ವಾಷಿಂಗ್ಟನ್: ಈಗ ಯಾರೂ ಕೂಡ ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ಮುಂದೆ ಹೋಗಲ್ಲ. ಅದರಲ್ಲೂ ಹಂಚಿ ತಿನ್ನುವ ಪದ್ಧತಿಯಂತೂ ದೂರವೇ ಉಳಿದಿದೆ. ನಾವಾಯ್ತು ನಮ್ಮ ಪ್ರಪಂಚವಾಯಿತು ಎಂದು ಸುಮ್ಮನಾಗಿ ಬಿಡುತ್ತಾರೆ. ಒಂದೊಳ್ಳೆ ಪ್ರೀತಿಯ ಎಂಥವರನ್ನು ಕರಗಿಸಿಬಿಡುತ್ತದೆಯಂತೆ. ಆದರೀಗ ಮಾತನಾಡುವುದಕ್ಕೆ ಕೂಡ ಸಮಯವಿಲ್ಲದವರ ಹಾಗೇ ವರ್ತಿಸುತ್ತೇವೆ.ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ.ಸೋಶಿಯಲ್ ಮೀಡಿಯಾದಲ್ಲೊಂದು ಪಂಜಾಬಿ ದಂಪತಿಯ ವಿಡಿಯೊವೊಂದು ಸಖತ್ ವೈರಲ್ ಆಗಿದೆ.ಅಮೆರಿಕದ ತಮ್ಮ ಮನೆಯಲ್ಲಿ ಗರಿಗರಿಯಾದ ಪಕೋಡ ಮಾಡಿದ ಪಂಜಾಬಿ ದಂಪತಿ ತಮ್ಮ ನೆರೆಹೊರೆಯವರಿಗೆ ಈ ಪಕೋಡವನ್ನು ಹಂಚಿ ತಿಂದಿದ್ದಾರಂತೆ. ನೆಟ್ಟಿಗರು ಈ ವಿಡಿಯೊ(Viral Video) ನೋಡಿ ಸಖತ್ ಥ್ರಿಲ್ ಆಗಿದ್ದಾರೆ.
ಈ ಹೃದಯಸ್ಪರ್ಶಿ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರಾದ ಸೋನಿಯಾ ಕೌರ್ ಹಂಚಿಕೊಂಡಿದ್ದಾರೆ.ವೈರಲ್ ಆದ ವಿಡಿಯೊದಲ್ಲಿ ಅವರ ತಂದೆ-ತಾಯಿ ಗರಿಗರಿಯಾದ ಪಕೋಡಗಳನ್ನು ತಯಾರಿಸಿ ಚಟ್ನಿ ಜೊತೆ ಅದನ್ನು ತಟ್ಟೆಯಲ್ಲಿಟ್ಟು, ತಮ್ಮ ನೆರೆಯವರ ಮನೆಗೆ ಅದನ್ನು ಕೊಡಲು ಹೋಗಿದ್ದಾರಂತೆ. ಇನ್ನು ನೆರೆಮನೆಯವಳಾದ ಪೆನ್ನಿ ಇದನ್ನು ಕಂಡು ಸಿಕ್ಕಾಪಟ್ಟೆ ಖುಷಿಯಾಗಿದ್ದಾಳಂತೆ.
ಈ ಸುದ್ದಿಯನ್ನೂ ಓದಿ:Viral Video: ಆಟೋ ಚಾಲಕನ ಮಾನವೀಯತೆಗೆ ಮನಸೋತ ವಿದೇಶಿ ಮಹಿಳೆ; ವಿಡಿಯೊ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊ ಈಗಾಗಲೇ 7.7 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದಿದೆ. ದಂಪತಿಗಳ ಆತಿಥ್ಯ ಮತ್ತು ಉದಾರ ಮನೋಭಾವವನ್ನು ಕಂಡು ನೆಟ್ಟಿಗರು ಕೊಂಡಾಡಿದ್ದಾರೆ.
ನೆಟ್ಟಿಗರೊಬ್ಬರು ಇದಕ್ಕೆ ಕಾಮೆಂಟ್ ಮಾಡಿ "ಮಾನವೀಯತೆಯು ಹೀಗೆಯೇ ಕೆಲಸ ಮಾಡಬೇಕು" ಎಂದು ಬರೆದಿದ್ದಾರೆ. "ಪಂಜಾಬಿ ಹೃದಯಗಳು ನಿಜವಾಗಿಯೂ ಚಿನ್ನದಿಂದ ಮಾಡಲ್ಪಟ್ಟಿದೆ" ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ನೆರೆಹೊರೆಯವರ ನಡುವಿನ ಈ ವಿನಿಮಯವು ಸಂಸ್ಕೃತಿಗಳ ನಡುವಿನ ಸೇತುವೆಯಾಗಿದೆ ಎಂದು ಕೆಲವರು ಹೇಳಿದ್ದಾರೆ.