ನೈನಿತಾಲ್,ಜು.2: ಯುವತಿಯರಿಗೆ ಚುಡಾಯಿಸಿದ ಕಿಡಿಗೇಡಿಗಳಿಗೆ ಗ್ರಾಮಸ್ಥರೇ ತಕ್ಕ ಪಾಠ ಮಾಡಿದ ಘಟನೆಯೊಂದು (Viral News) ನೈನಿತಾಲ್‌ನ ಮುಕ್ತೇಶ್ವರ ವಲಯದ ಸತೋಲಿ ಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳೆಂದು ಹೇಳಲಾಗುವ ಇಬ್ಬರು ಯುವಕರು ಸಂಚಾರಿಸುವಾಗ ರಸ್ತೆಯಲ್ಲಿ ಕಂಡ ಸ್ಥಳೀಯ ಯುವತಿಯರನ್ನು ನೋಡಿ ಅಸಭ್ಯ ವಾಗಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯರು ಹಾಗೂ ಸ್ಥಳೀಯರು ಸೇರಿ ತಕ್ಕ ಶಿಕ್ಷೆ ನೀಡಿದ್ದಾರೆ.
ಯುವತಿಯರು ಹಾಗೂ ಗ್ರಾಮಸ್ಥರು ಸೇರಿ ರಸ್ತೆ ಮಧ್ಯೆ ಇಬ್ಬರನ್ನು ತಡೆದಿದ್ದಾರೆ. ಕಿಡಿಗೇಡಿಗಳ ಮುಖಗಳಿಗೆ ಕಪ್ಪು ಮಸಿ ಬಳಿಯಲಾಗಿದ್ದು, ಕಾಡಿನ ಅಪಾಯಕಾರಿ ಗಿಡದಿಂದ ಮೈಗೆ ಉಜ್ಜಿ ಶಿಕ್ಷೆ ನೀಡಿದ್ದಾರೆ. ಕೆಲವರು ಚಪ್ಪಲಿಗಳಿಂದ ಸರಿಯಾಗಿ ಹೊಡೆತ ನೀಡಿದ್ದಾರೆ. ಸಾರ್ವಜನಿಕ ಶಿಕ್ಷೆಯ ನಂತರ, ಆರೋಪಿಗಳನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಇಬ್ಬರು ಆರೋಪಿಗಳನ್ನು ಸುತ್ತುವರೆದಿರುವ ಗುಂಪನ್ನು ತೋರಿಸುತ್ತವೆ. ಕಿಡೀಕೆಡಿಗಳ ಮುಖಗಳಿಗೆ ಮಸಿ ಬಳಿಯಲಾಗಿದೆ, ಹಿಮಾಲಯದ ಅಪಾಯ ಕಾರಿ ಕಾಡುಗಿಡದಿಂದ ಮೈಗೆಜ್ಜಿ ಶಿಕ್ಷಿಸಿರುವ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ನೆಟ್ಟಿಗರು ಯುವತಿಯರು ಮತ್ತು ಗ್ರಾಮಸ್ಥರ ಧೈರ್ಯವನ್ನು ಕೊಂಡಾಡಿದ್ದಾರೆ.
Viral Video: ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಬಳಕೆದಾರರೊಬ್ಬರು ಸಮುದಾಯ ಅಥವಾ ಧರ್ಮ ಯಾವುದೇ ಆಗಿರಲಿ. ಮಹಿಳೆಯರನ್ನು ಅಗೌರವಿಸುವ ಮತ್ತು ಅವರಿಗೆ ಕಿರುಕುಳ ನೀಡುವ ಇಂತವರಿಗೆ ಇದೇ ರೀತಿಯ ಶಿಕ್ಷೆ ನೀಡಬೇಕೆಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಭಾರತದ ಪ್ರತಿಯೊಂದು ಭಾಗದಲ್ಲೂ ಇಂತಹ ಎಲ್ಲಾ ಅಪರಾಧಗಳಿಗೆ ಈ ಶಿಕ್ಷೆ ನಿಗಧಿಯಾಗಬೇಕು" ಅಂದರು.