ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Russian Circus: ಸರ್ಕಸ್‌ ಪ್ರದರ್ಶನದ ವೇಳೆ ಭಯಾನಕ ಘಟನೆ: ಪ್ರೇಕ್ಷಕರತ್ತ ಜಿಗಿದ ಹುಲಿ

Viral Video: ರಷ್ಯಾದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಹುಲಿಯೊಂದು ಪ್ರೇಕ್ಷಕರತ್ತ ಜಿಗಿದ್ದಿದ್ದು ಜನರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ‌. ಸದ್ಯ ಈ ಘಟನೆಯು ಸರ್ಕಸ್ ಸುರಕ್ಷತಾ ಮಾನದಂಡ ಮತ್ತು ಮನರಂಜನೆಯಲ್ಲಿ ಕಾಡು ಪ್ರಾಣಿಗಳ ಬಳಕೆಯ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ಸರ್ಕಸ್‌ ಪ್ರದರ್ಶನದ ವೇಳೆ ಪ್ರೇಕ್ಷಕರತ್ತ ಜಿಗಿದ ಹುಲಿ

ರಷ್ಯಾ, ಏ. 21: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸಿದ ಅನೇಕ ಘಟನೆಗಳು ನಡೆದಿವೆ. ಕರ್ನಾಟಕದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ಗಣನೀಯವಾಗಿ ಹೆಚ್ಚಿದ್ದು ಹಲವೆಡೆ ಸಾವು ಕೂಡ ಸಂಭವಿಸಿದೆ. ಈ ನಡುವೆ ರಷ್ಯಾದಲ್ಲಿ (Russia) ನಡೆದ ಸರ್ಕಸ್ ಪ್ರದರ್ಶನದ ವೇಳೆ ಹುಲಿಯೊಂದು ಪ್ರೇಕ್ಷಕರತ್ತ ಜಿಗಿದ್ದಿದೆ. ಇದರಿಂದ ಜನರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ‌. ಸದ್ಯ ಈ ಘಟನೆಯು ಸರ್ಕಸ್ ಸುರಕ್ಷತಾ ಮಾನದಂಡ ಮತ್ತು ಮನ ರಂಜನೆಯಲ್ಲಿ ಕಾಡು ಪ್ರಾಣಿಗಳ ಬಳಕೆಯ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ರಷ್ಯಾದ ರೋಸ್ಟೋವ್-ಆನ್-ಡಾನ್‌ನ ಸರ್ಕಸ್ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ಭದ್ರತಾ ಜಾಲ ಅಂದ್ರೆ ಸೇಪ್ಟ್ ನೆಟ್ ಕುಸಿದಿದ್ದು ಹುಲಿ ಜನರ ಕಡೆ ಜಿಗಿದಿದೆ. ತಇದರಿಂದ ಪ್ರೇಕ್ಷಕರು ಭಯಭೀತರಾಗಿದ್ದಾರೆ. ಕ್ಯಾಮರಾದಲ್ಲಿ ಸೆರೆ ಹಿಡಿಯಲಾದ ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೊ ನೋಡಿ:



ಮಾಹಿತಿ ಪ್ರಕಾರ ಡೊವ್ಗಲ್ಯುಕ್ ರಾಜವಂಶದ ಸರ್ಕಸ್‌ನಲ್ಲಿ ಮೂರು ಹುಲಿಗಳು ಮತ್ತು ಇಬ್ಬರು ತರಬೇತುದಾರರು ಸಾಹಸ ಪ್ರದರ್ಶನವನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಹಾಕಿದ್ದ ಭದ್ರತಾ ಜಾಲವು ಕೆಳಕ್ಕೆ ಬಿದ್ದಿದೆ. ಹುಲಿ, ತಕ್ಷಣವೇ ಬೇಲಿಯನ್ನು ದಾಟಿ ಜನರಿದ್ದ ಸ್ಥಳಕ್ಕೆ ನುಗ್ಗಿದೆ.‌ ಮಕ್ಕಳು. ಮಹಿಳೆಉರು, ವೃದ್ಧರು ಸೇರಿ ಹಲವು ಪ್ರೇಕ್ಷಕರು ಈ ವೇಳೆ ಹಾಜರಿದ್ದರು.

ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಸರ್ಕಸ್ ಆಯೋಜಕರು ಮೈಕ್ ಮೂಲಕ ಜನರು ಶಾಂತವಾಗಿರುವಂತೆ ತಿಳಿಸಿದ್ದು ತಬೇತುದಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಹುಲಿಯನ್ನು ಮರಳಿ ಪಂಜರಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್, ಯಾವುದೇ ಗಾಯ ವರದಿಯಾಗಿಲ್ಲ. ಈ ಘಟನೆಯು ಸುರಕ್ಷತಾ ಪ್ರೋಟೋ ಕಾಲ್‌ ಮತ್ತು ಮನರಂಜನೆಯಲ್ಲಿ ಕಾಡು ಪ್ರಾಣಿಗಳ ಬಳಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು ಸುಳ್ಳಲ್ಲ.