ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾತ್ರಿ 9 ಗಂಟೆಯಾದ್ರೂ ಈ ದೇಶದಲ್ಲಿ ಕತ್ತಲಾಗುವುದೇ ಇಲ್ಲ; ಸೂರ್ಯ ಮುಳುಗದ ನಾಡಿನ ಕುರಿತು ಭಾರತೀಯ ಹೇಳಿದ್ದೇನು?

Viral Video: ಡೆನ್ಮಾರ್ಕ್‌ನಲ್ಲಿ ವಾಸಿಸುವ ಭಾರತೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಲ್ಲಿನ ದೈನಂದಿನ ಪ್ರಕ್ರಿಯೆ ಕಂಡು ಅವರೇ ಶಾಕ್ ಆಗಿ ಹೋಗಿದ್ದಾರೆ. ರಾತ್ರಿ 9 ಗಂಟೆಯಾದರೂ ಸೂರ್ಯ ಮುಳಗದೇ ಇರುವುದನ್ನು ಕಂಡು ಯುವಕ ಅಚ್ಚರಿಗೆ ಒಳಗಾಗಿದ್ದಾನೆ‌. ಡೆನ್ಮಾರ್ಕ್‌ನ ವಿಚಿತ್ರ ‘ಹಗಲು’ ಕಂಡು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ...

ಡೆನ್ಮಾರ್ಕ್ ನ ‘ಹಗಲು’ ಕಂಡು ಬೆರಗಾದ ಭಾರತೀಯ ಯುವಕ

ಡೆನ್ಮಾರ್ಕ್,ಜೂ.18: ಇತ್ತೀಚೆಗೆ ವಿದೇಶದಲ್ಲಿ ಕೆಲಸ ಮಾಡುವ ಅನೇಕ ಭಾರತೀಯರು ಇದ್ದಾರೆ. ಆದರೆ ಅಲ್ಲಿನ ವಾತಾವರಣ, ಆಹಾರ, ಹವಾಮಾನಕ್ಕೆ ಒಗ್ಗಿಕೊಳ್ಳವುದು ಒಂದು ದೊಡ್ಡ ಸವಾಲು ಆಗಿರುತ್ತದೆ. ಇದೀಗ ಡೆನ್ಮಾರ್ಕ್‌ನಲ್ಲಿ ವಾಸಿಸುವ ಭಾರತೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಲ್ಲಿನ ದೈನಂದಿನ ಪ್ರಕ್ರಿಯೆ ಕಂಡು ಅವರೇ ಶಾಕ್ ಆಗಿ ಹೋಗಿದ್ದಾರೆ. ರಾತ್ರಿ 9 ಗಂಟೆಯಾದರೂ ಸೂರ್ಯ ಮುಳಗದೇ ಇರುವುದನ್ನು ಕಂಡು ಯುವಕ ಅಚ್ಚರಿಗೆ ಒಳಗಾಗಿದ್ದಾನೆ‌. ಡೆನ್ಮಾರ್ಕ್‌ನ ವಿಚಿತ್ರ ‘ಹಗಲು’ ಕಂಡು ಸೋಷಿಯಲ್ ಮೀಡಿಯಾದಲ್ಲಿ (Viral Video) ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

ಸಾಮಾನ್ಯವಾಗಿ ಭಾರತದಲ್ಲಿ ರಾತ್ರಿ 7 ಕ್ಕೆ ಕತ್ತಲೆ ಆವರಿಸಿ ಕೊಂಡಿರುತ್ತದೆ. ಆದರೆ ಯುರೋಪ್ ನ ಡೆನ್ಮಾರ್ಕ್‌ನಲ್ಲಿ ರಾತ್ರಿ 9 ಗಂಟೆಯಾದರೂ ಸೂರ್ಯ ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ. ಭಾರತೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಲ್ಲಿನ ಈ ದೈನಂದಿನ ಭಾಗವು ಆಶ್ಚರ್ಯದ ಸಂಗತಿಯಾಗಿ ಉಳಿದಿದೆ. ಐಟಿ ವೃತ್ತಿಪರ ನಿಕ್ ಬಿಶ್ಟ್ ಈ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು ವೀಕ್ಷಕರಿಗೆ ಡೆನ್ಮಾರ್ಕ್‌ನ ವಿಸ್ತೃತ ಹಗಲಿನ ನೋಟವನ್ನೇ ರಾತ್ರಿ ಸಮಯವೂ ನೀಡುತ್ತಿದೆ.

ವಿಡಿಯೋ ನೋಡಿ:



ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಯೂರೋಪ್‌ನ ಜೀವನ ಶೈಲಿಯ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡ ಬಿಶ್ಟ್, "ಡೆನ್ಮಾರ್ಕ್‌ನಲ್ಲಿ ರಾತ್ರಿ 9 ಗಂಟೆಗೆ ಹೀಗಿದೆ" ಎಂದು ಶೀರ್ಷಿಕೆ ನೀಡಿದ್ದಾರೆ. ಐಟಿ ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ಕೆಲಸಕ್ಕಾಗಿ ವಿದೇಶಕ್ಕೆ ಸ್ಥಳಾಂತರ ಗೊಳ್ಳಲು ಬಯಸುವವರಿಗೆ ಶೀಘ್ರದಲ್ಲೇ ಇಲ್ಲಿನ ವಾತಾವರಣ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ‌

Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

​ವೀಡಿಯೊದಲ್ಲಿ, ಹಗಲಿನ ಬೆಳಕು ಹೇರಳವಾಗಿರುವುದರಿಂದ ತನ್ನ ಮನಸ್ಸು ಇನ್ನೂ ಹಗಲು ಎಂದು ಭಾವಿಸುತ್ತಿದೆ. ರಾತ್ರಿಯ ವಾತಾವರಣವನ್ನು ಸೃಷ್ಟಿಸಲು ಮತ್ತು ನಿದ್ರೆಗೆ ಸಿದ್ಧರಾಗಲು ತಾನು ಕಿಟಕಿಗೆ ಪರದೆಯನ್ನು ಹಾಕಿಕೊಳ್ಳುತ್ತೇನೆ‌‌.​ ವಿಡಿಯೋದ ಮೊದಲ ಭಾಗದಲ್ಲಿ ರೂಮ್ ಸಾಮಾನ್ಯ ರಾತ್ರಿಯ ವೇಳೆಯಂತೆ ಕತ್ತಲಾಗಿರುತ್ತದೆ. ಒಂದು ಸಣ್ಣ ದೀಪ ಮಾತ್ರ ಉರಿಯುತ್ತಿರುತ್ತದೆ. ಆದರೆ, ಅವರು ಕಿಟಕಿಯ ಪರದೆಯನ್ನು ಪಕ್ಕಕ್ಕೆ ಸರಿಸಿದ ತಕ್ಷಣ, ತೀವ್ರವಾದ ಸೂರ್ಯನ ಬೆಳಕು ಕೋಣೆ ಯೊಳಗೆ ಬರುವಂತಿದೆ. ಹೊರಗಿನ ಆಕಾಶವನ್ನು ನೋಡಿದರೆ ಅದು ರಾತ್ರಿ 9 ಗಂಟೆ ಎನ್ನಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ನೀಡುತ್ತದೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಬ್ಲ್ಯಾಕೌಟ್ ಪರದೆಗಳು ಈ ಪ್ರದೇಶಗಳಲ್ಲಿ ಬಹುತೇಕ ಅಗತ್ಯವಾಗುತ್ತವೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ಸನ್ನಿವೇಶ ಹಗಲಿನಂತಯೇ ಇದೆ.‌..ರಾತ್ರಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.