ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕ ಪ್ರವಾಸಿಗರ ಹುಚ್ಚಾಟ; ಪಂಚ್ ಕೋತಿಯ ಆವರಣಕ್ಕೆ ಅಕ್ರಮವಾಗಿ ನುಗ್ಗಿ ವಿಡಿಯೊ ಮಾಡಲು ಯತ್ನ

Viral Video: ಲೈಕ್ಸ್ ಹಾಗೂ ವೀವ್ಸ್‌ಗಾಗಿ ವಿಡಿಯೊ ಮಾಡಲು ಹೋಗಿ ಇಬ್ಬರು ಪ್ರವಾಸಿಗರು ಜೈಲು ಸೇರುವಂತಾಗಿದೆ. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ವೈರಲ್ ಕೋತಿ ಪಂಚ್‌ನ ಆವರಣಕ್ಕೆ ನುಗ್ಗಿದ ಇಬ್ಬರು ಅಮೆರಿಕ ಪ್ರವಾಸಿಗರನ್ನು ಜಪಾನ್‌ ಪೊಲೀಸರು ಬಂದಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಜಪಾನ್‌ನ ವೈರಲ್‌ ಕೋತಿ ಪಂಚ್‌ನ ಆವರಣಕ್ಕೆ ಭೇಟಿ ನೀಡಿದ ಪ್ರವಾಸಿಗರು

ಟೋಕಿಯೋ, ಮೇ 19: ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಬೇಕು ಎನ್ನುವ ಉದ್ದೇಶದಿಂದ ಇಂದು ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಲೈಕ್ಸ್ ಹಾಗೂ ವೀವ್ಸ್‌ಗಾಗಿ ನಿಯಮ ಉಲ್ಲಂಘಿಸಿದ ಇಬ್ಬರು ಪ್ರವಾಸಿಗರು ಜೈಲು ಸೇರುವಂತಾಗಿದೆ. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ ವೈರಲ್ ಮಂಕಿ ಪಂಚ್‌ನ ಆವರಣಕ್ಕೆ ಅಕ್ರಮವಾಗಿ ನುಗ್ಗಿದ ಇಬ್ಬರು ಅಮೆರಿಕ ಪ್ರವಾಸಿಗಳನ್ನು ಜಪಾನಿ ಪೊಲೀಸರು ಬಂದಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಜಪಾನ್‌ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯದಲ್ಲಿ ಜನಿಸಿದ ಪಂಚ್ (ಮರಿ ಕೋತಿ), ಹುಟ್ಟಿದ ಸ್ವಲ್ಪ ಸಮಯದ ನಂತರ ತನ್ನ ತಾಯಿಯಿಂದ ಬೇರ್ಪಟ್ಟಿತ್ತು. ಇದರಿಂದಾಗಿ ಕೋತಿ ಮರಿ ಪಂಚ್ ಏಕಾಂಗಿಯಾಗಿತ್ತು. ಹೀಗಾಗಿ ಮೃಗಾಲಯದ ಸಿಬ್ಬಂದಿ ಅದಕ್ಕೆ ಒರಾಂಗುಟನ್ ಗೊಂಬೆ ನೀಡಿದ್ದರು. ಅದನ್ನೇ ಕೋತಿ ತನ್ನ ತಾಯಿ ಎಂದು ಭಾವಿಸಿ ಆಟವಾಡುತ್ತಿತ್ತು. ಈ ಕೋತಿಯ ಕಣ್ಣೀರ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಇದರ ವೀಕ್ಷಣೆಗಾಗಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ವಿಡಿಯೊ ನೋಡಿ:



ಜಪಾನ್‌ನ ಪ್ರಸಿದ್ಧ ಪಂಚ್ ಇರುವ ಆವರಣದ ಒಳಗೆ ಸೂಟ್ ಧರಿಸಿ ಅಕ್ರಮವಾಗಿ ಇಬ್ಬರು ಪ್ರವಾಸಿಗರು ತೆರಳಿದ್ದರು‌. ಒಳನುಗ್ಗಿದ ವ್ಯಕ್ತಿಯನ್ನು 24 ವರ್ಷದ ರೀಡ್ ಜಹ್ನಾಯಿ ಡೇಸನ್ ಎಂದು ಗುರುತಿಸಲಾಗಿದ್ದು, ಬೇಲಿ ಹಾರಿ ಆವರಣವನ್ನು ಪ್ರವೇಶಿಸಿದ್ದಾನೆ. ಇನ್ನೊಬ್ಬ ಪ್ರವಾಸಿಗ 27 ವರ್ಷದ ನೀಲ್ ಜಬಾಹ್ರಿ ಡುವಾನ್ ಈ ಘಟನೆಯನ್ನು ಚಿತ್ರೀಕರಿಸಿದ್ದಾನೆ.

ರೀಡ್ ಜಹ್ನಾಯಿ ಡೇಸನ್​ ನೀಲಿ ಸೂಟ್ ಹಾಗೂ ಮುಖಕ್ಕೆ ದೊಡ್ಡದಾದ ಸ್ಮೈಲಿ ಎಮೋಜಿ ಮಾಸ್ಕ್ ಧರಿಸಿ ಮೃಗಾಲಯದ ಸುರಕ್ಷತಾ ಬೇಲಿಯನ್ನು ಜಿಗಿದು‌ ಪಂಜರದ ಒಳಗೆ ನುಗ್ಗಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಭಾರಿ ವೈರಲ್ ಆಗುತ್ತಿದೆ. ಘಟನೆ ನಡೆದ ಸ್ವಲ್ಪ ಸಮಯದ ನಂತರ ಮೃಗಾಲಯದ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿದ್ದಾರೆ.

ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ

ಜಪಾನ್ ಕಾನೂನಿನ ಪ್ರಕಾರ ಸಾರ್ವಜನಿಕ ಸಂಸ್ಥೆ ಅಥವಾ ಮೃಗಾಲಯದ ಆವರಣಗಳಿಗೆ ಕಾನೂನುಬಾಹಿರವಾಗಿ ತೆರಳುವುದು ಗಂಭೀರ ಅಪರಾಧ. ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ​ಅದೃಷ್ಟವಶಾತ್ ಈ ಘಟನೆಯಲ್ಲಿ ಮೃಗಾಲಯದ ಯಾವುದೇ ಪ್ರಾಣಿಗಳಿಗೆ ಗಾಯಗಳಾಗಿಲ್ಲ.‌​ ಮೃಗಾಲಯಕ್ಕೆ ಕೇವಲ ಪ್ರಚಾರಕ್ಕಾಗಿ ಹೋದ ಪ್ರವಾಸಿಗರ ವಿರುದ್ಧ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.