ನವದೆಹಲಿ: ಈಗ ನಿಶ್ಚಿತಾರ್ಥದಿಂದ ಹಿಡಿದು ಮದುವೆಯವರೆಗೂ ಎಲ್ಲಾ ಆಚರಣೆಯ ಫೋಟೊ ತೆಗೆಯುವುದು ಈಗಿನವರ ಕ್ರೇಜ್! ಇನ್ನು ಒಳ್ಳೆಯ ಫೋಟೊಗ್ರಾಫರ್‌ಗಾಗಿ ಲಕ್ಷಲಕ್ಷ ದುಡ್ಡು ಸುರಿಯಲು ಕೆಲವರು ಸಿದ್ಧರಿರುತ್ತಾರೆ. ಅದು ಅಲ್ಲದೇ, ಈಗ ಫೋಟೊ ಅದ್ಭುತವಾದ ಫೋಟೊ ತೆಗೆಯುವುದಕ್ಕೆ ಡ್ರೋನ್‌ಗಳು, ಅತ್ಯುತ್ತಮವಾದ ಕ್ಯಾಮೆರಾ, ಲೆನ್ಸ್‌ಗಳನ್ನು ಕೂಡ ಬಳಸುತ್ತಾರೆ. ಆದರೆ ಇಲ್ಲೊಬ್ಬ ಫೋಟೊಗ್ರಾಫರ್ ಇದ್ಯಾವುದನ್ನೂ ಉಪಯೋಗಿಸದೇ ಅದ್ಭುತವಾದ ಫೋಟೊವೊಂದನ್ನು ತೆಗೆದಿದ್ದಾನೆ. ಫೋಟೊಗ್ರಾಫರ್‌ನ ಈ ಟ್ರಿಕ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಫೋಟೊಗ್ರಾಫರ್‌ನ ಸೃಜನಶೀಲತೆಯನ್ನು ನೋಡಿ ಫುಲ್ ಫಿದಾ ಆಗಿದ್ದಾರೆ. ಏನಿದು ಸುದ್ದಿ ಎಂದು ನೀವು ಕೂಡ ಆಶ್ಚರ್ಯಪಡುತ್ತಿದ್ದೀರಾ...? ಹೌದು ವೈರಲ್ ಆದ ವಿಡಿಯೊದಲ್ಲಿ ಮದುವೆಯ ಫೋಟೊಗ್ರಾಫರ್ ಒಬ್ಬ ದಂಪತಿಯ ಫೋಟೊಗಳನ್ನು ಸೆರೆಹಿಡಿಯಲು ಅದ್ಭುತವಾದ ತಂತ್ರವನ್ನು ಬಳಸಿರುವುದು ಸೆರೆಯಾಗಿದೆ.
ವಿಡಿಯೊದಲ್ಲಿ, ವಧು-ವರರು ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಲಿಪ್ ಲಾಕ್ ಪೋಸ್‍ನಲ್ಲಿ ಕುಳಿತಿದ್ದು, ಕಾರಿನ ಎದುರಿಗೆ ದಂಪತಿಯ ಗೆಳೆಯರು ಮತ್ತು ಗೆಳತಿಯರು ತಮ್ಮ ಮೊಬೈಲ್ ಲೈಟ್‍ಗಳನ್ನು ಆನ್ ಮಾಡಿಕೊಂಡು ಕ್ಯಾಮೆರಾಗೆ ಖುಷಿಯಿಂದ ಪೋಸ್ ನೀಡಿದ್ದಾರೆ. ಫೋಟೊಗ್ರಾಫರ್ ಆ ಕ್ಷಣವನ್ನು ಸೆರೆಹಿಡಿಯಲು ಬಹಳ ಅದ್ಭುತವಾದ ಟ್ರಿಕ್ಸ್‌ವೊಂದನ್ನು ಬಳಸಿದ್ದಾನೆ. ಅದೇನಂದರೆ ಕಾರಿನ ರಿಯರ್‌ವ್ಯೂ ಮೀರರ್ ಅನ್ನು ಬಳಸಿ ದಂಪತಿಯ ಕಿಸ್ಸಿಂಗ್ ಸೀನ್ ಅನ್ನು ಹಾಗೂ ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಸ್ನೇಹಿತರ ರಿಯಾಕ್ಷನ್ ಅನ್ನು ಸೆರೆಹಿಡಿದಿದ್ದಾನೆ. ಇದು ಬಹಳ ಅದ್ಭುತವಾಗಿ ಕಾಣಿಸಿಕೊಂಡಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿಯನ್ನೂ ಓದಿ:Viral Video: ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡ ನವವಧುವಿನ ಕೊನೆಯ ವಿಡಿಯೊ ಇಲ್ಲಿದೆ ನೋಡಿ!
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು, “ಅತ್ಯಂತ ಅದ್ಭುತವಾದ ವೆಡ್ಡಿಂಗ್ ಶೂಟ್ ಐಡಿಯಾ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಇದು ಅತ್ಯುತ್ತಮ” ಎಂದು ಹೇಳಿದ್ದಾರೆ. ಇನ್ನೂ ಕೆಲವರು “ಇದು ತುಂಬಾ ಅದ್ಭುತವಾಗಿದೆ,” “ಅದ್ಭುತ ಫೋಟೋ,” ಎಂದು ಹೊಗಳಿದ್ದಾರೆ.ಈ ವಿಡಿಯೊ ಇಲ್ಲಿಯವರೆಗೆ ಸುಮಾರು 8.1 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ.