ದಿಸ್‌ಪುರ, ಸೆ. 11: ಮಾನವವ ನಿರ್ಲಕ್ಷ್ಯವು ಮೂಕ ಪ್ರಾಣಿಗಳ ಜೀವನಕ್ಕೆ ಹೇಗೆ ಕುತ್ತು ತರುತ್ತದೆ ಎನ್ನುವಿದಕ್ಕೆ ಈ ಘಟನೆಯೇ ಸಾಕ್ಷಿ. ಕಾಡಾನೆಯೊಂದರ ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಬಿಗಿಯಾಗಿ ಸಿಲುಕೊಕೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಅರಿತುಕೊಂಡ ಅರಣ್ಯಾಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಕೂಡಲೆ ಟೈರ್ ತೆಗೆದು ಆನೆಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಇದು ಮಾನವನ ನಿರ್ಲಕ್ಷ್ಯದಿಂದ ವನ್ಯಜೀವಿಗಳಿಗೆ ಉಂಟಾಗುವ ಗಂಭೀರ ಅಪಾಯಗಳನ್ನು ಎತ್ತಿ ತೋರಿಸಿದೆ. ಮಾನವನ ನಿರ್ಲಕ್ಷ್ಯಕ್ಕೆ ಮೂಕ ಪ್ರಾಣಿಗಳು ಹೇಗೆ ಬಲಿಯಾಗುತ್ತವೆ ಎಂಬುದನ್ನು ಈ ಘಟನೆಯೇ ಉತ್ತಮ ಸಾಕ್ಷಿ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಕಾಡಾನೆಯ ಕುತ್ತಿಗೆಗೆ ಟ್ರ್ಯಾಕ್ಟರ್ ಟೈರ್ ಸಿಲುಕಿಕೊಂಡು ಒದ್ದಾಡುತ್ತಿದೆ. ಕಾಡಾನೆ ಉಸಿರಾಟಕ್ಕೂ ಕಷ್ಟಪಡುತ್ತ ಸಾವು ಬದುಕಿನ ಮಧ್ಯೆ ಹೋರಾಟದಲ್ಲಿತ್ತು. ಕೂಡಲೇ ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಸಂಕಷ್ಟದಲ್ಲಿದ್ದ ಕಾಡಾನೆಯನ್ನು ರಕ್ಷಿಸಿದ್ದಾರೆ.
ವಿಡಿಯೊ ನೋಡಿ:
ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಗೊಲಾಘಾಟ್ ಅರಣ್ಯ ವಿಭಾಗ ಹಾಗೂ ಸ್ಥಳೀಯ ಗ್ರಾಮಸ್ಥರು ಸೇರಿ ಕಾಡಾನೆಯನ್ನು ರಕ್ಷಿಸಿದ್ದಾರೆ. ಅರಣ್ಯ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ, ಅತ್ಯಂತ ಜಾಗರೂಕತೆಯಿಂದ ಆನೆಯ ಕತ್ತಿನಲ್ಲಿದ್ದ ಟೈರ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ.
ರೀಲ್ಸ್‌ಗಾಗಿ ಸ್ಕೂಟರ್‌ನಲ್ಲಿ ಐವರ ಅಪಾಯಕಾರಿ ಪ್ರಯಾಣ
ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಹೇಗೆ ಸಿಲುಕಿಕೊಂಡಿದೆ ಎಂಬುದು ತಿಳಿದು ಬಂದಿಲ್ಲ. ಆದಾಗ್ಯೂ, ಮಾನವರು ಬಿಸಾಡುವ ಪ್ಲಾಸ್ಟಿಕ್ ಮತ್ತು ರಬ್ಬರ್ ತ್ಯಾಜ್ಯ ಗಳು ವನ್ಯಜೀವಿಗಳಿಗೆ ಎಷ್ಟೊಂದು ಮಾರಕ ಎಂಬುದು ಇದರಿಂದ ತಿಳಿದು ಬಂದಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವರು ಆಕ್ರೋಸ ವ್ಯಕ್ತಪಡಿಸಿದ್ದಾರೆ. ಒಬ್ಬರು, ʼʼಸಿಬ್ಬಂದಿಯ ಈ ರಕ್ಷಣಾ ಕಾರ್ಯಾಚರಣೆಗೆ ಮೆಚ್ಚಲೇಬೇಕುʼʼ ಎಂದರು. ಮತ್ತೊಬ್ಬರು, ʼʼಎಲ್ಲೆಡೆ ತ್ಯಾಜ್ಯವನ್ನು ಎಸೆಯುವ ಮುನ್ನ ವನ್ಯ ಜೀವಿಗಳ ಬಗ್ಗೆಯೂ ಯೋಚಿಸಿʼʼ ಎಂದು ಸಲಹೆ ನೀಡಿದರು.