ಬೆಂಗಳೂರು,ಫೆ.6: ಸಾಮಾನ್ಯವಾಗಿ ರೆಸ್ಟೋರೆಂಟ್, ಹೋಟೆಲ್ ಗಳಿಗೆ ಭೇಟಿ ನೀಡಿದಾಗ ಸಿಬ್ಬಂದಿಗಳು ಸರಿಯಾಗಿ ಉಪಚರಿಸಿದಾಗ ಟಿಪ್ಸ್ ನೀಡುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಸಿಬ್ಬಂದಿ ನಸುನಗುತ್ತಾ ಧನ್ಯವಾದ ಎನ್ನುತ್ತಾರೆ. ಆದರೆ ಬೆಂಗಳೂರಿನ ಈ ಕೆಫೆ ಮಾತ್ರ ಈಗ ಟಿಪ್ಸ್ ವಿಚಾರವಾಗಿ ಗಮನ ಸೆಳೆದಿದೆ. ಸದ್ಯ ಬೆಂಗಳೂರು ಕೆಫೆ ಸಿಬ್ಬಂದಿಯ ವಿಶಿಷ್ಟ ಟಿಪ್ ನೀಡುವ ಸಂಪ್ರದಾಯ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಹೃದಯಗಳನ್ನು ಗೆಲ್ಲುತ್ತದೆ. ಗ್ರಾಹಕರು ಟಿಪ್ ನೀಡಿದಾಗಲೆಲ್ಲಾ ಸಿಬ್ಬಂದಿ ತ್ವರಿತ ನೃತ್ಯ ಮಾಡುವ ಮೂಲಕ ಗ್ರಾಹಕರನ್ನು ಖುಷಿಪಡಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿರುವ ಕೆಫೆ ನುವಿಯೊದಲ್ಲಿ, ಕೌಂಟರ್ ಬಳಿ ಇರಿಸಲಾದ ಸಣ್ಣ ಫಲಕವು ಗ್ರಾಹಕರ ಗಮನ ಸೆಳೆದಿದೆ. ಇಲ್ಲಿ ನೀವು ಟಿಪ್ಸ್ ಬಾಕ್ಸ್‌ಗೆ ಹಣ ಹಾಕಿದರೆ ಸಾಕು, ಅಲ್ಲಿನ ಸಿಬ್ಬಂದಿ ನಿಮಗಾಗಿ ಕುಣಿದು ಖುಷಿ ಪಡಿಸುತ್ತಾರೆ. ಕೆಫೆಯ ಕೌಂಟರ್ ಮೇಲೆ ಒಂದು ಸಣ್ಣ ಫಲಕವನ್ನು ಹಾಕಲಾಗಿದ್ದು, ಅದರಲ್ಲಿ "ನೀವು ಟಿಪ್ಸ್ ಕೊಟ್ಟರೆ , ಸಿಬ್ಬಂದಿ ನಿಮಗಾಗಿ ನೃತ್ಯ ಮಾಡುತ್ತಾರೆ" ಎಂದು ಬರೆಯಲಾಗಿದೆ.
ವಿಡಿಯೋ ನೋಡಿ:
ಮೊದಲಿಗೆ ಇದು ತಮಾಷೆಯಂತೆ ಕಂಡರು ತ್ವರಿತವಾಗಿ ಉತ್ಸಾಹಭರಿತ ಅನುಭವವಾಗುತ್ತದೆ.ಈ ವಿಡಿಯೊವನ್ನು ಕೆಫೆಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಟಿಪ್ಸ್ ನೀಡಲು ನಿರ್ಧರಿಸುವವರೆಗೆ ಸಿಬಂದಿಗಳು ಸಾಮಾನ್ಯವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದು ಕಂಡು ಬರುತ್ತದೆ.
Viral Video: ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಶಿಕ್ಷಕ: ವಿಡಿಯೋ ನೋಡಿದ್ರೆ ಸಿಟ್ಟು ಬರುತ್ತೆ
ಗ್ರಾಹಕರು ಖುಷಿಯಿಂದಲೋ ಟಿಪ್ಸ್ ನೀಡಿದ ತಕ್ಷಣ, ಅಲ್ಲಿನ ಸರ್ವರ್‌ಗಳು ಕೆಲಸದ ನಡುವೆಯೇ ಹೆಜ್ಜೆ ಹಾಕಲು ಆರಂಭ ಮಾಡುತ್ತಾರೆ. ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಗ್ರಾಹಕರೊಬ್ಬರು ಟಿಪ್ಸ್ ನೀಡಿದ ಕೂಡಲೇ ಸಿಬ್ಬಂದಿಗಳು ಪರಸ್ಪರ ಕಣ್ಣ ಸನ್ನೆ ಮೂಲಕ ಕೌಂಟರ್ ಹತ್ತಿರವೇ ನೃತ್ಯ ಮಾಡುವುದನ್ನು ಕಾಣಬಹುದು. ಇದನ್ನು ಕಂಡು ಅಲ್ಲಿದ್ದ ಜನರು ಸಂಭ್ರಮಿಸಿದ್ದಾರೆ. ಸದ್ಯ ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಬಳಕೆದಾರರೊಬ್ಬರು ಇದು ಕೆಲಸದ ನಡುವೆ ಸಂತೋಷವನ್ನು ಹೆಚ್ಚಿಸುವ ಕೆಲಸ ಎಂದಿದ್ದಾರೆ. ಮತ್ತೊಬ್ಬರು ಈ ಕೆಫೆಯಲ್ಲಿ ಒಂದು ಸುಂದರ ಅನುಭವ ಎಂದು ಬರೆದುಕೊಂಡಿದ್ದಾರೆ.