ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬರಿಗೈಯಲ್ಲಿ ಮೊಸಳೆಗೆ ಆಹಾರ ತಿನ್ನಿಸಿದ ಭೂಪ! ಬೆಚ್ಚಿಬೀಳಿಸುವ ವಿಡಿಯೊ ಇಲ್ಲಿದೆ ನೋಡಿ

ವ್ಯಕ್ತಿಯೊಬ್ಬ ಹೊಳೆಯ ದಡದಲ್ಲಿದ್ದ ಮೊಸಳೆಗೆ ಆಹಾರ ತಿನ್ನಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿಡಿಯೊದಲ್ಲಿ ದೈತ್ಯಾಕಾರದ ಮೊಸಳೆಯನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ ಮತ್ತು ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಬರಿಗೈಯಿಂದ ಮೊಸಳೆಗೆ ಆಹಾರ ನೀಡುವ ವ್ಯಕ್ತಿಯ ಧೈರ್ಯ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಮೊಸಳೆ‌ ಜೊತೆ ಚೆಲ್ಲಾಟವಾಡಿದ ಭೂಪ! ಶಾಕಿಂಗ್‌ ವಿಡಿಯೊ ನೋಡಿ

Profile pavithra Mar 11, 2025 1:03 PM

ಮೊಸಳೆಯನ್ನು ದೂರದಲ್ಲಿ ನೋಡಿದರೆ ಸಾಕು ಜನರು ಎದ್ದುಬಿದ್ದು ಓಡುತ್ತಾರೆ. ಅಲ್ಲದೇ ಮೊಸಳೆ ಮನುಷ್ಯರ ಮೇಲೆ ದಾಳಿ ಮಾಡಿದ ಸಾಕಷ್ಟು ಪ್ರಕರನಗಳು ಈ ಹಿಂದೆ ನಡೆದಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಹೊಳೆಯ ದಡದಲ್ಲಿದ್ದ ಮೊಸಳೆಗೆ ಆಹಾರ ತಿನ್ನಿಸಿದ್ದಾನೆ. ಆತ ಮೊಸಳೆಗೆ ಯಾವುದೇ ಭಯವಿಲ್ಲದೇ ಸಾಕುಪ್ರಾಣಿಗೆ ತಿನ್ನಿಸುವಂತೆ ಆಹಾರ ತಿನ್ನಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ನೇಚರ್ ಈಸ್ ಅಮೇಜಿಂಗ್ ಹ್ಯಾಂಡಲ್‍ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ ಇರುವ ದೈತ್ಯಕಾರದ ಮೊಸಳೆಯನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ ಮತ್ತು ಯಾವುದೇ ರಕ್ಷಣಾ ಸಾಧನಗಳಿಲ್ಲದೆ ತನ್ನ ಬರಿಗೈಯಿಂದ ಅದಕ್ಕೆ ಆಹಾರ ನೀಡುವ ವ್ಯಕ್ತಿಯ ಧೈರ್ಯ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಮೊಸಳೆಗೆ ನದಿಯ ದಡದಲ್ಲಿ ನಿಂತು ಆಹಾರವನ್ನು ನೀಡಿದ್ದಾನೆ. ಮೊಸಳೆ ಕೂಡ ಯಾವುದೇ ಅಂಜಿಕೆ ಇಲ್ಲದೇ ಅವನ ಕೈಯಲ್ಲಿದ್ದ ಆಹಾರವನ್ನು ತಿನ್ನಲು ನದಿಯ ದಡಕ್ಕೆ ಬಂದಿದೆ. ಆಹಾರ ತಿಂದ ಮೊಸಳೆ ಅವನ ಮೇಲೆ ಆಕ್ರಮಣ ಮಾಡದೆ ಹೋಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅವನ ಧೈರ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಸಳೆಗೆ ಆಹಾರ ತಿನ್ನಿಸುತ್ತಿರುವ ವಿಡಿಯೊ ಇಲ್ಲಿದೆ



ಈ ವಿಡಿಯೊ 6.5 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. "ಬಹುಶಃ ಅವನು ಮೊಸಳೆಯನ್ನು ಸಾಕಲು ಪ್ರಯತ್ನಿಸುತ್ತಿದ್ದಾನೆ, ಎಂತಹ ದೊಡ್ಡ ತ್ಯಾಗಮಯಿ" ಎಂದು ಒಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾನೆ. ಇನ್ನೊಬ್ಬನು, "ಜನರು ಮೂರ್ಖರು. ಪ್ರಕೃತಿಯು ಸಾಕುಪ್ರಾಣಿಗಳ ಮೃಗಾಲಯವಲ್ಲ” ಎಂದು ವ್ಯಂಗ್ಯವಾಡಿದ್ದಾನೆ. ಮೂರನೇಯವನು "ಈ ಕಾರಣದಿಂದಲೇ ಹೆಚ್ಚಿನ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ” ಎಂದು ಹೇಳಿದ್ದಾರೆ.

