ಹೈದರಾಬಾದ್, ಜು. 16: ಹಿಂದೂ-ಮುಸ್ಲಿಂ ಕೋಮು ಸಂಘರ್ಷನೆ ಆಗಾಗ ಭುಗಿಲೇಳುತ್ತದೆ. ಇದೀಗ ಖಾಸಗಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಇಸ್ಲಾಂ ಧರ್ಮದ ‘ಕಲ್ಮಾ’ ಮತ್ತು ಸುರಾ’ವನ್ನು ಕಲಿಯುವಂತೆ ಹೋಮ್‌ವರ್ಕ್ ನೀಡಿದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಯೀದಾಬಾದ್‌ನ ಸಕ್ಸಸ್ ಶಾಲೆಯಲ್ಲಿ ಈ ಘಟನೆ (Viral News) ನಡೆದಿದ್ದು, ಶಿಕ್ಷಕಿ ಶೇಖ್ ಆಯಿಷಾ ಪರ್ವೀನ್ ವಿದ್ಯಾರ್ಥಿಗೆ ಈ ಹೋಮ್ ವರ್ಕ್ ನೀಡಿದ್ದಾರೆ.
2ನೇ ತರಗತಿಯ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ‘ಕಲ್ಮಾ’ ಮತ್ತು ಸುರಾ’ವನ್ನು ಕಲಿಯುವಂತೆ ಹೋಮ್‌ವರ್ಕ್ ನೀಡಲಾಗಿತ್ತು. ಈ ಆರೋಪದ ಮೇಲೆ ಹೈದರಾಬಾದ್ ಶಾಲೆಯ ಶಿಕ್ಷಕಿ ಶೇಖ್ ಆಯಿಷಾ ಪರ್ವೀನ್ ಅವರನ್ನು ವಜಾಗೊಳಿಸಲಾಗಿದೆ. ವಿದ್ಯಾರ್ಥಿಯ ಸಂಬಂಧಿಕರೊಬ್ಬರು ಪುಸ್ತಕವನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ವಿಡಿಯೊ ನೋಡಿ:
ಹೈದರಾಬಾದ್‌ನ ಸಯೀದಾಬಾದ್‌ನಲ್ಲಿರುವ ಸಕ್ಸಸ್ ಸ್ಕೂಲ್‌ನಲ್ಲಿ ಶಿಕ್ಷಕಿ ಶೇಖ್ ಆಯಿಷಾ ಪರ್ವೀನ್ 2ನೇ ತರಗತಿಯ ವಿದ್ಯಾರ್ಥಿಗೆ ‘ಕಲ್ಮಾ’ ಮತ್ತು ‘ಸುರಾ ಅಲ್-ಫಾತಿಹಾ’ ಓದಿ ಬಾಯಿಪಾಠ ಮಾಡಲು ಹೋಮ್‌ವರ್ಕ್ ನೀಡಿದ್ದರು. ಆಗ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಸಂಬಂಧಿ ಸುಪ್ರಿಯಾ ಗೌಡ್ ಎಂಬವವರು ಮಗುವಿನ ಪುಸ್ತಕ ಪರಿಶೀಲಿಸಿ ದಾಗ ಈ ಹೋಮ್‌ವರ್ಕ್ ನೀಡಿರುವುದು ಬೆಳಕಿಗೆ ಬಂದಿದೆ.
ಫ್ರಾನ್ಸ್‌ನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ; ಮುಂಜಾನೆ 4:30ಕ್ಕೆ ಒಬ್ಬಂಟಿಯಾಗಿ ಬೀದಿಯಲ್ಲಿ ಓಡಾಡಿದ ಭಾರತೀಯ ಮಹಿಳೆ
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಶಾಲಾ ಆಡಳಿತ ಮಂಡಳಿಯು ಶಿಕ್ಷಕಿಯನ್ನು ವಜಾ ಮಾಡಿದೆ. "ಶಾಲೆಗೆ ವಿವಿಧ ಧರ್ಮಗಳ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಬರುತ್ತಾರೆ. ಶಿಕ್ಷಣದಲ್ಲಿ ಧರ್ಮ ಯಾಕೆ? ಒಂದು ವೇಳೆ ಧರ್ಮವನ್ನು ಒಂದು ಕಲಿಸುವುದೇ ಆದಲ್ಲಿ, ಕೇವಲ ಒಂದನ್ನೇ ಅಲ್ಲದೆ ಭಗವದ್ಗೀತೆ ಬೈಬಲ್‌ಗೂ ಮಹತ್ವ ನೀಡಿ. ಸದ್ಯ ಶಿಕ್ಷಕಿಯನ್ನು ವಜಾಗೊಳಿಸಿ ಶಾಲಾ ಆಡಳಿತ ಮಂಡಳಿ ಒಳ್ಳೆಯ ಕೆಲಸ ಮಾಡಿದೆʼʼ ಎಂದು ಪೋಷಕರು ತಿಳಿಸಿದ್ದಾರೆ.