ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶವೇ ಬೆಚ್ಚಿಬೀಳುವ ಘಟನೆ: ಪ್ರೀತಿಸಲು ಒಪ್ಪದ ಶಿಕ್ಷಕಿಯ ತುಟಿ ಸೀಳಿದ ಹದಿಹರೆಯದ ವಿದ್ಯಾರ್ಥಿ!

Viral News: ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತಂದಿರುವ ಘಟನೆಯೊಂದು ಕಂಡು ಬಂದಿದೆ. ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಆಕೆಯ ಎರಡೂ ತುಟಿಗಳನ್ನು ಕತ್ತರಿಸಿ ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದಿದೆ. ತನ್ನ ಪ್ರೀತಿ ಯನ್ನು ಶಿಕ್ಷಕರು ನಿರಾಕರಿಸಿದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ.

ಸಂಗ್ರಹ ಚಿತ್ರ

ಮೈನ್‌ಪುರಿ,ಫೆ.6: ವಿದ್ಯೆ ಕಲಿಸುವ ಶಿಕ್ಷಕರನ್ನು ದೇವರಂತೆ ಪೂಜಿಸಲಾಗುತ್ತದೆ. ಆದರೆ ಇಂತಹ ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತಂದಿರುವ ಘಟನೆಯೊಂದು ಕಂಡು ಬಂದಿದೆ. ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಆಕೆಯ ಎರಡೂ ತುಟಿಗಳನ್ನು ಕತ್ತರಿಸಿ ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿ ಯಲ್ಲಿ ನಡೆದಿದೆ. ತನ್ನ ಪ್ರೀತಿಯನ್ನು ಶಿಕ್ಷಕರು ನಿರಾಕರಿಸಿದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ. ಸದ್ಯ ವಿದ್ಯಾರ್ಥಿಯ ಈ ದುರ್ವತನೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಆಗ್ರಾ ರಸ್ತೆಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಅದೇ ಶಾಲೆಯಲ್ಲಿ ಓದುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್ ಕಾಲೇಜಿನಲ್ಲಿ ಶಿಕ್ಷಕಿ ಗೆ ನಿರಂತರ ಕಿರುಕುಳ ನೀಡುತ್ತಿದ್ದ. ಪೋಷಕರು-ಶಿಕ್ಷಕರ ಸಭೆಯಲ್ಲಿ ವಿದ್ಯಾರ್ಥಿನಿಯ ತಾಯಿಗೆ ಈ ಹಿಂದೆ ದೂರು ನೀಡಿದ್ದರೂ‌ ನಂತರ ವರ್ತನೆ ನಿಲ್ಲುತ್ತದೆ ಎಂದು ಭರವಸೆ ನೀಡಿದ್ದರೂ, ಕಿರುಕುಳ ಮುಂದುವರೆದಿದೆ.

Viral Video: ವಾಕಿಂಗ್ ತೆರಳಿದ್ದ ಮಾಜಿ ಶಾಸಕಿ ಮೇಲೆ ಏಕಾಏಕಿಯಾಗಿ ಹರಿದ ಕಾರು- ಶಾಕಿಂಗ್‌ ವಿಡಿಯೊ ಇಲ್ಲಿದೆ

ವಿದ್ಯಾರ್ಥಿಯ ಕಿರುಕುಳ ತಡೆಯಲಾಗದೆ ಶಿಕ್ಷಕಿ ಆ ಶಾಲೆಯ ಕೆಲಸಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ ಬೇರೆ ಶಾಲೆಗೆ ತೆರಳಿದ್ದರು. ಆದರೆ, ಆರೋಪಿ ವಿದ್ಯಾರ್ಥಿ ಅಲ್ಲಿಗೂ ಶಿಕ್ಷಕಿಯನ್ನು ಹಿಂಬಾಲಿಸುತ್ತಿದ್ದ. ಜನವರಿ 26 ರಂದು ಶಿಕ್ಷಕಿ ಶಾಲೆಯ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದಾಗ, ದಾರಿಯಲ್ಲಿ ವಿದ್ಯಾರ್ಥಿ ಅವರನ್ನು ಅಡ್ಡಗಟ್ಟಿದ್ದಾನೆ. ಅಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಆಕೆಯ ಎರಡೂ ತುಟಿಗಳನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘೋರ ಕೃತ್ಯದಲ್ಲಿ ಶಿಕ್ಷಕಿಯ ಎರಡೂ ತುಟಿಗಳು ತುಂಡಾಗಿದ್ದು, ಅವರು ತೀವ್ರವಾಗಿ ಗಾಯ ಗೊಂಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನೋಡಿ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಶಿಕ್ಷಕರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಸ್ಟೇಷನ್ ಹೌಸ್ ಅಧಿಕಾರಿ ಫತೇಹ್ ಬಹದ್ದೂರ್ ಸಿಂಗ್ ಹೇಳಿದ್ದಾರೆ. "ನಾವು ಪ್ರಸ್ತುತ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಸದ್ಯ ವಿದ್ಯಾರ್ಥಿಯ ನಡವಳಿಕೆ ಬಗ್ಗೆ ಹಲವಾರು ಆಕ್ರೋಶ ವ್ಯಕ್ತಪಡಿಸಿದ್ದಾರೆ.