ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೊಟೇಲ್‌ಫುಡ್‌ ಪ್ರಿಯರೇ ಅಲರ್ಟ್‌... ಅಲರ್ಟ್‌! ಹೈ-ಫೈ ಹೊಟೇಲ್‌ನಲ್ಲಿ ಇಲಿಗಳದ್ದೇ ಕಾರು ಬಾರು

ಹೈದರಾಬಾದ್‌ನ ಜನಪ್ರಿಯ ಪ್ಯಾರ ಡೈಸ್ ರೆಸ್ಟೋರೆಂಟ್ ನಲ್ಲಿ ಹೊಟೇಲ್ ಆವರಣ ದೊಳಗೆ ಇಲಿಗಳು ತೆವಳುತ್ತಿದ್ದ ದೃಶ್ಯದ ಆಘಾತಕಾರಿ ವಿಡಿಯೋ ವೊಂದು ವೈರಲ್ ಆಗಿದೆ. ಅದರಲ್ಲಿ ಇಲಿಗಳು ತಿಂಡಿ ತಿನಿಸುಗಳ ಮೇಲೆಯೆ ತೆವಳುತ್ತಿರುವ ದೃಶ್ಯಗಳು ಸೆರೆಯಾಗಿದ್ದನ್ನು ಕಾಣಬಹುದು.‌

ಈ ಹೊಟೇಲ್ ಗೆ ಹೋಗುವ ಮುನ್ನ ಎಚ್ಚರ... ಎಚ್ಚರ- ವಿಡಿಯೋ ನೋಡಿ!

ಹೈದರಾಬಾದ್‌ ಹೊಟೇಲ್‌ನಲ್ಲಿ ಇಲಿಗಳು ಓಡಾಡುತ್ತಿರುವ ದೃಶ್ಯ -

Profile
Pushpa Kumari Nov 14, 2025 6:05 PM

ಹೈದರಾಬಾದ್‌: ಆರೋಗ್ಯದ ವಿಚಾರದಲ್ಲಿ ಎಷ್ಟು ನಿಗಾ ವಹಿಸಿದರೂ ಅದು ಕಡಿಮೆ ಎಂದೇ ಹೇಳಬಹುದು. ನಿತ್ಯ ಮನೆ ಅಡುಗೆ ತಿಂದು ಬೇಸರ ಅನಿಸಿದವರಿಗೆ ಹೊಟೇಲ್, ರೆಸ್ಟೋರೆಂಟ್ ಗಳಿಗೆ ಭೇಟಿ ನೀಡುವ ಮನಸ್ಸಾಗುತ್ತದೆ. ಅಲ್ಲಿ ರುಚಿಯಾದ ಊಟ ತಿಂಡಿ , ತಿನಿಸು ಸಿಕ್ಕಿದ್ದರೂ ಅವುಗಳೆಲ್ಲ ಹೈಜಿನ್ ಆಗಿವೆಯಾ ಎಂದು ಬಹುತೇಕರಿಗೆ ತಿಳಿದಿರಲಾರದು. ಸಣ್ಣ ಪುಟ್ಟ ಗೂಡಂಗಡಿ, ಹೊಟೇಲ್ ನಲ್ಲಿ ಕ್ಲೀನ್ ಇಲ್ಲ ಎಂಬ ಕಾರಣಕ್ಕೆ ವಿಡಿಯೋ ಮಾಡಿ ಅವುಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ನೈರ್ಮಲ್ಯದ ವಿಚಾರದಲ್ಲಿ ದೊಡ್ಡ ರೆಸ್ಟೋರೆಂಟ್ ಗಳು ಕೂಡ ಕಳಪೆಯಾಗಿರುತ್ತದೆ‌. ಅಂತೆಯೇ ಹೈದರಾಬಾದ್‌ನ ಜನಪ್ರಿಯ ಪ್ಯಾರಡೈಸ್ ರೆಸ್ಟೋರೆಂಟ್‌ ಆವರಣದೊಳಗೆ ಇಲಿಗಳು ತೆವಳುತ್ತಿದ್ದ ದೃಶ್ಯದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಇಲಿಗಳು ತಿಂಡಿ ತಿನಿಸುಗಳ ಮೇಲೆಯೆ ತೆವಳುತ್ತಿರುವ ದೃಶ್ಯಗಳು ಸೆರೆಯಾಗಿದ್ದನ್ನು ಕಾಣಬಹುದು.‌

ಹೈದ್ರಾಬಾದ್ ನ ಪ್ರಸಾದ್ಸ್ ಐಮ್ಯಾಕ್ಸ್ ಪಕ್ಕದಲ್ಲಿರುವ ಪ್ಯಾರಡೈಸ್ ಬಿರಿಯಾನಿ ರೆಸ್ಟೋರೆಂಟ್/ ಹೊಟೇಲ್ ನಲ್ಲಿ ಇಲಿ, ಜಿರಳೆ , ನೊಣ , ಹುಳಗಳಿರುವುದು ತಿಳಿದು ಬಂದಿದೆ. ಗ್ರಾಹಕರೊಬ್ಬರು ಇಲಿ ಇರುವ ದೃಶ್ಯವನ್ನು ತಮ್ಮ ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿದಿದ್ದಾರೆ. ಹಾಗಿದ್ದರೂ ಅಲ್ಲಿನ ಸಿಬಂದಿ ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾರೆ.