ಇಂತಹ ವಿಚಿತ್ರ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ವ್ಯಕ್ತಿಯೊಬ್ಬ ಹಾವಿಗೆ ಸ್ನಾನ ಮಾಡಿಸುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ, ಬೃಹತ್ ಕಾಳಿಂಗ ಸರ್ಪವು ವ್ಯಕ್ತಿಯ ಮುಂದೆ ಬಂದಾಗ ಮೊದಲಿಗೆ, ಆ ವ್ಯಕ್ತಿ ತನ್ನ ಅಂಗೈಯಲ್ಲಿದ್ದ ಶಾಂಪೂವನ್ನು ತೆಗೆದುಕೊಂಡು ಅದನ್ನು ಹಾವಿನ ದೇಹಕ್ಕೆ ಹಚ್ಚಿ ಸ್ನಾನ ಮಾಡಿಸಿದ್ದಾನೆ. ಹಾವು ಕೂಡ ಚಕಾರ ಎತ್ತದೇ ಸ್ನಾನವನ್ನು ಎಂಜಾಯ್‌ ಮಾಡಿತ್ತು.

ಈ ಸುದ್ದಿಯನ್ನೂ ಓದಿ:Viral Video: ಮೊಸಳೆಯ ಬಾಯಿಯನ್ನೇ ಕಚ್ಚಿ ಸಾವಿನಿಂದ ಪಾರಾದ ಜೀಬ್ರಾ: ಶಾಕಿಂಗ್‌ ವಿಡಿಯೊ ವೈರಲ್‌

ಇತ್ತೀಚೆಗೆ ನದಿಯಲ್ಲಿ ಮೊಸಳೆ ಮತ್ತು ಜೀಬ್ರಾ ನಡುವಿನ ಹೋರಾಟದ ದೃಶ್ಯದ ವಿಡಿಯೊವೊಂದು ಸಖತ್‌ ವೈರಲ್‌ ಆಗಿತ್ತು. ಜೀಬ್ರಾವನ್ನು ಬಾಯಲ್ಲಿ ಕಚ್ಚಿ ಹಿಡಿದ ಮೊಸಳೆ ಇನ್ನೇನು ಅದನ್ನು ಸೋಲಿಸಿಯೇ ಬಿಡುತ್ತದೆ ಎಂದುಕೊಂಡು ನೋಡುಗರು ಉಸಿರು ಬಿಗಿ ಹಿಡಿದು ಕುಳಿತಿದ್ದಾಗ ಆಗ ಭರ್ಜರಿ ಟ್ವಿಸ್ಟೊಂದು ಸಿಕ್ಕಿದ್ದು, ಇದ್ದಕ್ಕಿದ್ದಂತೆ ಜೀಬ್ರಾ ಮೊಸಳೆಯ ಬಾಯಿಯನ್ನು ಕಚ್ಚಿದೆ. ಜೀಬ್ರಾದ ಈ ಧೈರ್ಯಶಾಲಿ ತಂತ್ರವು ಮೊಸಳೆಯನ್ನು ಬೆಚ್ಚಿಬೀಳಿಸಿದೆ. ಮೊಸಳೆ ತನ್ನ ಹಿಡಿತವನ್ನು ಸಡಿಲಗೊಳಿಸಿದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಜೀಬ್ರಾ ತಕ್ಷಣ ತನ್ನ ಜೀವ ಉಳಿಸಿಕೊಳ್ಳಲು ನದಿಯಿಂದ ವೇಗವಾಗಿ ನಡೆದುಕೊಂಡು ಮೊಸಳೆಯ ಬಾಯಿಂದ ತಪ್ಪಿಸಿಕೊಂಡು ದಡ ಸೇರಿತ್ತು.