ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅರೇ...ಇದೇನಿದು ಹಣ್ಣಿನ ಮೊಮೊಸ್? ಭಾರಿ ವೈರಲ್ ಆಗ್ತಿದೆ ಈ ವಿಚಿತ್ರ ಖಾದ್ಯದ ವಿಡಿಯೊ

ಭಾರತದ ಅತ್ಯಂತ ಪ್ರಿಯವಾದ ಬೀದಿ ಆಹಾರಗಳಲ್ಲಿ ಮೊಮೊಸ್‌ ಕೂಡ ಒಂದು. ಟಿಬೆಟ್ ಮತ್ತು ನೇಪಾಳ ಮೂಲದ ಜನಪ್ರಿಯ ಬೀದಿ ಆಹಾರ ಮೊಮೊಸ್‌ ಅನ್ನು ಭಾರತಾದ್ಯಂತ ಬಹಳಷ್ಟು ಮಂದಿ ಇಷ್ಟ ಪಟ್ಟು ತಿನ್ನುತ್ತಾರೆ. ಮೊಮೊಸ್ ಸಾಮಾನ್ಯವಾಗಿ ಖಾರದ ತಿನಿಸು. ಮಸಲಾಗೆ ಮಾಂಸ ಅಥವಾ ತರಕಾರಿಗಳಿಂದ ತುಂಬಿಸಿ ಸಂಸ್ಕರಿಸಿದ ಹಿಟ್ಟಿನ ಮೂಲಕ ಮಸಾಲೆಯುಕ್ತ ಟೊಮೆಟೊ ಮತ್ತು ಕೆಂಪು ಮೆಣಸಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಆದರೆ ದೆಹಲಿಯ ಬೀದಿ ಬದಿಯ ವ್ಯಾಪಾರಿಯೊಬ್ಬರು 'ಫ್ರೂಟ್ ಗ್ರೇವಿ ಮೋಮೋ' ತಯಾರಿಸುವ ಮೂಲಕ ಆಹಾರ ಪ್ರಿಯರನ್ನೇ ಹುಬ್ಬೆರಿಸುವಂತೆ ಮಾಡಿದ್ದಾರೆ.

ಹಣ್ಣಿನ ಮೊಮೊಸ್

ನವದೆಹಲಿ, ಡಿ. 1: ವಿಲಕ್ಷಣ ಆಹಾರ ತಯಾರಿ, ಅಚ್ಚರಿ ಮೂಡಿಸುವ ಹೊಸದಾದ ಆಹಾರ ಪ್ರಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಸದ್ಯ ಅಂತಹದ್ದೇ ಹೊಸ ಆಹಾರ ಪ್ರಯೋಗದ ಇನ್ನೊಂದು ವಿಡಿಯೊ ನೋಡುಗರನ್ನೇ ದಂಗಾಗುವಂತೆ ಮಾಡಿದೆ. ಭಾರತದ ಅತ್ಯಂತ ಪ್ರಿಯವಾದ ಬೀದಿ ಆಹಾರಗಳಲ್ಲಿ ಒಂದಾದ ಮೊಮೊಸ್‌ ತಯಾರಿಯ ವಿಡಿಯೊ ಇದಾಗಿದೆ. ಟಿಬೆಟ್ ಮತ್ತು ನೇಪಾಳ ಮೂಲದ ಜನಪ್ರಿಯ ಬೀದಿ ಆಹಾರ ಮೊಮೊಸ್‌ ಅನ್ನು ಇಂದು ಹಲವರು ಇಷ್ಟಪಟ್ಟು ಸೇವಿಸುತ್ತಾರೆ. ಸಾಮಾನ್ಯವಾಗಿ ಮೊಮೊಸ್ ಅನ್ನು ಖಾರದ ಮಸಲಾಗೆ ಮಾಂಸ ಅಥವಾ ತರಕಾರಿಗಳಿಂದ ತುಂಬಿಸಿ ಸಂಸ್ಕರಿಸಿದ ಹಿಟ್ಟಿನ ಮೂಲಕ ಮಸಾಲೆಯುಕ್ತ ಟೊಮೆಟೊ ಮತ್ತು ಕೆಂಪು ಮೆಣಸಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಆದರೆ ದೆಹಲಿಯ ಬೀದಿ ಬದಿಯ ವ್ಯಾಪರಿಯೊಬ್ಬರು ಫ್ರೂಟ್ ಗ್ರೇವಿ ಮೋಮೋ ತಯಾರಿಸುವ ಮೂಲಕ ಆಹಾರ ಪ್ರಿಯರನ್ನೇ ಹುಬ್ಬೆರಿಸುವಂತೆ ಮಾಡಿದ್ದಾರೆ.

ದೆಹಲಿ ಮೂಲದ ಬೀದಿ ಬದಿಯ ಮಾರಾಟಗಾರರೊಬ್ಬರು ಹಣ್ಣಿನ ಮೊಮೊವನ್ನು ತಯಾರಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೀಕ್ಷಣೆ ಪಡೆದಿದೆ.‌ ವೈರಲ್ ಆದ ವಿಡಿಯೊದಲ್ಲಿ, ವ್ಯಾಪಾರಿಯು ಪ್ಲೇಟ್‌ನಲ್ಲಿರುವ ತಾಜಾ ಹಣ್ಣುಗಳಾದ ಸೇಬು, ಬಾಳೆಹಣ್ಣು, ದ್ರಾಕ್ಷಿ ಮತ್ತು ಮುಸುಂಬಿಯನ್ನು ಮೊದಲು ಸಣ್ಣಗೆ ಕತ್ತರಿಸುತ್ತಾರೆ‌. ನಂತರ ಹಣ್ಣುಗಳನ್ನು ಎಣ್ಣೆಯ ಪ್ಯಾನ್‌ಗೆ ವರ್ಗಾಯಿಸಿ ಮೊಮೊಸ್ ಮಾಡಲು ಪ್ರಾರಂಭಿಸುತ್ತಾರೆ. ಬಳಿಕ‌ ಹಣ್ಣುಗಳಿಗೆ ಚೀಸ್ ಮಿಶ್ರಣ, ಚಿಲ್ಲಿ ಫ್ಲೇಕ್ಸ್, ಉಪ್ಪು ಮತ್ತು ಕೊನೆಗೆ ಫ್ರೆಶ್ ಕ್ರೀಮ್ ಅನ್ನು ಸೇರಿಸಿ ಅದನ್ನು ಗ್ರೇವಿ ರೀತಿ ಮಾಡುತ್ತಾರೆ. ಇದೇ ಗ್ರೇವಿಗೆ‌ ಐದು ಪ್ರೈ ಮಾಡಿದ ಮೊಮೊ ತುಂಡುಗಳನ್ನು ಸೇರಿಸಿ ಬಡಿಸುತ್ತಾರೆ. ಈ ಸ್ಪೆಷಲ್‌ ಮೊಮೊಸ್‌ ಬೆಲೆ 200 ರೂ. ಎನ್ನಲಾಗಿದೆ.

ವಿಡಿಯೊ ವೀಕ್ಷಿಸಿ:



ವಿಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಖಾದ್ಯದ ‌ಬಗ್ಗೆ ಕನಸು ಕಂಡಿದ್ದೀರಾ ಅಥವಾ ಯಾರಾದರೂ ಗ್ರಾಹಕರು ಅದನ್ನು ಮಾಡಲು ಕೇಳಿದ್ದಾರೆಯೇ ಎಂದು ಕೇಳಿದಾಗ, ಒಬ್ಬ ಗ್ರಾಹಕರು ಆ ರೀತಿಯಲ್ಲಿ ಮೊಮೊ ಬೇಯಿಸಲು ಕೇಳಿಕೊಂಡಿದ್ದಾನೆ ಎಂದು ವ್ಯಾಪಾರಿ ದೃಢಪಡಿಸಿದ್ದಾರೆ. ಈ ಮೋಮೋ ಬೆಲೆ 200 ರೂ. ಅಂದಾಗ ವಿಡಿಯೊ ಮಾಡುತ್ತಿದ್ದ ವ್ಯಕ್ತಿ ಕೂಡ ಆಘಾತ ಒಳಗಾಗಿದ್ದಾರೆ. ಬಳಿಕ ಆ ಪ್ಲೇಟ್ ಕೈಗೆತ್ತಿಕೊಂಡರೂ, ಅದನ್ನು ಸವಿಯುವ ಧೈರ್ಯವನ್ನು ಆತ ಮಾಡಲಿಲ್ಲವಂತೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

ವಿಡಿಯೊ ನೋಡಿದ ನೆಟ್ಟಿಗರೊಬ್ಬರು ಮೋಮೋ ಪ್ರಿಯರಿಗೆ ಇನ್ಮುಂದೆ ತಿನ್ನುವ ರುಚಿಯೆ ಬದಲಾಗಬಹುದು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರಚಾರಕ್ಕಾಗಿ ಇಂತಹ ಖಾದ್ಯ ವನ್ನು ತಯಾರಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಕ್ಲಿಪ್ ಹಂಚಿಕೊಂಡಾಗಿನಿಂದ, ಇದು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.