ಲಖನೌ, ಏ. 28: ಇಂದು ಶಿಕ್ಷಣ ಕ್ಷೇತ್ರ ಎಷ್ಟೇ ಅಭಿವೃದ್ಧಿ ಹೊಂದಿದರೂ ಮದ್ಯಮ ವರ್ಗದ ಪೋಷಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಬದಲಾಗಿದೆ. ದಿನದಿಂದ ದಿನಕ್ಕೆ ಶಾಲಾ ಶುಲ್ಕಗಳು ಗಗನಕ್ಕೇರುತ್ತಿದ್ದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಶಾಲಾ ಪ್ರಾಂಶುಪಾಲೆಯೊಬ್ಬರು ಪೋಷಕರ ಮೇಲೆ ಕಿರುಚಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಶಾಲಾ ಪುಸ್ತಕ ಖರೀದಿ ವಿಚಾರವಾಗಿ ಮಗುವಿನ ಪೋಷಕರೊಬ್ಬರಿಗೆ ಶಿಕ್ಷಕಿ ಮನಬಂದಂತೆ ಬೈದಿದ್ದಾರೆ. ಸದ್ಯ ಈ ದೃಶ್ಯ ಭಾರಿ ವೈರಲ್ (Viral Video) ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಹಾರ್ಡೋಯ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲಾ ಸಾಮಗ್ರಿಗಳ ಖರೀದಿಗೆ ಸಂಬಂಧಪಟ್ಟಂತೆ ಈ ಗಲಾಟೆ ಆರಂಭವಾಗಿದೆ. ಶಾಲೆಯ ವಿದ್ಯಾರ್ಥಿಯ ಪೋಷಕರಾದ ನೀಲಂ ವರ್ಮಗೆ ಸನ್‌ಬೀಮ್ ಶಾಲೆಯ ಪ್ರಾಂಶುಪಾಲೆ ಮಮತಾ ಮಿಶ್ರಾ ಬೆದರಿಕೆ ಹಾಕಿ ಕೆಂಡ ಮಂಡಲವಾಗಿದ್ದಾರೆ. ಶಾಲಾ ಪುಸ್ತಕಗಳ ಖರೀದಿಯ ವಿಚಾರವಾಗಿ ಉಂಟಾದ ಸಣ್ಣ ಮಟ್ಟದ ಜಗಳ ತಾರಕಕ್ಕೆ ಹೋಗಿದೆ. ವಿಡಿಯೊದಲ್ಲಿ ಶಿಕ್ಷಕಿ "ನೀವು ಬಾಯಿ ಮುಚ್ಚಿಕೊಳ್ಳಿ" ಎಂದು ಕೂಗುತ್ತಿರುವುದನ್ನು ಕಾಣಬಹುದು. ವೀಕ್ಷಕರು ಈ ಶಿಕ್ಷಕಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಡಿಯೊ ನೋಡಿ:
ಉತ್ತರ ಪ್ರದೇಶದ ಹಾರ್ಡೋಯ್ ಶಾಲೆ 1,200 ಬೆಲೆಯ ನೋಟ್‌ಬುಕ್‌ಗಳನ್ನು ತಮ್ಮ ಶಾಲೆಯಲ್ಲೇ ಖರೀದಿಸಬೇಕು ಎಂದು ಪೋಷಕರಿಗೆ ತಿಳಿಸಿತ್ತು. ಇದಕ್ಕೆ ಮಗುವಿನ ಪೋಷಕರೊಬ್ಬರು ಸಮಯಾವಕಾಶ ಕೇಳಿದ್ದಕ್ಕೆ ಶಿಕ್ಷಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಂಶುಪಾಲೆ, ʼʼನೀನು ಬಾಯಿ ಮುಚ್ಚು! ಇಲ್ಲಿಂದ ನೀನು ತೊಲಗು. ನಿನ್ನ ಮಕ್ಕಳ ಹೆಸರನ್ನು ರಿಜಿಸ್ಟರ್‌ನಿಂದ ತೆಗೆದುಹಾಕಲಿದ್ದೇನೆ" ಎಂದು ಕಿರುಚಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಗೆಳೆಯನಿಗೆ ಹುಡುಗಿಯಿಂದ ಮೆಸೇಜ್; ಬೆಲ್ಟ್‌ನಲ್ಲಿ ಅಟ್ಟಾಡಿಸಿ ಹೊಡೆದ ಗೆಳತಿ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ವಿರೋಧ ತೀವ್ರಗೊಳ್ಳುತ್ತಿದ್ದಂತೆ ಮಮತಾ ಮಿಶ್ರಾ ಸ್ಪಷ್ಟೀಕರಣ ನೀಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ ನಡೆದ ಘಟನೆಯ ಒಂದು ಭಾಗವನ್ನು ಮಾತ್ರ ಸೆರೆಹಿಡಿಯಲಾಗಿದೆ. ಈ ಘಟನೆ ಸುಮಾರು ಮೂರು ಗಂಟೆಗಳ ಕಾಲ ನಡೆದಿತ್ತು. ಶಾಲಾ ಶುಲ್ಕವನ್ನು ಕಡಿಮೆ ಮಾಡಲು ಪೋಷಕರು ಪದೇ ಪದೆ ಒತ್ತಡ ಹೇರುತ್ತಿದ್ದರು ಎಂದು ಅವರು ಆರೋಪಿಸಿದರು.
ವೈರಲ್ ಕ್ಲಿಪ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು ಈಕೆಯ ಪರವಾನಗಿಯನ್ನು ರದ್ದುಗೊಳಿಸಿ ಮತ್ತು ಈ ಶಾಲೆಯನ್ನು ಮುಚ್ಚಿ. ಇವರು ಎಂತಹ ಶಿಕ್ಷಕಿ ಎಂದು ಕಿಡಿಕಾರಿದ್ದಾರೆ. ʼʼಪೋಷಕರು ಮತ್ತು ಮಕ್ಕಳು ಎದುರಿಸಿದ ಅವಮಾನದ ಬಗ್ಗೆ ಒಮ್ಮೆ ಯೋಚಿಸಿ. ಇವರು ಶಿಕ್ಷಕಿ ಎಂಬ ಹೆಸರಿಗೆಯೇ ಕಳಂಕʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.