ್ಬರು ಮಹಿಳೆಯರು ಚಾಲಕನಿಂದ 10,000 ರುಪಾಯಿ ಕೇಳಿದ್ದಾರೆ. ಚಾಲಕ ನಿರಾಕರಿಸಿದಾಗ ಲೈಂಗಿಕ ಕಿರುಕುಳದ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ವಿಡಿಯೊ ನೋಡಿ:
ತಮ್ಮ ಬಟ್ಟೆಗಳನ್ನು ತಾವೇ ಹರಿದು ಸುಳ್ಳು ಲೈಂಗಿಕ ದೌರ್ಜನ್ಯದ ದೂರು ನೀಡುವುದಾಗಿ ಹೆದರಿಸಿದ್ದಾರೆ. ಚಲಿಸುವ ಕಾರಿನೊಳಗೆ ನಡೆದ ಈ ಹೈಡ್ರಾಮಾದ ವಿಡಿಯೊ ವೈರಲ್ ಆಗಿದೆ. ಮಹಿಳೆಯರು ಟ್ಯಾಕ್ಸಿ ಚಾಲಕನ ಮೇಲೆ ಕೂಗುತ್ತ ನಿಂದಿಸುತ್ತಿರುವ ದೃಶ್ಯ ಸೆರೆಯಾಗಿವೆ. ಅವರಲ್ಲಿ ಒಬ್ಬಾಕೆ ಚಾಲಕನನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಸಹ ಕಾಣಬಹುದು.
8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ
ಚಾಲಕ ಇದ್ಯಾವುದಕ್ಕೂ ಜಗ್ಗದೆ ಪೊಲೀಸರಿಗೆ ಕರೆ ಮಾಡಿ ಠಾಣೆಯ ಕಡೆಗೆ ವಾಹನ ಚಲಾಯಿಸತೊಡಗಿದರು. ಟ್ಯಾಕ್ಸಿ ದುರ್ಗಡಿ ಸೇತುವೆ ದಾಟಿದ ನಂತರ ಪೊಲೀಸ್ ವಾಹನ ಕಾಣಿಸಿಕೊಂಡಾಗ ಪರಿಸ್ಥಿತಿ ಬದಲಾಯಿತು. ಪೊಲೀಸ್ ವಾಹನವನ್ನು ನೋಡಿ ಇಬ್ಬರು ಮಹಿಳೆಯರು ಚಲಿಸುತ್ತಿದ್ದ ಟ್ಯಾಕ್ಸಿಯಿಂದ ಇಳಿದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು.
ಈ ಘಟನೆಯು ಪ್ರಯಾಣಿಕರು ಹಾಗೂ ಟ್ಯಾಕ್ಸಿ ಚಾಲಕರನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವ ದಂಧೆಯ ಬಗ್ಗೆ ಕಳವಳ ಮೂಡಿಸಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಒಬ್ಬರು, ʼʼಇಂತಹ ಕಾನೂನು ದುರುಪಯೋಗ ಪಡಿಸುವ ಮಹಿಳೆಯರಿಗೆ ಸರಿಯಾದ ಶಿಕ್ಷೆ ನೀಡಬೇಕುʼʼ ಕಾಮೆಂಟ್ ಮಾಡಿದ್ದಾರೆ.