ಮಾಸ್ಕೋ: ಮಗುವನ್ನು ದೇವರ ಸ್ವರೂಪ ಎನ್ನುತ್ತಾರೆ. ಆದರೆ ರಷ್ಯಾದ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗನೊಬ್ಬ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡು ನೆಲಕ್ಕೆ ಎತ್ತಿ ಬಿಸಾಕಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಮಗು ಮತ್ತು ಅವನ ತಾಯಿ ರಷ್ಯಾಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದ್ದು, ಈ ಹಲ್ಲೆಯಲ್ಲಿ ಮಗುವಿನ ತಲೆಬುರುಡೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿವೆ.ಬೆಚ್ಚಿಬೀಳಿಸುವ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಈ ಘಟನೆ ಮಾಸ್ಕೋ ವಿಮಾನ ನಿಲ್ದಾಣದ ಎಂಟ್ರೆನ್ಸ್ ಹಾಲ್‌ನಲ್ಲಿ ನಡೆದಿದೆ. ವೈರಲ್ ಆದ ವಿಡಿಯೊದಲ್ಲಿ, ಮಗುವಿನ ಮೇಲೆ ದಾಳಿ ಮಾಡುವ ಮೊದಲು ಈತ ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೆಯೇ ಎಂದು ಸುತ್ತಲೂ ನೋಡುತ್ತಿರುವುದು ಸೆರೆಯಾಗಿದೆ. ಯಾರು ಇಲ್ಲದಿರುವುದನ್ನು ಗಮನಿಸಿ ಮಗುವನ್ನು ಬಲವಂತವಾಗಿ ಎತ್ತಿ ನೆಲಕ್ಕೆ ಹೊಡೆದಿದ್ದಾನೆ. ನಂತರ ಮಗು ಬಿದ್ದಿದೆ ಎಂದು ಎಲ್ಲರಿಗೂ ಹೇಳುವುದು ವಿಡಿಯೊದಲ್ಲಿ ಸೆರೆಯಾಗಿದೆ.ಮಗುವಿನ ಹಲ್ಲೆ ನಡೆದಾಗ ಮಗುವಿನ ತಾಯಿ ತಳ್ಳುವ ಕುರ್ಚಿಯನ್ನು ತರಲು ಹೋಗಿದ್ದಳಂತೆ.
ವಿಡಿಯೊ ಇಲ್ಲಿದೆ ನೋಡಿ...
ಅಮೆರಿಕ-ಇಸ್ರೇಲ್ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್‌ನಿಂದ ಪಲಾಯನ ಮಾಡಿ ಅಫ್ಘಾನಿಸ್ತಾನದ ಮೂಲಕ ಪ್ರಯಾಣಿಸಿ ನಂತರ ರಷ್ಯಾಕ್ಕೆ ಬಂದಿರುವುದಾಗಿ ಮಗುವಿನ ಕುಟುಂಬವು ಹೇಳಿದೆ.ಮಗುವಿನ ಮೇಲೆ ಈ ದಾಳಿ ಯಾವ ಕಾರಣಕ್ಕಾಗಿ ನಡೆದಿರಬಹುದು ಎಂದು ತನಿಖಾಧಿಕಾರಿಗಳು ತನಿಖೆ ನಡೆಸಿದ್ದಾರೆ.
ಮಾಸ್ಕೋ ಪ್ರದೇಶದ ಮಕ್ಕಳ ಹಕ್ಕುಗಳ ಆಯುಕ್ತೆ ಕ್ಸೆನಿಯಾ ಮಿಶೋನೋವಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾಳೆ. "ಮಾದಕ ವಸ್ತುವಿನ ವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ಹಾಲ್‌ನಲ್ಲಿ ಮಗುವನ್ನು ಹಿಡಿದು ನೆಲದ ಮೇಲೆ ಎಸೆದಿದ್ದಾನೆ... ಇದೆಲ್ಲವನ್ನೂ ಸಹಿಸಿಕೊಳ್ಳುವುದು ತುಂಬಾ ಕಷ್ಟಕರ. ಬಂಧಿತ ವ್ಯಕ್ತಿಗೆ ಕಾನೂನಿನಿಂದ ಕಠಿಣ ಶಿಕ್ಷೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಮಗುವಿನ ಪೋಷಕರಿಗೆ ನ್ಯಾಯ ಸಿಗಲಿ" ಎಂದು ಮಿಶೋನೋವಾ ತಿಳಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ನೂಡೆಲ್ಸ್ ಸೂಪ್ ಬಾಕ್ಸ್ ಮನೆಗೆ ತಂದು ತೆರೆದಾಗ ಕಂಡಿದ್ದೇನು? ಶಾಕಿಂಗ್ ವಿಡಿಯೊ ವೈರಲ್
ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬೆಲಾರಸ್‌ನ 31 ವರ್ಷದ ವ್ಲಾಡಿಮಿರ್ ವಿಟ್ಕೋವ್ ಎಂದು ಗುರುತಿಸಲಾಗಿದೆ.ಮಗುವಿನ ಮೇಲೆ ದಾಳಿ ಮಾಡುವಾಗ ಆತ ಮಾದಕ ದ್ರವ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮತ್ತು ಇತರ ವರದಿಗಳು ಆತನ ಬಳಿ ಮಾದಕ ದ್ರವ್ಯಗಳು ಪತ್ತೆಯಾಗಿವೆ ಎಂದು ಹೇಳಿವೆ. ಅದೂ ಅಲ್ಲದೇ ವಿಟ್ಕೋವ್‌ಗೆ ಅದೇ ವಯಸ್ಸಿನ ಒಬ್ಬ ಮಗಳು ಕೂಡ ಇದ್ದಾಳಂತೆ. ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆ ಯತ್ನದ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ.