ಮೊಹಾಲಿ: ಇಸ್ಪಿಟೆಲೆ ಆಡುತ್ತಿದ್ದ ವ್ಯಾಪಾರಿಗಳ ಗುಂಪಿನ ಮೇಲೆ ಗುಪ್ತಚರ ಸಂಸ್ಥೆಯ ತಂಡವು ರಿವಾಲ್ವರ್‌ಗಳನ್ನು ಹೊರತೆಗೆದು ಗುರಿಯಿಟ್ಟ ನಂತರ ಆಘಾತಜಿಂದ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಪಂಜಾಬ್‌ನ (Punjab) ಮೊಹಾಲಿಯ ಮುಲ್ಲನ್‌ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮತ್ತೊಬ್ಬ ವ್ಯಕ್ತಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗುಪ್ತಚರ ಮಾಹಿತಿಯ ನಂತರ ಸೋಮವಾರ ಮುಲ್ಲನ್‌ಪುರಕ್ಕೆ ಆಗಮಿಸಿದ ನಾಗರಿಕ ಉಡುಪಿನಲ್ಲಿದ್ದ ಐದು ಅಧಿಕಾರಿಗಳ ತಂಡವು ಆ ಪ್ರದೇಶಕ್ಕೆ ಜಮಾಯಿಸಿದ್ದರು. ಆ ಸಂದರ್ಭದಲ್ಲಿ, ಮಾರುಕಟ್ಟೆ ಮುಚ್ಚಲ್ಪಟ್ಟಿತ್ತು. ಹಲವಾರು ಸ್ಥಳೀಯ ಅಂಗಡಿಯವರು ಇಸ್ಪೀಟ್ ಕಾರ್ಡ್‌ಗಳನ್ನು ಆಡಲು ಜಮಾಯಿಸಿದ್ದರು. ಇದು ಸೋಮವಾರದಂದು ಸಾಮಾನ್ಯ ದಿನಚರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಮ್ಮನ್ನು ಪೊಲೀಸ್ ಸಿಬ್ಬಂದಿ ಎಂದು ಗುರುತಿಸಿಕೊಳ್ಳದೆ ತಂಡವು ತಮ್ಮ ಶಸ್ತ್ರಾಸ್ತ್ರಗಳನ್ನು ಹೊರತೆಗೆದಾಗ ಭಯಭೀತರಾದ ದೃಶ್ಯಗಳನ್ನು ಪ್ರತ್ಯಕ್ಷದರ್ಶಿ ರಾಜೇಶ್ ಅಲಿಯಾಸ್ ಪಮ್ಮಿ ವಿವರಿಸಿದ್ದಾರೆ. ಪೊಲೀಸರು ಎಂದು ಹೇಳದೆ ಇದ್ದಕ್ಕಿದ್ದಂತೆ ನಮ್ಮತ್ತ ರಿವಾಲ್ವರ್‌ಗಳನ್ನು ತೋರಿಸಿದರು. ದರೋಡೆಕೋರರು ದಾಳಿ ಮಾಡುತ್ತಿದ್ದಾರೆಂದು ಭಾವಿಸಿ ಎಲ್ಲರೂ ಭಯಭೀತರಾದರು ಎಂದು ಅವರು ಹೇಳಿದರು.
ಇದನ್ನೂ ಓದಿ: Heart Attack: ಆಸ್ಪತ್ರೆಯಲ್ಲಿ ರೌಂಡ್ಸ್ ವೇಳೆ ಹೃದಯಾಘಾತದಿಂದ ಮೃತಪಟ್ಟ ಹೃದ್ರೋಗ ತಜ್ಞ
ಮೃತರನ್ನು ರಾಜೇಶ್ ಕುಮಾರ್ ಸೋನಿ (55) ಎಂದು ಗುರುತಿಸಲಾಗಿದ್ದು, ಅವರು ಆಘಾತದಿಂದಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಚಂಡೀಗಢದ ಆಸ್ಪತ್ರೆಗೆ ಸಾಗಿಸಲಾಯಿತು. ಮೃತರಿಗೆ ಹೃದಯ ಕಾಯಿಲೆ ಮತ್ತು ಮಧುಮೇಹದ ಇತಿಹಾಸವಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು. ಆದರೆ, ಅಧಿಕಾರಿಗಳ ಆಕ್ರಮಣಕಾರಿ ನಡವಳಿಕೆಯು ಭಯಭೀತರಾಗಲು ಕಾರಣವಾಯಿತು. ಪರೋಕ್ಷವಾಗಿ ಸಾವಿಗೆ ಕಾರಣವಾಯಿತು ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈ ವಿಚಿತ್ರ ಘಟನೆಯು ಆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿತು. ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸುವ ಮೊದಲು ಕೋಪಗೊಂಡ ನಿವಾಸಿಗಳು ಪೊಲೀಸ್ ತಂಡದ ಇಬ್ಬರು ಸದಸ್ಯರನ್ನು ಸುತ್ತುವರೆದು ಹಲ್ಲೆ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ನಂತರ ಇಬ್ಬರು ಅಧಿಕಾರಿಗಳನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಯಿತು. ಆದರೆ ಡಿಎಸ್ಪಿ ಮುಲ್ಲನ್ಪುರ್ ಧರ್ಮವೀರ್ ಸಿಂಗ್, ಎಸ್ಪಿ (ಗ್ರಾಮೀಣ) ಮನ್ಪ್ರೀತ್ ಸಿಂಗ್ ಮತ್ತು ಮಜ್ರಿ ಮತ್ತು ಕುರಲಿ ಪೊಲೀಸ್ ಠಾಣೆಗಳ ಎಸ್‌ಎಚ್‌ಒಗಳು ಗುಂಪನ್ನು ಸಮಾಧಾನಪಡಿಸಿದರು ಎನ್ನಲಾಗಿದೆ. ತನಿಖೆಯ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಥಳೀಯರಿಗೆ ಭರವಸೆ ನೀಡಿದರು.
ಕರ್ವಾ ಚೌತ್ ದಿನ ಹೃದಯಾಘಾತದಿಂದ ಮೃತಪಟ್ಟಿದ್ದ ಮಹಿಳೆ
ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಕರ್ವಾ ಚೌತ್ ಆಚರಣೆಯ ಸಂದರ್ಭದಲ್ಲಿ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸವಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಆಘಾತಕಾರಿ ಘಟನೆ ಪಂಜಾಬ್‌ನ ಬರ್ನಾಲಾದಲ್ಲಿ ಸಂಭವಿಸಿದೆ. 59 ವರ್ಷದ ಆಶಾ ರಾಣಿ ಸ್ನೇಹಿತೆಯರೊಂದಿಗೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.