ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಯ್ಯೋ! ವಿಷಕಾರಿ ಹಾವಿನೊಂದಿಗೆ ಹಾಸ್ಯಮಯ ಸಂಭಾಷಣೆ; ವ್ಯಕ್ತಿಯ ಹುಚ್ಚಾಟದ ವಿಡಿಯೋ ವೈರಲ್‌

Viral Video: ಮಧ್ಯಪ್ರದೇಶದ ಛತ್ತರಪುರದಲ್ಲಿ ವ್ಯಕ್ತಿಯೊಬ್ಬರು ಭಯಂಕರ ವಿಷಪೂರಿತ ನಾಗರ ಹಾವಿನ ಜೊತೆ ತಮಾಷೆಯಾಗಿ ಮಾತನಾಡುತ್ತ ಕುಳಿತಿರುವ ವಿಡಿಯೋ ಎಲ್ಲರನ್ನೂ ದಂಗಾಗಿಸಿದೆ. ಹಾವು ತನ್ನ ಹತ್ತಿರ ಬರುತ್ತಿದ್ದರೂ ವ್ಯಕ್ತಿ ಶಾಂತವಾಗಿ ಕೂತು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಭಯಾನಕ ವಿಡಿಯೊ ಭಾರೀ ವೈರಲ್ ಆಗಿದೆ.

ವಿಷಕಾರಿ ಹಾವಿನ ಜೊತೆ ಚಳಿ ಕಾಯಿಸುತ್ತಾ ಹರಟೆ ಹೊಡೆದ ವ್ಯಕ್ತಿ

ಛತ್ತರಪುರ, ಡಿ.2: ಹಾವನ್ನು ಕಂಡರೆ ಸಾಕು ಬೆಚ್ಚಿ ಬೀಳುತ್ತಾರೆ. ಆದರೆ ಕೆಲವರು ಇದಕ್ಕೆ ಕ್ಯಾರೇ ಎನ್ನದೆ ಹಾವಿನ ಜೊತೆ ಸರಸ ಆಡುವವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯಪ್ರದೇಶದ ಛತ್ತರಪುರದಲ್ಲಿ ವ್ಯಕ್ತಿಯೊಬ್ಬರು ಭಯಂಕರ ವಿಷಪೂರಿತ ನಾಗರ ಹಾವಿನ ಜೊತೆ ತಮಾಷೆಯಾಗಿ ಮಾತನಾಡುತ್ತ ಕುಳಿತಿರುವ ವಿಡಿಯೋ ಎಲ್ಲರನ್ನೂ ದಂಗಾಗಿಸಿದೆ. ಹಾವು ತನ್ನ ಹತ್ತಿರ ಬರುತ್ತಿದ್ದರೂ ವ್ಯಕ್ತಿ ಶಾಂತವಾಗಿ ಕೂತು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಭಯಾನಕ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಈ ಘಟನೆ ಕಂಡು ಬಂದಿದೆ. ತೀವ್ರ ಚಳಿಯ ನಡುವೆ ರಸ್ತೆ ಪಕ್ಕದಲ್ಲಿಯೆ ವ್ಯಕ್ತಿಯೊಬ್ಬರು ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ವಿಷಕಾರಿ ಹಾವು ಕೃಷ್ಣಸರ್ಪವೊಂದು ಎಂಟ್ರಿ ನೀಡಿದೆ. ಆದರೆ ಆತ ಈ ಹಾವನ್ನು ನೋಡಿ ಹೆದರುವ ಬದಲು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ, ಆ ಹಾವೂ ಕೂಡ ಹೆಡೆ ಬಿಚ್ಚಿ ಶಾಂತವಾಗಿ ಆತನ ಹತ್ತಿರವೆ ನಿಂತಿದೆ.

ವಿಡಿಯೋ ನೋಡಿ:



ವೀಡಿಯೊದಲ್ಲಿ ವ್ಯಕ್ತಿ ಬೆಂಕಿಯ ಬಳಿ ಶಾಂತವಾಗಿ ಕುಳಿತಿರುವುದನ್ನು ಮತ್ತು ಅವನ ಪಕ್ಕದಲ್ಲಿ ಕಪ್ಪು ನಾಗರಹಾವು ಇರುವುದನ್ನು ಕಾಣಬಹುದು. ಆದರೆ ಆ ವ್ಯಕ್ತಿ ಅದರೊಂದಿಗೆ ಹಾಸ್ಯಮಯ ಮತ್ತು ಸ್ನೇಹಪರ ರೀತಿಯಲ್ಲಿ ಮಾತನಾಡುತ್ತಾನೆ. ವ್ಯಕ್ತಿಯು ಚಳಿ ಕಾಯಿಸುತ್ತಾ ಹಾವನ್ನುದ್ದೇಶಿಸಿ, "ನೋಡು, ನಿನಗೆ ತೊಂದರೆಯಾಗಬಾರದು ಎಂದು ಇಲ್ಲಿ ಕೂರಿಸಿದ್ದೇನೆ. ಸುಮ್ಮನೆ ಶಾಂತವಾಗಿ ಕುಳಿತು ಬೆಂಕಿ ಕಾಯಿಸಿಕೊ, ಯಾರಿಗೂ ತೊಂದರೆ ಮಾಡಬೇಡ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

Viral Video: ಪ್ರಧಾನಿಗೆ ಸ್ವಾಗತ ಕೋರಲು ಅಳವಡಿಸಿದ್ದ ಹೂಕುಂಡಗಳನ್ನೇ ಕದ್ದೊಯ್ದ ಕಿಡಿಗೇಡಿಗಳು! ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಆ ವ್ಯಕ್ತಿ ನಾಗರಹಾವಿಗೆ ''ನಿನೇಗೇನಾದರೂ ಸಮಸ್ಯೆ ಇದೆಯೇ ಎಂದು ಕೇಳುತ್ತಾನೆ .ಇಲ್ಲದಿದ್ದಲ್ಲಿ ಆರಾಮವಾಗಿ ಬೆಂಕಿಯ ಶಾಖ ತಗೋ" ಎಂದು ಆ ವ್ಯಕ್ತಿ ಹಾವನ್ನು ಬಹಳ ಪ್ರೀತಿಯಿಂದ ವಿಚಾರಿಸಿ ಕೊಳ್ಳುತ್ತಾನೆ. ವ್ಯಕ್ತಿ ಮಾತನಾಡುತ್ತಿದ್ದರೆ, ಹಾವು ಕೂಡ ತನ್ನ ಹೆಡೆಯನ್ನು ಬಿಚ್ಚಿ ಆತನ ಮಾತಿಗೆ ಸ್ಪಂದಿಸುತ್ತಿರುವಂತೆ ಕಂಡುಬರುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಹಾವು ಮತ್ತು ಮಾನವನ ನಡುವಿನ ಅಚ್ಚರಿಯ ಬಾಂಧವ್ಯ ಎಂದು ಬರೆದುಕೊಂಡಿದ್ದಾರೆ. ಕೆಲವರು ಇದು ಅಪಾಯಕಾರಿ ಸಾಹಸ ಎಂದು ಎಚ್ಚರಿಕೆ ನೀಡಿದ್ದಾರೆ...