ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lalit Modi-Vijay Mallya: ಲಂಡನ್‌ನಲ್ಲಿ ಅದ್ದೂರಿ ಪಾರ್ಟಿ; ಒಟ್ಟಿಗೆ ಹಾಡು ಹಾಡಿದ ವಿಜಯ್ ಮಲ್ಯ-ಲಲಿತ್ ಮೋದಿ; ವಿಡಿಯೊ ನೋಡಿ

Lalit Modi: ಲಂಡನ್‌ನಲ್ಲಿ ನಡೆದ ವಿಕೆಂಡ್ ಪಾರ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯರ ಗಮನ ಸೆಳೆದಿದೆ. ಯಾಕಂದ್ರೆ ಈ ಪಾರ್ಟಿಯಲ್ಲಿ ಇದ್ದವರು ಸಾಮಾನ್ಯರಲ್ಲ. ಆರ್ಥಿಕ ಅಪರಾಧಿ ಎಂದು ಘೋಷಿತರಾದ ವಿಜಯ್ ಮಲ್ಯ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಸಂಸ್ಥಾಪಕ ಲಲಿತ್ ಮೋದಿ ಇಬ್ಬರು ಒಟ್ಟಿಗೆ ಫ್ರಾಂಕ್ ಸಿನಾಟ್ರಾ ಅವರ “ಐ ಡಿಡ್ ಇಟ್ ಮೈ ವೇ” ಹಾಡನ್ನು ಹಾಡುತ್ತಿರುವ ವಿಡಿಯೊ ವೈರಲ್ ಆಗಿದೆ.

ಲಲಿತ್ ಮೋದಿ- ವಿಜಯ್ ಮಲ್ಯ

ಲಂಡನ್‌ನಲ್ಲಿ (London) ನಡೆದ ವೀಕೆಂಡ್ ಪಾರ್ಟಿಯೊಂದು (Weekend party) ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯರ ಗಮನ ಸೆಳೆದಿದೆ. ಯಾಕಂದ್ರೆ ಈ ಪಾರ್ಟಿಯಲ್ಲಿ ಇದ್ದವರು ಸಾಮಾನ್ಯರಲ್ಲ. ಆರ್ಥಿಕ ಅಪರಾಧಿ ಎಂದು ಘೋಷಿತರಾದ ವಿಜಯ್ ಮಲ್ಯ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಸಂಸ್ಥಾಪಕ ಲಲಿತ್ ಮೋದಿ (Lalit Modi). ಇಬ್ಬರು ಒಟ್ಟಿಗೆ ಫ್ರಾಂಕ್ ಸಿನಾಟ್ರಾ ಅವರ “ಐ ಡಿಡ್ ಇಟ್ ಮೈ ವೇ” ಹಾಡನ್ನು ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಲಲಿತ್ ಮೋದಿ ಸ್ವತಃ ಶೇರ್ ಮಾಡಿದ ಈ ವಿಡಿಯೋದಲ್ಲಿ, ವಿಜಯ್ ಮಲ್ಯ (Vijay Mallya) ಜತೆ ನಗುತ್ತಾ ಹಾಡುತ್ತಿರುವ ದೃಶ್ಯ ಇರುವ ವಿಡೀಯೋ ವೈರಲ್ ಆಗಿದೆ.

