ಭುವನೇಶ್ವರ,ಮೇ 7: ಸಾಮಾನ್ಯವಾಗಿ ಕಳ್ಳರು ಅಂದಾಗ ಚಿನ್ನಾಭರಣ, ದುಬಾರಿ ವಸ್ತು ದರೋಡೆ ಮಾಡುವುದು ಮಾಡುವುದು ಅವರ ದಿನಚರಿಯಾಗಿರುತ್ತದೆ. ಆದರೆ ಒಡಿಶಾದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿದ್ದು ಕಳ್ಳರ ಪ್ಲಾನೇ ಉಲ್ಟಾ ಹೊಡೆದಿದೆ. ಒಡಿಶಾದ ಬಸಂತಿ ಕಾಲೋನಿ ಯಲ್ಲಿ ರಾತ್ರಿ ನಡೆದ ಕಳ್ಳತನ ಪ್ರಯತ್ನದ ಸಮಯದಲ್ಲಿ ಮನೆಯೊಳಗೆ ಸಿಲುಕಿಕೊಂಡ ಇಬ್ಬರು ಕಳ್ಳರು ಪೊಲೀಸರಿಂದಲೇ ಸಹಾಯ ಕೋರಿದ್ದಾರೆ. ಕಳ್ಳರೇ ಪೊಲೀಸರಿಗೆ ಸಹಾಯ ಕೇಳಿ ನಮ್ಮನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ ಆರೋಪಿಗಳಾದ ಪ್ಲಾಂಟ್‌ಸೈಟ್ ನಿವಾಸಿ ಸಿಂಬ್ರಂಬ್ ಅಲಿಯಾಸ್ ನಾನಕ್ ಸಿಂಗ್ (30) ಮತ್ತು ಛೇಂಡ್‌ನ ಸತ್ಯೇಂದ್ರ ಕುಮಾರ್ ಸಿಂಗ್ (32) ಮನೆ ಮಾಲೀಕರು ಇಲ್ಲದ ಸಮಯದಲ್ಲಿ ಅಂತಸ್ತಿನ ಮನೆಯ ಗೇಟ್ ಲಾಕ್ ಅನ್ನು ಒಡೆದಿದ್ದಾರೆ. ಕಳ್ಳರು ಮನೆಯಲ್ಲಿದ್ದ ಹಣ ಹಾಗೂ ಚಿನ್ನ ವನ್ನು ದೋಚಲು ಪ್ಲಾನ್ ಮಾಡಿಕೊಂಡಿದ್ದರು, ಆದರೆ ಅವರ ಪ್ಲಾನ್ ಫ್ಲಾಪ್ ಆಗಿದ್ದು ಅವರೇ ಸಿಲುಕಿಕೊಳ್ಳುವಂತೆ ಆಗಿದೆ.
ಏಪ್ರಿಲ್ 29 ರ ರಾತ್ರಿ ಈ ಘಟನೆಯೂ ನಡೆದಿದೆ. ಮನೆಯು ಭೂಮಾಲೀಕ ಗಣೇಶ್ ಬಿಸ್ವಾಲ್ ಎಂಬವರಿಗೆ ಸೇರಿದ್ದಾಗಿತ್ತು. ಆದರೆ ಕಳ್ಳರು ಗೇಟ್ ಒಡೆಯುವಾಗ ಪಕ್ಕದ ಮನೆಯ ವೃದ್ಧ ಸದಸ್ಯರೊಬ್ಬರು ತಕ್ಷಣವೇ ಅಲ್ಲಿದ್ದ ಸ್ಥಳಿಯರಿಗೆ ಸೂಚನೆ ನೀಡಿದ್ದಾರೆ. ಈ ವಿಚಾರ ಕಳ್ಳರಿಗೆ ಅರಿವಾಗದೇ ಚಿನ್ನ,ಹಣದ ದೋಚುವಿಕೆಯಲ್ಲೇ ಮಗ್ನರಾಗಿದ್ದಾರೆ.
Viral Video: ಕೆಲ್ಸ ಬಿಟ್ಟು ಮೊಮೊಸ್ ಮಾರೋದೇ ಬೆಟರ್... ಈತನ ತಿಂಗಳ ಸಂಪಾದನೆ ಕೇಳಿದ್ರೆ ಶಾಕ್ ಆಗುತ್ತೆ!
ಅಲ್ಲಿ ನೋಡನೋಡುತ್ತಿದ್ದಂತೆ ಸುತ್ತಮುತ್ತಲಿನ ಜನರು ಜಮಾಯಿಸಿದ್ದು ಕಳ್ಳರು ಹೊರಬರದಂತೆ ಮನೆಯ ಮುಖ್ಯ ದ್ವಾರವನ್ನೇ ಲಾಕ್ ಮಾಡಿದ್ದಾರೆ. ಉದ್ವಿಗ್ನತೆ ಹೆಚ್ಚಾದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಆರೋಪಿಗಳು ರಕ್ಷಣೆ ಕೋರಿ 112 ಗೆ ಕರೆ ಮಾಡಿದ್ದಾರೆ. ಈ ಸಮಯದಲ್ಲಿ ತಮಗೆ ಯಾವುದೇ ದಾರಿ ಇಲ್ಲ ಎಂದು ಅರಿತುಕೊಂಡು ತಮ್ಮನ್ನು ರಕ್ಷಿಸಿ ಎಂದು ಪೊಲೀಸರಿಗೆ ಕರೆ ಮಾಡಿದ್ದಾರೆ
ಅಲ್ಲಿ ನೆರೆದಿದ್ದ ಗುಂಪು ಹಿಂಸಾಚಾರದ ಸಾಧ್ಯತೆಯ ಬಗ್ಗೆ ಭಯ ಭೀತರಾಗಿ ತುರ್ತು ಸಹಾಯವಾಣಿ ಗೆ ಕರೆ ಮಾಡಿದರು. ಈ ಘಟನೆಯ ಸಮಯದಲ್ಲಿ ಅವರು ಕುಟುಂಬ ಸದಸ್ಯರನ್ನು ಸಹ ಸಂಪರ್ಕಿ ಸಿದರು. ಪೊಲೀಸರು ಬೆಳಗಿನ ಜಾವ 2.30 ರ ಸುಮಾರಿಗೆ ಆಗಮಿಸಿ ಮನೆಯಿಂದ ಇಬ್ಬರನ್ನು ರಕ್ಷಿಸಿದರು. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಆಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು ಆದರೆ ಭಯಭೀತರಾದ ನಂತರ ಕದ್ದ ವಸ್ತುಗಳನ್ನು ಮನೆಯೊಳಗೆ ಬಿಟ್ಟು ಹೋಗಿರುವುದಾಗಿ ಹೇಳಿಕೊಂಡಿದ್ದಾರೆ.