ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ಯುವಕನ ಜೊತೆ ಮದುವೆಯಾದ ಮೂವರು ಸಹೋದರಿಯರು! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

Viral Video: ಈ ಆಧುನಿಕ ಯುಗದಲ್ಲಿ ಮದುವೆ ಅನ್ನೋದು ಚರ್ಚೆಗೆ ಒಳಪಟ್ಟ ವಿಚಾರವಾಗಿದೆ. ಅಪ್ರಾಪ್ತ ಯುವಕನನ್ನು ವರಿಸಿದ ಮಹಿಳೆ, ವೃದ್ದನನ್ನು ಪ್ರೀತಿಸಿದ ಯುವತಿ ಹೀಗೆ ಇಂತಹ ಘಟನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು ಮೂವರು ಸ್ವಂತ ಅಕ್ಕ-ತಂಗಿಯರು ಒಬ್ಬ ಯುವಕನನ್ನೇ ಮದುವೆಯಾಗಿದ್ದಾರೆ. ಒಬ್ಬರಿಗೊಬ್ಬರು ದೂರವಾಗಿ ಇರಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ಹೆಜ್ಜೆ ಇಟ್ಟಿದ್ದಾರೆ.

ಒಬ್ಬನೇ ಯುವಕನನ್ನು ವರಿಸಿದ ಮೂವರು ಸೋದರಿಯರು

ಅಮ್ರೋಹಾ,ಜು.24: ಇಂದು ದೇಶದ್ಯಾಂತ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಈ ಆಧುನಿಕ ಯುಗದಲ್ಲಿ ಮದುವೆ ಅನ್ನೋದು ಚರ್ಚೆಗೆ ಒಳಪಟ್ಟ ವಿಚಾರವಾಗಿದೆ. ಅಪ್ರಾಪ್ತ ಯುವಕನನ್ನು ವರಿಸಿದ ಮಹಿಳೆ, ವೃದ್ದನನ್ನು ಪ್ರೀತಿಸಿದ ಯುವತಿ ಹೀಗೆ ಇಂತಹ ಘಟನೆಗಳು ವೈರಲ್ (Viral News) ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು ಮೂವರು ಸ್ವಂತ ಅಕ್ಕ-ತಂಗಿಯರು ಒಬ್ಬ ಯುವಕನನ್ನೇ ಮದುವೆಯಾಗಿದ್ದಾರೆ. ಒಬ್ಬರಿಗೊಬ್ಬರು ದೂರವಾಗಿ ಇರಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ಹೆಜ್ಜೆ ಇಟ್ಟಿದ್ದಾರೆ.

18 ರಿಂದ 20 ವರ್ಷದೊಳಗಿನ ಮೂವರು ಸಹೋದರಿಯರು ತಮ್ಮ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್ ವಿಕಾಸ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಜುಲೈ 17 ರಂದು ಚಾಮುಂಡಾ ಮಾತಾ ದೇವಸ್ಥಾನದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ. ಮದುವೆಯಾದ ಯುವತಿಯರು ಸರೋಜ್ (20), ಸಾವಿತ್ರಿ (19) ಮತ್ತು ಸಂತೋಷಿ (18) ಎಂದು ತಿಳಿದು ಬಂದಿದೆ. ಇದರ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದು ನಾನಾ ಬಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಮದುವೆ ವರ ವಿಕಾಸ್ ಹಿಂದೂ ಪದ್ಧತಿಗಳ ಪ್ರಕಾರ ವಿವಾಹ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದು ಕಂಡುಬಂದಿದೆ. ಆತನ ಜೊತೆ ಸೀರೆ ಧರಿಸಿ ತಲೆಗೆ ಮುಸುಕು ಹಾಕಿಕೊಂಡು ಮೂವರು ಸಹೋದರಿಯರು ವರನ ಪಕ್ಕದಲ್ಲಿ ಸಾಲಿನಲ್ಲಿ ಕುಳಿತಿದ್ದರು. ಈ ಮೂವರೂ ಸಹೋದರಿಯರು ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟರ್ಸ್ ಆಗಿದ್ದು ವಿಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಯುವಕ ವಿಕಾಸ್ ಕಳೆದ 6 ತಿಂಗಳಿನಿಂದ ಇವರ ವಿಡಿಯೋಗಳಿಗೆ ಕ್ಯಾಮರಾಮೆನ್ ಆಗಿ ಕೆಲಸ ಮಾಡುತ್ತಿದ್ದನು.

Viral Video: ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಹಕರು

ವರ ವಿಕಾಸ್ ಮೂವರು ಸಹೋದರಿಯರಿಗೆ ಸಿಂಧೂರ ಹಚ್ಚುವ ದೃಶ್ಯ ಕಂಡುಬಂದಿದೆ. ಮದುವೆಯು ತಮ್ಮನ್ನು ಬೇರ್ಪಡಿಸುತ್ತದೆ ಎಂದು ಅರಿವಾದಾಗ, ನಾವು ನಮ್ಮ ಜೀವನವನ್ನು ಕೊನೆ ಗೊಳಿಸುವ ಬಗ್ಗೆಯೂ ಯೋಚಿಸಿದೆವು. ನಂತರ, ನಾವು ಸಾಯುವ ಬದಲು ಒಟ್ಟಿಗೆ ಇದ್ದು ಒಬ್ಬ ವ್ಯಕ್ತಿಯನ್ನು ಮದುವೆ ಯಾಗಲು ನಿರ್ಧಾರ ಮಾಡಿದೇವು ಎಂದಿದ್ದಾರೆ. ನಾವೆಲ್ಲರೂ ಸ್ವ ಇಚ್ಛೆಯಿಂದಲೇ ಮದುವೆಯಾಗಿರುವುದಾಗಿ ಯುವತಿಯರು ಹೇಳಿದ್ದಾರೆ.

ಸಹೋದರಿಯರು ಪರಸ್ಪರ ಎಷ್ಟು ಆಳವಾಗಿ ಬಾಂಧವ್ಯ ಹೊಂದಿದ್ದಾರೆಂದು ಅರ್ಥಮಾಡಿಕೊಂಡ ನಂತರ ವಿಕಾಸ್ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಅವರ ಭಾವನೆಗಳನ್ನು ಗೌರವಿಸಿದ್ದು ಅವರು ಒಟ್ಟಿಗೆ ಇರಲು ಬಯಸಿದ್ದರಿಂದ ಅವರನ್ನು ಮದುವೆಯಾಗಲು ಒಪ್ಪಿಕೊಂಡೆ. ಅಲ್ಲದೆ, ಪುರಾಣದಲ್ಲಿ ದಶರಥ ಮಹಾರಾಜನಿಗೆ ಮೂವರು ಪತ್ನಿಯರು ಇತ್ತಲ್ಲವೇ? ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ‌

ಆದರೆ ಹಿಂದೂ ಧರ್ಮದ ಕಾನೂನಿನ ಪ್ರಕಾರ ಮೊದಲ ಪತ್ನಿ ಬದುಕಿರುವಾಗ ಅಥವಾ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ನೀನು ಗ್ರೇಟ್ ಬ್ರೋ ತಮಗೆ ಒಬ್ಬಳೂ ಸಿಗುತ್ತಿಲ್ಲ ಎಂದು ಕಾಲೆಳೆದಿದ್ದಾರೆ.ಇನ್ನು ಕೆಲವರು ಇದು ರೀಲ್ಸ್ ಇರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.