ಲಲಿತ್ ಮೋದಿ ಆಯೋಜಿಸಿದ ಪಾರ್ಟಿಯಲ್ಲಿ ಅವರ ಕುಟುಂಬಸ್ಥರು, ನೂರಾರು ಸ್ನೇಹಿತರು ಭಾಗಿಯಾಗಿದ್ದು, ಅವರ ಆಪ್ತ ವಲಯ ಜೊತೆ ಮೋದಿ ಎಂಜಾಯ್ ಮಾಡಿದ ಕ್ಷಣಗಳ ವಿಡಿಯೋವನ್ನು ಸ್ವತ: ಮೋದಿಯೇ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ವಿಶ್ವದ ಹಲವು ದೇಶಗಳಿಂದ ಅತಿಥಿಗಳು ಆಗಮಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಕೂಡ ಕಾಣಿಸಿಕೊಂಡಿದ್ದಾರೆ. ಮೋದಿ ಮತ್ತು ಮಲ್ಯ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ “ವಿ ಲಿವಿಂಗ್ ಇಟ್ ಅಪ್” ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ಲಲಿತ್ ಮೋದಿ ಹಂಚಿಕೊಂಡಿರುವ ವಿಡೀಯೋಗೆ ನನ್ನ ಆಪ್ತಬಳಗದೊಂದಿಗೆ ಒಂದು ದಿನ ಸಂತೋಷವಾಗಿ ಕಳೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಗೂ ಧನ್ಯವಾದ ತಿಳಿಸುತ್ತೇನೆ. ಈ ವಿಡಿಯೋ ಇಂಟರ್‌ನೆಟ್ ಹಾಗೂ ನೆಟ್ಟಿಗರ ಟೀಕೆಗೆ ಒಳಗಾಗದೇ ಇರಲಿ, ಯಾವುದೇ ವಿವಾದಾತ್ಮಕವನ್ನು ಸೃಷ್ಟಿಯಾಗದೇ ಇರಲಿ! ಎಂದು ಕ್ಯಾಪ್ಷನ್ ನೀಡಿ ಪೋಸ್ಟ್‌ ಮಾಡಿದ್ದಾರೆ.

ಮಲ್ಯ-ಲಲಿತ್‌ ವಿಡಿಯೊ ಇಲ್ಲಿದೆ

ಈ ಸುದ್ದಿಯನ್ನೂ ಓದಿ: Viral News: ಮಗನನ್ನು ವಧುವಿನಂತೆ ಅಲಂಕರಿಸಿ ಆತ್ಮಹತ್ಯೆಗೆ ಶರಣಾದ ಕುಟುಂಬ; ಇದರ ಹಿಂದಿದೆ ಅನ್ಯಾಯದ ಕಥೆ

ಲಲಿತ್ ಮೋದಿ ವಿರುದ್ಧದ ಆರೋಪಗಳು

ಐಪಿಎಲ್ ಸ್ಥಾಪಕ ಲಲಿತ್ ಮೋದಿ 2010ರಲ್ಲಿ ಭಾರತ ತೊರೆದಿದ್ದು, ಮನಿ ಲಾಂಡರಿಂಗ್, ಬಿಡ್ ಮ್ಯಾನಿಪುಲೇಷನ್ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಭಾರತ ಸರ್ಕಾರ ಅವರನ್ನು ಯುಕೆಯಿಂದ ಗಡೀಪಾರು ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. 60 ವರ್ಷದ ಲಲಿತ್ ಮೋದಿ ಈ ಆರೋಪಗಳು ರಾಜಕೀಯ ಪ್ರೇರಿತ ಎಂದು ವಾದಿಸಿದ್ದಾರೆ.

ವಿಜಯ್ ಮಲ್ಯ ವಿರುದ್ಧದ ಆರೋಪಗಳು

68 ವರ್ಷದ ವಿಜಯ್ ಮಲ್ಯ, ಯುನೈಟೆಡ್ ಬ್ರೂವರೀಸ್‌ನ ಮಾಜಿ ಅಧ್ಯಕ್ಷ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಪ್ರವರ್ತಕರಾಗಿದ್ದಾರೆ. 2016ರಲ್ಲಿ ಭಾರತ ತೊರೆದ ಅವರು ವಂಚನೆ ಮತ್ತು ಸಾಲದ ಆರೋಪಗಳಿಂದ ಆರ್ಥಿಕ ಅಪರಾಧಿ ಎಂದು ಘೋಷಿತರಾಗಿದ್ದಾರೆ. ಮಲ್ಯ ಕಳೆದ ವರ್ಷ ಎಕ್ಸ್‌ನಲ್ಲಿ, ಭಾರತದಲ್ಲಿ ತಮ್ಮಿಂದ 14,131 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡು ಬ್ಯಾಂಕ್‌ಗಳಿಗೆ ನೀಡಿದೆ ಎಂದು ಹೇಳಿದ್ದಾರೆ. ಇದು ಕಿಂಗ್‌ಫಿಶರ್ ಸಾಲಕ್ಕಿಂತ ದುಪ್ಪಟ್ಟು ಎಂದು ವಾದಿಸಿ, ಕಾನೂನು ರಕ್ಷಣೆಗಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.