ವೈರಲ್ ವಿಡಿಯೊ ಇಲ್ಲಿದೆ:



ವೈರಲ್ ಆದ ವಿಡಿಯೋದಲ್ಲಿ ಇಲಿಯೊಂದು ಬಿರಿಯಾನಿ ಪ್ಯಾಕ್ ಮಾಡುವ ಬಾಕ್ಸ್ ನಿಂದ ಹೊರ ಬಂದಿದ್ದು ಕಾಣಬಹುದು. ಕೂಡಲೇ ಗ್ರಾಹಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ದ್ದಾರೆ. ಅಲ್ಲಿದ್ದ ಸಿಬಂದಿ ಫೋಟೋಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ, ರೆಕಾರ್ಡ್ ಮಾಡು ವುದ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಆಗ ಗ್ರಾಹಕ ಇಲ್ಲಿ ಇಲಿಗಳು ಇವೆ ಎಂದು ಹೇಳುತ್ತಾನೆ . ಕ್ಲಿಪ್‌ನಲ್ಲಿ ಇಲಿಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ, ಸಿಬ್ಬಂದಿ "ಪೆಟ್ಟಿಗೆಗಳಲ್ಲಿ ಏನೂ ಇಲ್ಲ" ಎಂದು ಹೇಳಿ ಕೊಂಡಿದ್ದಾರೆ. ಇದೀಗ ಈ ವಿಡಿಯೋವನ್ನು ಟ್ವಿಟ್ಟರ್ ಎಕ್ಸ್ ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಇದನ್ನು ಓದಿ:Viral News: ಧಾರ್ಮಿಕ ಸಾಮರಸ್ಯ ಎಂದರೆ ಇದೇನೆ; ಮುಸ್ಲಿಂ ಕುಟುಂಬದಿಂದ ಹಿಂದೂ ದೇವಸ್ಥಾನಕ್ಕೆ ಭೂಮಿ ದಾನ

1953 ರಲ್ಲಿ ಸ್ಥಾಪನೆಯಾದ ಪ್ಯಾರಡೈಸ್ ಬಿರಿಯಾನಿ ಹೈದರಾ ಬಾದ್‌ ರೆಸ್ಟೋರೆಂಟ್ ಅತ್ಯಂತ ಪ್ರಸಿದ್ಧ ಆಹಾರ ಬ್ರಾಂಡ್‌ಗಳಲ್ಲಿ ಒಂದಾಗಿದ್ದು ಖ್ಯಾತಿ ಪಡೆದಿದೆ. ಇದು ದೇಶ, ವಿದೇಶಗಳಲ್ಲಿ ಹಲ ವಾರು ಮಳಿಗೆಗಳನ್ನು ಕೂಡ ಹೊಂದಿದೆ. ಹಾಗಿದ್ದರೂ ಅವರ ಶಾಖೆಗಳಲ್ಲಿ ಆಹಾರದ ರುಚಿ, ಗುಣಮಟ್ಟ, ನೈರ್ಮಲ್ಯ ಮತ್ತು ನಿರ್ವಹಣೆ ವಿಚಾರದಲ್ಲಿ ಎಡವಿದ್ದಾರೆ. ಹೊಟೇಲ್ ಹತ್ತಿರವೇ ಚರಂಡಿ ಕೂಡ ಇದ್ದು ಅಲ್ಲಿನ ದುರ್ವಾಸನೆ ಅಸಹ್ಯಕರವಾಗಿದೆ. ಬಹುಷಃ ಇಲಿಗಳು ಕೂಡ ಈ ಹೊಟೇಲ್ ನ ಗ್ರಾಹಕರಾಗಿರ ಬಹುದು ಎಂದು ಬಳಕೆದಾರರೊಬ್ಬರು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಹಾಕಿದ್ದಾರೆ‌. ರೆಸ್ಟೋರೆಂಟ್‌ನ ಕಳಪೆ ನೈರ್ಮಲ್ಯ ಮಾನದಂಡಗಳ ಬಗ್ಗೆ ಅನೇಕರು ಅಸಹ್ಯ ಮತ್ತು ನಿರಾಶೆ ಯನ್ನು ವ್ಯಕ್ತಪಡಿಸಿದ್ದಾರೆ. ಹೈದ್ರಾಬಾದ್ ಮಾತ್ರವಲ್ಲ ಯಾವುದೇ ಹೊಟೇಲ್ ನಲ್ಲಿ ತಿನ್ನುವ ಮೊದಲು ಅಲ್ಲಿನ ಸ್ಥಿತಿ ಹೇಗಿದೆ ಎಂದು ಪರಿಶೀಲಿಸಿಕೊಳ್ಳಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಪ್ಯಾರ ಡೈಸ್ ರೆಸ್ಟೋರೆಂಟ್ ಸಿಬ್ಬಂದಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಆಹಾರ ಸುರಕ್ಷತಾ ಅಧಿಕಾರಿಗಳಿಂದ ಕಟ್ಟುನಿಟ್ಟಿನ ತಪಾಸಣೆಗೆ ಆಗಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ಆಗ್ರಹ ಕೇಳಿ ಬರುತ್ತಿದೆ.