Viral Video: ಮೊಸಳೆಯ ಬಾಯಿಯನ್ನೇ ಕಚ್ಚಿ ಸಾವಿನಿಂದ ಪಾರಾದ ಜೀಬ್ರಾ: ಶಾಕಿಂಗ್ ವಿಡಿಯೊ ವೈರಲ್
Viral Video: ಜೀಬ್ರಾವೊಂದು ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಕ್ಷಕರ ಊಹೆಗೂ ಮೀರಿ ಜೀಬ್ರಾ ಮೊಸಳೆಯಿಂದ ಪಾರಾಗಿದನ್ನು ಕಂಡು ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
Source : Hindustan Times
ನವದೆಹಲಿ, ಜನವರಿ 15, 2025: ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ಘಟನೆಗಳು ಬಹಳ ಆಶ್ಚರ್ಯಗಳಿಂದ ತುಂಬಿರುತ್ತವೆ. ಅಂತಹದ್ದೇ ಒಂದು ಘಟನೆ ನಡೆದಿದೆ. ಜೀಬ್ರಾವೊಂದು ಮೊಸಳೆಯ ಬಾಯಿಗೆ ಸಿಲುಕಿ ಇನ್ನೇನು ಅದರ ಆಹಾರವಾಗಲಿದೆ ಎನ್ನುವಾಗ ತಪ್ಪಿಸಿಕೊಂಡ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ನೇಚರ್ ಇಸ್ ಅಮೇಜಿಂಗ್ ಎಂಬ ಖಾತೆಯಿಂದ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ನದಿಯಲ್ಲಿ ಮೊಸಳೆ ಮತ್ತು ಜೀಬ್ರಾ ನಡುವಿನ ಹೋರಾಟದ ದೃಶ್ಯ ಸೆರೆಯಾಗಿದೆ. ಜೀಬ್ರಾವನ್ನು ಬಾಯಲ್ಲಿ ಕಚ್ಚಿ ಹಿಡಿದ ಮೊಸಳೆ ಇನ್ನೇನು ಅದನ್ನು ಸೋಲಿಸಿಯೇ ಬಿಡುತ್ತದೆ ಎಂದುಕೊಂಡು ನೋಡುಗರು ಉಸಿರು ಬಿಗಿ ಹಿಡಿದಿದ್ದಾರೆ. ಆಗ ಭರ್ಜರಿ ಟ್ವಿಸ್ಟೊಂದು ಸಿಕ್ಕಿದ್ದು, ಇದ್ದಕ್ಕಿದ್ದಂತೆ ಜೀಬ್ರಾ ಮೊಸಳೆಯ ಬಾಯಿಯನ್ನು ಕಚ್ಚಿದೆ. ಜೀಬ್ರಾದ ಈ ಧೈರ್ಯಶಾಲಿ ತಂತ್ರವು ಮೊಸಳೆಯನ್ನು ಬೆಚ್ಚಿಬೀಳಿಸಿದೆ. ಮೊಸಳೆ ತನ್ನ ಹಿಡಿತವನ್ನು ಸಡಿಲಗೊಳಿಸಿದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಜೀಬ್ರಾ ತಕ್ಷಣ ತನ್ನ ಜೀವ ಉಳಿಸಿಕೊಳ್ಳಲು ನದಿಯಿಂದ ವೇಗವಾಗಿ ನಡೆದುಕೊಂಡು ಮೊಸಳೆಯ ಬಾಯಿಂದ ತಪ್ಪಿಸಿಕೊಂಡು ದಡ ಸೇರಿದೆ.
That zebra bit the damn croc 🤯 pic.twitter.com/EcUCNHTv11
— Nature is Amazing ☘️ (@AMAZlNGNATURE) January 8, 2025
ಈ ವಿಡಿಯೊ ಸೋಶಿಯಲ್ ಮೀಡಿಯಾ ವೀಕ್ಷಕರ ಗಮನವನ್ನು ಸೆಳೆದಿದೆ. ಹಾಗಾಗಿ ಇದು 15 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಜೀಬ್ರಾದ ಧೈರ್ಯ ಮತ್ತು ಅನಿರೀಕ್ಷಿತ ತಿರುವಿನ ಬಗ್ಗೆ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹುಲಿಯನ್ನು ಆನೆ ಮೇಲೆ ಕಟ್ಟಿ ಸವಾರಿ ಮಾಡಿದ ದುರುಳರು- ಹಳೆಯ ವಿಡಿಯೊ ಮತ್ತೆ ವೈರಲ್
ಒಬ್ಬ ನೆಟ್ಟಿಗರು ಆಶ್ಚರ್ಯದಿಂದ "ಇದಕ್ಕಾಗಿಯೇ ಪ್ರಕೃತಿ ವಿಸ್ಮಯವಾಗಿದೆʼʼ ಎನ್ನುವುದು, ಎಂದಿದ್ದಾರೆ. ಇನ್ನೊಬ್ಬರು, "ಜೀಬ್ರಾ ಹೋರಾಡಿದ ರೀತಿ ನಿಜವಾಗಿಯೂ ನಂಬಲು ಸಾಧ್ಯವಿಲ್ಲ!" ಎಂದು ತಿಳಿಸಿದ್ದಾರೆ. "ಮೊಸಳೆಗಳು ಅತ್ಯುನ್ನತ ಪರಭಕ್ಷಕಗಳಾಗಿರಬಹುದು. ಆದರೆ ಈ ಜೀಬ್ರಾಕ್ಕೆ ಹೋಲಿಸಿದರೆ ಅವು ಎಂತಹದ್ದು ಅಲ್ಲ ಎಂದು ಸಾಬೀತುಪಡಿಸಿದೆ" ಎಂದಿದ್ದಾರೆ. ಇನ್ನೊಬ್ಬರು ತಮಾಷೆಯಾಗಿ, "ಆ ಮೊಸಳೆ ಜೀಬ್ರಾದಿಂದ ತರಬೇತಿ ಪಡೆದಿದೆ - ಪ್ರಕೃತಿಯ ಕಥಾವಸ್ತುವಿನ ತಿರುವುಗಳು ಅತ್ಯುತ್ತಮವಾಗಿವೆ!" ಎಂದು ಹೇಳಿದ್ದಾರೆ.