ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಂಗಡಿಯ ನೇಮ್ ಬೋರ್ಡ್‌ನಲ್ಲಿ ಕನ್ನಡವಿಲ್ಲವೆಂದು ಕ್ಯಾತೆ ತೆಗೆದ ಹಿರಿಯ ನಾಗರಿಕ

ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಯೊಬ್ಬಳು ತನ್ನ ಶಾಪ್‍ನ ನೇಮ್‍ ಬೋರ್ಡ್‍ನಲ್ಲಿ ಕನ್ನಡವನ್ನು ಬಳಸದ ಕಾರಣ ಹಿರಿಯ ನಾಗರಿಕರೊಬ್ಬರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಮರ್ಷಿಯಲ್ ಬೋರ್ಡ್‍ಗಳಲ್ಲಿ ಬರೆದ ಪದಗಳು 60% ಕನ್ನಡದಲ್ಲಿರಬೇಕು ಎಂಬ ಬಿಬಿಎಂಪಿಯ ಭಾಷಾ ನೀತಿಯನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಭಾಷಾ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಗಲಾಟೆಯೊಂದು ನಡೆದಿದೆ. ಕಮರ್ಷಿಯಲ್ ಬೋರ್ಡ್‍ಗಳಲ್ಲಿ ಬಿಬಿಎಂಪಿಯ ಭಾಷಾ ನೀತಿಯನ್ನು ಪಾಲಿಸುವ ಬಗ್ಗೆ ಹಿರಿಯ ನಾಗರಿಕ ಮತ್ತು ಮಹಿಳಾ ಉದ್ಯಮಿಯೊಬ್ಬಳ ನಡುವೆ ವಾಗ್ವಾದ ನಡೆದಿದೆ. ನಗರದ ಬೇಗೂರು ಪ್ರದೇಶದಲ್ಲಿ ನಡೆದ ಈ ಘಟನೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಮಹಿಳೆಯೊಬ್ಬಳು ತನ್ನ ಶಾಪ್‍ನ ನೇಮ್‍ ಬೋರ್ಡ್‍ನಲ್ಲಿ ಕನ್ನಡವನ್ನು ಬಳಸದ ಕಾರಣ ಹಿರಿಯ ನಾಗರಿಕರೊಬ್ಬರು ಆಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಎಲ್ಲ ಕಮರ್ಷಿಯಲ್ ಬೋರ್ಡ್‍ಗಳಲ್ಲಿ ಬರೆದ ಪದಗಳು 60% ಕನ್ನಡದಲ್ಲಿರಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮದಿಂದ ಈ ಜಗಳ ನಡೆದಿದೆ. ವೈರಲ್ ಆದ ವಿಡಿಯೊದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಮಹಿಳೆಯ ಬಳಿ ನೇಮ್‍ ಬೋರ್ಡ್‍ನಲ್ಲಿ ಭಾಷಾ ನೀತಿಯನ್ನು ಸರಿಯಾಗಿ ಅನುಸರಿಸಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಮಹಿಳೆ ಆ ವ್ಯಕ್ತಿಯ ಮೇಲೆ ಕಿರುಕುಳದ ಆರೋಪ ಮಾಡಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...



ನೆಟ್ಟಿಗರ ಪ್ರತಿಕ್ರಿಯೆ

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಕೆಲವರು ಮಹಿಳೆಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಹಿರಿಯ ನಾಗರಿಕರನ್ನು ಬೆಂಬಲಿಸಿದ್ದಾರೆ. ವ್ಯವಹಾರ ಮಾಡುವ ಅಂಗಡಿಯ ಮಾಲೀಕರು ಸ್ಥಳೀಯ ಭಾಷೆ ಮತ್ತು ನಿಯಮಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಬ್ಬರು, "ಇದು ಕಿರುಕುಳವಲ್ಲ. ಇದು ನಿಯಮಗಳನ್ನು ಪಾಲಿಸುವ ಬಗ್ಗೆ ತಿಳಿಸಿದ್ದು” ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಯಾಕಪ್ಪಾ ಇಷ್ಟೊಂದು ಸ್ಪೀಡ್‌ ಅಂದಿದ್ದೇ ತಪ್ಪಾಯ್ತಾ? ಮಹಿಳೆ ಕಪಾಳಕ್ಕೆ ಬಾರಿಸಿದ ರ‍್ಯಾಪಿಡೊ ಚಾಲಕ

"ಭಾರತವನ್ನು ಭಾಷೆಯ ಆಧಾರದ ಮೇಲೆ ರಾಜ್ಯಗಳಾಗಿ ವಿಂಗಡಿಸಲಾಗಿದೆ. ನೆಲದ ನಿಯಮಗಳನ್ನು ಗೌರವಿಸಬೇಕು. ನೀವು ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ, ನೀವು ಕನ್ನಡವನ್ನು ಗೌರವಿಸಬೇಕು" ಎಂದು ಇತರರು ಕಾಮೆಂಟ್‌ ಮಾಡಿದ್ದಾರೆ.