ಕೇರಳ, ಮಾ.19: ಎಷ್ಟೇ ಕಷ್ಟಗಳಿದ್ದರೂ ನಗು- ನಗುತಾ ಬಾಳಬೇಕು ಎನ್ನುವುದನ್ನು ನೀವು ಕೇಳಿರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಕೇರಳ ಮಹಿಳೆಯ ಉತ್ಸಾಹವು ನಿಮ್ಮ ಹೃದಯವನ್ನು ಗೆಲ್ಲುವಂತೆ ಮಾಡಿದೆ. ಅವಳು ತನ್ನ ಕಷ್ಟಗಳ ನಡುವೆಯೂ ತುಂಬಾ ಹರ್ಷಚಿತ್ತದಿಂದ ಕಾಣಿಸಿಕೊಂಡಿರುವ ವಿಡಿಯೊವೊಂದು ಭಾರೀ ವೈರಲ್ (Viral Video) ಆಗಿದೆ. ತಲೆಯ ಮೇಲೆ ಭಾರವಾದ ಕಟ್ಟಿಗೆಯನ್ನು ಹೊತ್ತು ಬ್ಲಾಗರ್ ವೊಬ್ಬರ ಜೊತೆ ಇಂಗ್ಲೀಷ್ ನಲ್ಲಿ ಸಂವಹನ ನಡೆಸಿದ್ದಾರೆ.
ಮಹಿಳೆಯೂ ತಲೆಯ ಮೇಲೆ ಭಾರವಾದ ಕಟ್ಟಿಗೆಯನ್ನು ಹೊತ್ತು ಕೊಂಡು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವ ದೃಶ್ಯ ಕಂಡು ಬಂದಿದೆ. ಜೀವನ ಸಾಗಿಸಲು ಕಷ್ಟಪಟ್ಟು ಕೆಲಸ ಮಾಡ ಬೇಕಾಗಿದ್ದರೂ, ಆ ಮಹಿಳೆಯ ಮುಖದಲ್ಲಿ ನಗು ಕಾಣಿಸಿದೆ. ತನ್ನ ಕಷ್ಟಗಳ ಜೊತೆ ಖುಷಿಯನ್ನು ಕಾಣುವ ಮಹಿಳೆ ಟ್ರಾವೆಲ್ ವ್ಲಾಗರ್ ಜೊತೆ ತಮಾಷೆಯಾಗಿ ಮಾತನಾಡಿದ್ದಾರೆ.
ವಿಡಿಯೋ ನೋಡಿ:
ಮಹಿಳೆಯೂ ವ್ಲಾಗರ್ ಜೊತೆ ಇಂಗ್ಲೀಷ್ ನಲ್ಲಿ ಸಂವಹನ ನಡೆಸಿದ್ದಾರೆ. ನೀವು ಯೂಟ್ಯೂಬರ್ ಆಗಿದ್ದೀರಾ?", ಒಬ್ಬ ವ್ಯಕ್ತಿ ತನ್ನ ವೀಡಿಯೊವನ್ನು ರೆಕಾರ್ಡ್ ಮಾಡುವುದನ್ನು ನೋಡುತ್ತಾ ಆ ಮಹಿಳೆ ದೂರದಿಂದ ಕೇಳಿದ್ದಾರೆ. ಅದಕ್ಕೆ ವ್ಲಾಗರ್, "ಹೌದು, ನಾನು ಯೂಟ್ಯೂಬರ್..ಅವರು ಸಿಂಗಾಪುರ ತಲುಪುವ ಯೋಜನೆಗಳ ಬಗ್ಗೆ ಮಹಿಳೆ ಜೊತೆ ಹೇಳಿದಾಗ, ಆ ಮಹಿಳೆ, "ನಾನು ನಿಮ್ಮೊಂದಿಗೆ ಬರಬೇಕೇ?" ಈ ಕಟ್ಟಿಗೆಯನ್ನು ನಿಮ್ಮ ಸೈಕಲ್ ಮೇಲೆ ಇಟ್ಟು ಒಟ್ಟಿಗೆ ಹೋಗೋಣ" ಎಂದು ನಗುತ್ತಾ ಮಾತನಾಡಿಸಿದ್ದಾರೆ.
Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?
ನಿಮ್ಮ ಇಂಗ್ಲಿಷ್ ಅದ್ಭುತವಾಗಿದೆ" ಎಂದು ಬ್ಲಾಗರ್ ಹೇಳಿದಾಗ ನಗು ಬೀರಿದ್ದಾರೆ. ಅಲ್ಲದೆ ಬ್ಲಾಗರ್ ನೀವು ಬಹಳ ಬಲಿಷ್ಠ ಮಹಿಳೆ ಎಂದಾಗ ಪ್ರತಿದಿನ ಕೆಲಸ ಮಾಡಿದಾಗ ಶಕ್ತಿ ಹೆಚ್ಚಾಗುತ್ತದೆ ಎಂದು ಶ್ರಮದಾಯಕ ಕೆಲಸದ ಪಾಠ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕಾಮೆಂಟ್‌ಗಳ ವಿಭಾಗದಲ್ಲಿ ಮಹಿಳೆಯ ಉತ್ಸಾಹ ಬಗ್ಗೆ ಹಲವಾರು ಮೆಚ್ಚಿ ಕೊಂಡಿದ್ದಾರೆ. ಬಳಕೆದಾರರು, "ಅವಳು ಎಷ್ಟು ಶಕ್ತಿಶಾಲಿ ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಆಕೆ ಮಾತನಾಡುವ ಇಂಗ್ಲಿಷ್ ಗಿಂತ ಹೆಚ್ಚಾಗಿ, ವೀಡಿಯೊದಲ್ಲಿ ಎದ್ದು ಕಾಣುವ ಅಂಶವೆಂದರೆ, ಕಷ್ಟಗಳನ್ನು ಎದುರಿಸ ಬೇಕಾಗಿದ್ದರೂ ಸಹ, ಆ ಮಹಿಳೆಯ ಮುಖದಲ್ಲಿ ಇರುವ ಖುಷಿ ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು.