ಬೆಂಗಳೂರು,ಜು.26: ಹೆಚ್ಚಿನ ಪ್ರಯಾಣಿಕರು ಸುರಕ್ಷತೆಗಾಗಿ ಸಾಮಾನ್ಯ ರೈಲನ್ನು ಆಯ್ಕೆ ಮಾಡುವ ಬದಲು ರೈಲಿನ 'ಫಸ್ಟ್' ಕ್ಲಾಸ್ ಎಸಿ ಬೋಗಿಯನ್ನೇ ಆಯ್ಕೆ ಮಾಡುತ್ತಾರೆ. ಯಾಕಂದ್ರೆ ಗುಣಮಟ್ಟದ ಸೌಲಭ್ಯಗಳು ಕೂಡ ಇಲ್ಲಿರುತ್ತವೆ. ಆದರೆ ಇಂತಹ ಸುರಕ್ಷಿತ ಪ್ರಯಾಣದಲ್ಲೂ ಕಳ್ಳತನ ಆಗುತ್ತದೆ ಎಂದ್ರೆ ನೀವು ನಂಬುತ್ತೀರಾ. ಹೌದು ಹೌರಾದಿಂದ ಬೆಂಗಳೂರಿಗೆ ಬರುತ್ತಿದ್ದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಕುಟುಂಬವೊಂದರ ಲಗೇಜ್ ಕಳ್ಳತನ ವಾಗಿದ್ದು 1,10,000 ರೂ. ನಗದನ್ನು ಕಳ್ಳತನ ಮಾಡಲಾಗಿದೆ. ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿ ಸುವ ಮುಖ್ಯ ಉದ್ದೇಶ ಸುರಕ್ಷತೆ, ಆದರೆ ಇಲ್ಲೂ ಹೀಗಾಗಿದೆ ಎಂದು ಪ್ರಯಾಣಿಕರೊಬ್ಬರು ಪೋಸ್ಟ್ ನಲ್ಲಿ (Viral News) ಬೇಸರ ವ್ಯಕ್ತಪಡಿಸಿದ್ದಾರೆ.
ಹೌರಾದಿಂದ ಬೆಂಗಳೂರಿನ SMVT ಗೆ ಪ್ರಯಾಣಿಸುತ್ತಿದ್ದ ಬೆಂಗಳೂರು SF ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ಕಳ್ಳರು ಬರೋಬ್ಬರಿ 1.10 ಲಕ್ಷ ನಗದು ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಮುಂಜಾನೆ ಈ ಘಟನೆ ನಡೆದಿದ್ದು ಕುಟುಂಬದವರು ಎಚ್ಚರಗೊಳ್ಳುವ ಮೊದಲೇ ಸಂಭವಿಸಿದೆ.
ವಿಡಿಯೋ ನೋಡಿ:
ಮುಂಜಾನೆ ಸಮಯದಲ್ಲಿ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು ಫಸ್ಟ್ ಕ್ಲಾಸ್ ಕ್ಯಾಬಿನ್‌ನ ಬಾಗಿಲನ್ನು ಬಲವಂತವಾಗಿ ಮುರಿದು ರೈಲಿನ ಒಳಗೆ ನುಗ್ಗಿದ್ದಾರೆ. ಪ್ರಯಾಣಿಕರ ಲಗೇಜ್‌ನಲ್ಲಿದ್ದ 1,10,000 ಹಣ, ಪ್ರಮುಖ ದಾಖಲೆಗಳು, ಗುರುತಿನ ಚೀಟಿಗಳು ಹಾಗೂ ಮಗುವಿನ ಔಷಧಿಗಳನ್ನು ಕಳ್ಳತನ ಮಾಡಿದ್ದಾರೆ. ಬ್ಯಾಗ್ ನಲ್ಲಿದ್ದ ಕೆಲವು ಕಾಗದಪತ್ರಗಳು ಚೆಲ್ಲಾಪಿಲ್ಲಿಯಾಗಿದ್ದು ವಸ್ತುಗಳು ರೈಲಿನ ವಾಶ್‌ರೂಮ್ ಅತ್ತ ಚದುರಿಹೋಗಿವೆ.
ಎಸಿ ಫಸ್ಟ್ ಕ್ಲಾಸ್ ಟಿಕೆಟ್ ಬುಕ್ ಮಾಡಿದರೂ ರೈಲಿನೊಳಗಿನ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ ಪ್ರಯಾಣಿಕ, ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ಮುಖ್ಯ ಉದ್ದೇಶ ಸುರಕ್ಷತೆ,ಆದರೆ ಇಲ್ಲೂ ಹೀಗಾಗಿದೆ. ಸಹ-ಪ್ರಯಾಣಿಕರು ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಗೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿಗೆ ದೂರು ನೀಡಿದರೆ, ಅಧಿಕಾರಿಗಳು "ನೀವು ನಿದ್ದೆ ಮಾಡುತ್ತಿದ್ದರಿಂದಲೇ ಕಳ್ಳತನ ಆಗಿದೆ" ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಅನೇಕ ಬಳಕೆದಾರರು ಪ್ರೀಮಿಯಂ ಕೋಚ್‌ಗಳಲ್ಲಿ ಒದಗಿಸಲಾದ ಭದ್ರತೆಯನ್ನು ಪ್ರಶ್ನೆ ಮಾಡಿದ್ದಾರೆ. ಬಳಕೆದಾರರೊಬ್ಬರು ಸಿಸಿಟಿವಿ ದೃಶ್ಯಾ ವಳಿಗಳನ್ನು ಪರಿಶೀಲಿಸಿ AC ಅಟೆಂಡೆಂಟ್ ಅನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಿ ಎಂದಿದ್ದಾರೆ. ಮತ್ತೊಬ್ಬರು ದುಬಾರಿ ಹಣ ಪಾವತಿ ಮಾಡಿದರೂ ಸುರಕ್ಷತೆ ಇಲ್ಲ ಎಂದು ಕಿಡಿಕಾರಿದ್ದಾರೆ.