ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುಬಾರಿ ಮನೆಯ ಇಎಂಐ ಕಟ್ಟಲು ರಾಪಿಡೋ ಕೆಲಸ : 40 ಲಕ್ಷ ಸಂಬಳವಿದ್ದ ಟೆಕ್ಕಿ ಬದುಕು ಈಗ ಬೀದಿಗೆ!

Viral Video: ಐಟಿ ವಲಯದ ಉದ್ಯೋಗಿಯೊಬ್ಬರು ಕೆಲಸವನ್ನು ಕಳೆದುಕೊಂಡು ಇದೀಗ ಬೈಕ್ ಟ್ಯಾಕ್ಸಿ ಚಾಲಕರಾಗಿದ್ದಾರೆ. ಸದ್ಯ ಸಾಲದ ಮೇಲೆ ಖರೀದಿಸಿದ 1.4 ಕೋಟಿ ರೂಪಾಯಿ ಮನೆಯನ್ನು ಉಳಿಸಲು ಅವರು ಹೆಣಗಾಡುತ್ತಿದ್ದಾರೆ. ಈಗ ತನ್ನ ಫ್ಲಾಟ್‌ಗೆ 95,000 ರೂಪಾಯಿ EMI ಪಾವತಿಸಲು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ

ಸಾಲ ತೀರಿಸಲು ರಾಪಿಡೋ ಕೆಲಸ ಮಾಡುವ ಟೆಕ್ಕಿ

ದೆಹಲಿ,ಎ.11: ಕೆಲವೊಮ್ಮೆ ನಾವು ಆಯ್ಕೆ ಮಾಡುವ ನಿರ್ಧಾರ ನಮ್ಮ ಬದುಕನ್ನು ಹೇಗೆ ಬದಲಾಯಿಸುತ್ತವೆ ಅನ್ನೋದಕ್ಕೆ ಈ ಘಟನೆಯೇ (Viral News) ಸಾಕ್ಷಿಯಾಗಿದೆ. ಐಟಿ ವಲಯದ ಉದ್ಯೋಗಿ ಯೊಬ್ಬರು ಕೆಲಸವನ್ನು ಕಳೆದುಕೊಂಡು ಇದೀಗ ಬೈಕ್ ಟ್ಯಾಕ್ಸಿ ಚಾಲಕರಾಗಿದ್ದಾರೆ. ಸದ್ಯ ಸಾಲದ ಮೇಲೆ ಖರೀದಿಸಿದ 1.4 ಕೋಟಿ ರೂಪಾಯಿ ಮನೆಯನ್ನು ಉಳಿಸಲು ಅವರು ಹೆಣಗಾಡುತ್ತಿದ್ದಾರೆ.

40 ಲಕ್ಷ ರೂಪಾಯಿ ಸಂಬಳಗಳಿಸುತ್ತಿದ್ದ ಐಟಿ ಉದ್ಯೋಗಿಯೊಬ್ಬರು ಕೆಲಸದಿಂದ ವಜಾ ಗೊಂಡಿದ್ದಾರೆ. ಈಗ ತನ್ನ 1.4 ಕೋಟಿ ರೂಪಾಯಿ ಫ್ಲಾಟ್‌ಗೆ 95,000 ರೂಪಾಯಿ EMI ಪಾವತಿಸಲು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಇದು ಕೆಲಸದ ಅಭದ್ರತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ.

ವಿಡಿಯೋ ನೋಡಿ:



ದೆಹಲಿಯ ಸಮೀಪ ವಾಸವಿರುವ ಟೆಕ್ಕಿಯೊಬ್ಬರು ಉತ್ತಮ ಉದ್ಯೋಗದಲ್ಲಿದ್ದರು. ಆಗ ಬರುವ ಸಂಬಳದ ಆಯ್ಕೆಯ ಮೇರೆಗೆ ಗಾಜಿಯಾಬಾದ್ ನ "ಪ್ರತೀಕ್ ಗ್ರ್ಯಾಂಡ್ ಸಿಟಿ" ಎಂಬ ಸ್ಥಳದಲ್ಲಿ 1.4 ಕೋಟಿ ರೂಪಾಯಿ ಬೆಲೆಯ 3BHK ಫ್ಲಾಟ್ ಖರೀದಿ ಮಾಡಿದ್ದರು‌. ಇದಕ್ಕಾಗಿ ಅವರು ದೊಡ್ಡ ಮೊತ್ತದ ಸಾಲವನ್ನು ಕೂಡ ಪಡೆದಿದ್ದರು.ಆದರೆ ಅವರು ಸಾಲ ಪಡೆದ ಕೆಲವೇ ದಿನದಲ್ಲಿ ಮನೆಯನ್ನು ಕಳೆದುಕೊಂಡಿದ್ದಾರೆ.

Viral News: ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ತಿಂಗಳಿಗೆ 95,000 ರೂಪಾಯಿ ಇ ಎಂ ಐ ಕಟ್ಟಲಿದ್ದು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದಾಗ ಈ ಇಎಂಐ ಅವರಿಗೆ ಹೊರೆಯಾಗುತ್ತಿರಲಿಲ್ಲ. ಆದರೆ ಐಟಿ ವಲಯದಲ್ಲಿ ನಡೆದ ದಿಢೀರ್ ಉದ್ಯೋಗ ಕಡಿತದಿಂದಾಗಿ ಅವರು ಕೆಲಸ ಕಳೆದುಕೊಂಡರು. ಕಳೆದ ಮೂರು ತಿಂಗಳಿನಿಂದ ಯಾವುದೇ ಆದಾಯವಿಲ್ಲದೆ ಅವರು ಕಂಗಾಲಾಗಿದ್ದಾರೆ.

ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ನಿಭಾಯಿಸಲು, ಅವರು ರಾಪಿಡೋ ರೈಡರ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಪ್ರತಿ ರೈಡ್ ಅವರ ದೊಡ್ಡ ಮಾಸಿಕ ಬಾಕಿಗಳನ್ನು ಪೂರೈಸಲು ಸಣ್ಣ ಮೊತ್ತವನ್ನು ಕೊಡುಗೆ ನೀಡುತ್ತದೆ. ಸದ್ಯ ಈ ಸುದ್ದಿಯೂ ಹೆಚ್ಚಿನ ಸಂಬಳವಿದೆ ಎಂಬ ಕಾರಣಕ್ಕೆ ಅತಿಯಾದ ಸಾಲ ಮಾಡುವುದು ಎಷ್ಟು ಅಪಾಯ ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ.