ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‌Viral Video: ಜೆಸಿಬಿಯನ್ನು ಕೆಸರಿನಲ್ಲಿ ಮುಳುಗಿಸಿಟ್ಟ ಆಪರೇಟರ್‌; ಕಾರಣ ಕೇಳಿದ್ರೆ ನೀವು ಬಿದ್ದು ಬಿದ್ದು ನಗ್ತೀರಿ!

ಬಾಕಿ ಹಣ ಪಾವತಿಸದ ಕಾರಣ ಜೆಸಿಬಿ ಡ್ರೈವರ್‌ ಒಬ್ಬ ಕೆಲಸ ಮಾಡಲು ನಿರಾಕರಿಸಿ ಜೆಸಿಬಿ ಮೆಷಿನ್‍ ಅನ್ನು ಕೆಸರಿನಲ್ಲಿ ಅರ್ಧ ಮುಳುಗಿಸಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಅಗಿದೆ. ನೆಟ್ಟಿಗರು ಕೂಡ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪಾಟ್ನಾ: ಬಿಹಾರದ ಜೆಸಿಬಿ ಆಪರೇಟರ್ ಒಬ್ಬರ ತಮಾಷೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಹಣ ಪಾವತಿಸದಿದ್ದಕ್ಕೆ ಕೆಲಸ ಮಾಡಲು ನಿರಾಕರಿಸಿದ ಜೆಸಿಬಿ ಡ್ರೈವರ್‌ ತನ್ನ ಜೆಸಿಬಿಯನ್ನು ಕೆಸರಿನಲ್ಲಿ ಮುಳುಗಿಸಿ, ತನ್ನ ಬಾಕಿ ಹಣವನ್ನು ನೀಡುವವರೆಗೂ ತಾನು ಹಿಂದೆ ತರುವುದಿಲ್ಲ ಎಂದು ಆತ ಹೇಳಿದ್ದಾನೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಅನೇಕರು ತಮಾಷೆಯ ಕಾಮೆಂಟ್‍ ಮಾಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ, ಕೆಸರಿನಲ್ಲಿ ಅರ್ಧ ಮುಳುಗಿದ ಜೆಸಿಬಿಯಲ್ಲಿ ಕುಳಿತಿರುವ ಡ್ರೈವರ್, ಫೋನ್‌ನಲ್ಲಿ ಗುತ್ತಿಗೆದಾರರೊಂದಿಗೆ ಮಾತನಾಡುವುದು ಕಂಡುಬಂದಿದೆ. ಹಣ ನೀಡದಿದ್ದರೆ ಯಂತ್ರ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾನೆ.

ವಿಡಿಯೊ ನೋಡಿ...



ಸಮಯಕ್ಕೆ ಸರಿಯಾಗಿ ಹಣ ಸಿಗದ ಕಾರಣ ಬೇಸತ್ತ ಆಪರೇಟರ್ ಈ ರೀತಿಯಾಗಿ ಹೇಳಿದ್ದಾನಂತೆ. ಜೆಸಿಬಿ ಯಂತ್ರದ ಕ್ಯಾಬಿನ್‍ ಕೆಸರಿನ ನೀರಿನಲ್ಲಿ ಅರ್ಧ ಮುಳುಗಿದ್ದು, ಹಣ ನೀಡದಿದ್ದರೆ ಸಂಪೂರ್ಣ ಕ್ಯಾಬಿನ್ ಅನ್ನು ನೀರಿನಲ್ಲಿ ಮುಳುಗಿಸುವುದಾಗಿ ಡ್ರೈವರ್‌ ಹೇಳಿದ್ದಾನೆ. ಇದು ಜಗಳವಲ್ಲ! ಹಣ ವಸೂಲಿ ಮಾಡುವ ಒಂದು ತಂತ್ರ ಎಂದು ಡ್ರೈವರ್‌ ಹತಾಶೆ ಹಾಗೂ ತಮಾಷೆಭರಿತವಾಗಿ ಹೇಳಿದ್ದಾನೆ.

ಈ ವಿಡಿಯೊ ಈಗಾಗಲೇ 2.1 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ನೆಟ್ಟಿಗರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ "ತುಂಬಾ ಒಳ್ಳೆಯ ಐಡಿಯಾ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಅಮೆರಿಕದ ಕಾರ್ಮಿಕರಿಗೆ ವಡಾ-ಚಟ್ನಿ ಟ್ರೀಟ್‌; ವಿಡಿಯೊ ಇಲ್ಲಿದೆ ನೋಡಿ

ಜನನಿಬಿಡ ರಸ್ತೆಯಲ್ಲಿ ಜೆಸಿಬಿ ನಿಲ್ಲಿಸಿ ಚಾಲಕನೊಬ್ಬ ನಿದ್ರಿಸುತ್ತಿರುವ ವಿಡಿಯೊ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಇದನ್ನು ತಮಾಷೆಯೆಂದು ಕಂಡುಕೊಂಡರೆ, ಇತರರು ಕಳವಳ ವ್ಯಕ್ತಪಡಿಸಿದ್ದರು. ಈ ವಿಡಿಯೊ ಕಟ್ಟಡ ಕಾರ್ಮಿಕರು ಎದುರಿಸುತ್ತಿರುವ ಒತ್ತಡಗಳು ಮತ್ತು ಅಪಾಯಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಘಟನೆ ನಡೆದ ಸ್ಥಳದ ಬಗ್ಗೆ ತಿಳಿದು ಬಂದಿಲ್ಲ.