ರೈಲ್ವೆ ಜಂಕ್ಷನ್‌ನಲ್ಲಿ ಮೂರು ಹೈಸ್ಪೀಡ್ ರೈಲು (Train)ಗಳು ಸರಾಗವಾಗಿ ಒಂದರ ನಂತರ ಒಂದು ದಾಟುತ್ತಿರುವುದನ್ನು ತೋರಿಸುವ ಅದ್ಭುತ ಅನಿಮೇಟೆಡ್ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೋಡುಗರನ್ನು ಬೆರಗಾಗಿಸಿದೆ. ಆದರೆ ಇದು ನಿಜವಾದ ದೃಶ್ಯಗಳಲ್ಲ ಮತ್ತು ಅದರಲ್ಲಿ ಕಾಣಿಸಿಕೊಂಡಿರುವ ರೈಲುಗಳು ನಿಜವಾದ ವಂದೇ ಭಾರತ್ ರೈಲುಗಳಲ್ಲ, ಬದಲಾಗಿ 3ಡಿ ಅನಿಮೇಷನ್ ಎನ್ನಲಾಗಿದೆ. ಈ ವೈರಲ್ ವಿಡಿಯೊದಲ್ಲಿ ಪ್ರತಿಯೊಂದೂ ರೈಲು ಲೂಪಿಂಗ್ ಟ್ರ್ಯಾಕ್ ಅಲ್ಲಿ ಬರುವಾಗ ಒಂದಕ್ಕೊಂದು ಡಿಕ್ಕಿ ಹೊಡೆಯದೆ ಸಣ್ಣ ಅಂತರದಲ್ಲಿ ಮಾರ್ಗಗಳನ್ನು ದಾಟುವುದು ಸೆರೆಯಾಗಿದೆ.
ಅದರಲ್ಲಿದ್ದ ರೈಲುಗಳು ನಿಜವಾದ ವಂದೇ ಭಾರತ್ ರೈಲುಗಳಲ್ಲ, ಬದಲಾಗಿ 3D ಮಾದರಿಗಳಾಗಿವೆ ಎನ್ನಲಾಗಿದೆ. ಈ ರೀತಿಯ ಜಂಕ್ಷನ್ ವಿನ್ಯಾಸ ಪ್ರಸ್ತುತ ಭಾರತದಲ್ಲಿ ಅಥವಾ ಬೇರೆಡೆ ಕಂಡುಬರುವುದಿಲ್ಲ ಎನ್ನಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೊದಲ್ಲಿ “3 ವಂದೇ ಭಾರತ್ ರೈಲುಗಳು ಒಂದರ ನಂತರ ಒಂದು ಸರಾಗವಾಗಿ ದಾಟುತ್ತಿವೆ, ಬೇರೆ ಯಾವುದೇ ದೇಶದಲ್ಲಿ ಇದು ಸಾಧ್ಯವಿಲ್ಲ. ನಮ್ಮ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಜಿ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಹೇಳಲಾಗಿದೆ.
ಜೂನ್ 6ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ಈಗಾಗಲೇ 2.1 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ ಹಾಗೂ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗರು "ಇದು AIನಾ?" ಎಂದು ಪ್ರಶ್ನಿಸಿದರೆ, ಇನ್ನೊಬ್ಬರು "ಭಾರತದಲ್ಲಿ ಇದು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಈ ʻಬಾಹುಬಲಿʼ ನೋಡಿದ್ರೆ ರಾಜಮೌಳಿನೂ ದಂಗಾಗಿ ಬಿಡ್ತಾರೆ! ವಿಡಿಯೊ ಫುಲ್ ವೈರಲ್
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಭಾರತದ ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಲಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದೆ. ಇದು ಭಾರತೀಯ ಎಂಜಿನಿಯರಿಂಗ್‌ನಲ್ಲಿ ಒಂದು ಪ್ರಮುಖ ಸಾಧನೆ ಎಂದೇ ಬಣ್ಣಿಸ್ಪಟ್ಟಿದೆ. ರೈಲಿನ ಒಳಗೆ, ಪ್ರಯಾಣಿಕರಿಗಾಗಿ ಅನೇಕ ಸೌಕರ್ಯಗಳನ್ನು ನಿರ್ಮಿಸಲಾಗಿದೆ - ವಿಶಾಲವಾದ, ಆರಾಮದಾಯಕ ಸೀಟುಗಳು, ದೊಡ್ಡ ಕಿಟಕಿಗಳು ಮತ್ತು ಕೋಚ್‌ಗಳಾದ್ಯಂತ ಆಧುನಿಕ ಸೌಲಭ್ಯಗಳಿವೆ.