ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ( Union Education Minister Dharmendra Pradhan) ರಾಜೀನಾಮೆ ಬಳಿಕ ಕಾಕ್ರೋಚ್ ಜನತಾ ಪಕ್ಷ (Cockroach Janata Party) ಪ್ರತಿಭಟನೆಯನ್ನು (CJP Protest) ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Deepke) ತಮ್ಮ ಬೆಂಬಲಿಗರಿಗೆ ಧನ್ಯವಾದ ಹೇಳಿರುವ ವಿಡಿಯೋ ಸಂದೇಶವನ್ನು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವು ವಾರಗಳ ಬಳಿಕ ಅಂತಿಮವಾಗಿ ನನಗೆ ವಿಶ್ರಾಂತಿ ಪಡೆಯುವುದು ಸಾಧ್ಯವಾಯಿತು ಎಂದು ಹೇಳಿರುವ ಅವರು, ಪ್ರತಿಭಟನೆಯಲ್ಲಿ ಪಾಲ್ಗೊಂಡ ಮತ್ತು ಪ್ರತಿಭಟನೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದರಿಂದ ಕಾಕ್ರೋಚ್ ಜನತಾ ಪಕ್ಷವು ಶನಿವಾರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದೆ. ಇದರ ಬಳಿಕ ವಿಡಿಯೋ ಸಂದೇಶ ಕಳುಹಿಸಿರುವ ಅಭಿಜೀತ್ ದಿಪ್ಕೆ, ಇನ್ನು ನಾನು ನಿದ್ರೆಗೆ ಹೋಗಬಹುದು. ಸಂಜೆಯವರೆಗೆ ಏನು ಮಾಡಬೇಕು, ಏನಾಗಬಹುದು ಎನ್ನುವ ಯೋಚನೆ ಇಲ್ಲದೆ ನನ್ನ ಮಲಗುವ ಕೋಣೆಯಲ್ಲಿ ವಿಶ್ರಾಂತಿ ಪಡೆದು ಏಳಬಹುದು. ಕಳೆದ 37 ದಿನಗಳು ನಿಜವಾಗಿಯೂ ತುಂಬಾ ಕಷ್ಟಕರವಾಗಿತ್ತು ಎಂದು ತಿಳಿಸಿದರು.
"ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ದಿನ"; ಮನ್ ಕಿ ಬಾತ್‌ನಲ್ಲಿ ಕಾರ್ಗಿಲ್ ವೀರರನ್ನು ಸ್ಮರಿಸಿದ ಮೋದಿ
ಪ್ರತಿಭಟನೆಯ ಅಂತ್ಯ ಹೋರಾಟದ ಕೊನೆಯಲ್ಲ. ಇದು ಕೇವಲ ಆರಂಭ. ಕಾಕ್ರೋಚ್ ಜನತಾ ಪಕ್ಷದ ಹೋರಾಟ ಇನ್ನು ಬಹಳ ದೂರದವರೆಗೆ ಸಾಗಬೇಕಿದೆ ಎಂದು ಹೇಳಿದ ಅಭಿಜೀತ್ ದಿಪ್ಕೆ, ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಮತ್ತು ಇದನ್ನು ಟೀಕಿಸಿದವರಿಗೆ ಧನ್ಯವಾದಗಳು. ಟೀಕೆಗಳು ನ್ಯಾಯಯುತ ಪ್ರಶ್ನೆಗಳನ್ನು ಎತ್ತುವ ಮೂಲಕ ಅಭಿಯಾನವನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯ ಕೊನೆಯ ದಿನಗಳಲ್ಲಿ ಟೈಫಾಯ್ಡ್ ಮತ್ತು ಜ್ವರದಿಂದ ಬಳಲುತ್ತಿದ್ದೆ, ಇದರಿಂದ ಹೋರಾಟದ ಕೊನೆಯ ದಿನಗಳಲ್ಲಿ ಜಂತರ್ ಮಂತರ್‌ನಲ್ಲಿದ್ದ ಬೆಂಬಲಿಗರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗಲಿಲ್ಲ. ಕಳೆದ 37 ದಿನಗಳ ಕಾಲ ಜೊತೆ ಇದ್ದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇಶಕ್ಕಾಗಿ ನೀವು ಮಾಡಿದ್ದನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.
ಆಗಸ್ಟ್ 1 ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ; 'ವಿವೇಕ ಸ್ಮಾರಕ' ಲೋಕಾರ್ಪಣೆ
ಜೂನ್ ತಿಂಗಳ ಆರಂಭದಲ್ಲಿ ಜಂತರ್ ಮಂತರ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆಯು ದೇಶಾದ್ಯಂತ ಇರುವ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕರೆ ನೀಡಿ ಹೋರಾಟ ಪ್ರಾರಂಭಿಸಿದ ಪ್ರತಿಭಟನಾಕಾರರು ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿತ್ತು.
ಕೇಂದ್ರ ಸರ್ಕಾರದ ಸಚಿವರೊಂದಿಗೆ ಹಲವಾರು ಸುತ್ತಿನ ಮಾತುಕತೆಗಳ ಅನಂತರ ಕೇಂದ್ರ ಸರ್ಕಾರ ಅವರ ಭರವಸೆಯನ್ನು ಈಡೇರಿಸಲು ಒಪ್ಪಿಕೊಂಡಿತು. ಇದರೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜಿನಾಮೆಯನ್ನು ಕೂಡ ನೀಡಿದರು. ಈ ಹಿನ್ನೆಲೆಯಲ್ಲಿ ಸಿಜೆಪಿ ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೊನೆಗೊಳಿಸಿತ್ತು.