ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shahid Afridi: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಸ್ವಾಗತಿಸಿದ ಕೇರಳ ಸಮುದಾಯ; ಕಿಡಿಕಾರಿದ ನೆಟ್ಟಿಗರು

ಪಾಕಿಸ್ತಾನ ಅಸೋಸಿಯೇಷನ್ ​​ದುಬೈ (PAD) ನಲ್ಲಿ ನಡೆಸಿದ ಕಾರ್ಯಕ್ರಮಕ್ಕೆ ಆಗಮಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೇರಳ ಸಮುದಾಯವು ಆತ್ಮೀಯವಾಗಿ ಸ್ವಾಗತ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ದುಬೈ: ಪಾಕಿಸ್ತಾನ ಅಸೋಸಿಯೇಷನ್ ​​ದುಬೈ (PAD) ನಡೆಸಿದ ಕಾರ್ಯಕ್ರಮಕ್ಕೆ ಆಗಮಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ( Shahid Afridi) ಕೇರಳ ಸಮುದಾಯವು (Kerala Community) ಅದ್ಧೂರಿಯಾಗಿ ಸ್ವಾಗತ ಕೋರಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗನನ್ನು ಕೇರಳ ಸಮುದಾಯವು ಖುಷಿಯಿಂದ ಸ್ವಾಗತಿಸಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ವೈರಲ್ ವಿಡಿಯೊದಲ್ಲಿ, ಅಫ್ರಿದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಭಾರತದಿಂದ ಆಗಮಿಸಿದ್ದ ಕೇರಳ ಸಮುದಾಯದ ಸದಸ್ಯರು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿಲ್ಲಿಸಿ "ಬೂಮ್ ಬೂಮ್" ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಅದೂ ಅಲ್ಲದೇ ಇತ್ತೀಚೆಗೆ ಅಫ್ರಿದಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಸೇನೆಯನ್ನು ಟೀಕಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಭಾರತವು ಸ್ವತಃ ಭಯೋತ್ಪಾದನೆಯನ್ನು ನಡೆಸಿ, ತಮ್ಮವರನ್ನೇ ಕೊಲ್ಲುತ್ತಿದೆ.ಆದರೆ ಅದರ ಹೊಣೆಯನ್ನು ಪಾಕಿಸ್ತಾನದ ಮೇಲೆ ಹೊರಿಸುತ್ತದೆ" ಎಂದು ವಿವಾದ್ಮಾತಕ ಹೇಳಿಕೆ ನೀಡಿದ್ದರು.

ವಿಡಿಯೊ ಇಲ್ಲಿದೆ ನೋಡಿ...



ದುಬೈನಲ್ಲಿರುವ ಕೇರಳ ಸಮುದಾಯವು ಅಫ್ರಿದಿಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದ ವಿಡಿಯೊ ವೈರಲ್ ಆದ ಕೂಡಲೇ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ವೈರಲ್ ಆದ ವಿಡಿಯೊಗೆ ಪ್ರತಿಕ್ರಿಯಿಸುತ್ತಾ, ನೆಟ್ಟಿಗರೊಬ್ಬರು "ದೇಶಭಕ್ತಿ ಸಿಕ್ಸ್‌ಗೆ ಹೋಯಿತು. ಎಂತಹ ನಾಚಿಕೆಗೇಡಿನ ಸಂಗತಿ" ಎಂದು ಟೀಕಿಸಿದ್ದಾರೆ.

ಮತ್ತೊಬ್ಬರು, "ನೀವು ನಿಮ್ಮ ರಾಷ್ಟ್ರಕ್ಕೆ ವಿಶ್ವಾಸದ್ರೋಹಿಯಾಗಿದ್ದೀರಿ. ಇದು ನಾಚಿಕೆಗೇಡು!" ಎಂದಿದ್ದಾರೆ. "ಅವರಲ್ಲಿ ಭಾರತ ಮೂಲದವರು ಯಾರೂ ಇಲ್ಲವೇ?" ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಏರ್‌ಪೋರ್ಟ್‌ನಲ್ಲೇ ನೀರಿಲ್ಲ... ನೀರಿಲ್ಲ- ಪಾಕ್‌ ನಟಿಯ ವಿಡಿಯೊ ಫುಲ್‌ ವೈರಲ್‌!

ಭಾರತದ ವಿರುದ್ಧ ಅಫ್ರಿದಿ ಅವಹೇಳನಕಾರಿ ಹೇಳಿಕೆ ನೀಡಿದ ನಂತರ, ಭಾರತ ಸರ್ಕಾರ ಅವರ ಯುಟ್ಯೂಬ್ ಚಾನೆಲ್ ಅನ್ನು ದೇಶದಲ್ಲಿ ನಿಷೇಧಿಸಿದೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಶೋಯೆಬ್ ಅಖ್ತರ್, ಬಸಿತ್ ಅಲಿ ಜತೆಗೆ ಅಫ್ರಿದಿ ಅವರ ಚಾನಲ್‌ ಕೂಡ ಭಾರತದಲ್ಲಿ ನಿಷೇಧಿಸಲ್ಪಟ್ಟಿದೆ.